• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಮಹಾಮಾರಿ ನಮ್ಮಿಂದ ದೂರವಾಗದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

|

ವಾಷಿಂಗ್ಟನ್, ಮೇ 14: ಕೊರೊನಾ ಮಹಾಮಾರಿ ನಮ್ಮಿಂದ ಎಂದಿಗೂ ದೂರವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಮೈಕ್ ಮಾತನಾಡಿ, ''ಯಾರಾದರೂ ಕೊರೊನಾವೈರಸ್ ಕಣ್ಮರೆಯಾಗುತ್ತದೆ ಎಂದು ಭವಿಷ್ಯ ನುಡಿದರೆ ಅದನ್ನು ನಂಬಬೇಡಿ. ಒಂದೊಮ್ಮೆ ಅದಕ್ಕೆ ಲಸಿಕೆ ಕಂಡು ಹಿಡಿದರೂ ಕೂಡ ಕೊವಿಡ್ 19 ರೋಗವನ್ನು ನಿಯಂತ್ರಣಕ್ಕೆ ತರಬಹುದೇ ವಿನಃ ಅದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದ್ದಾರೆ.

ವಿಶ್ವದಾದ್ಯಂತ 3 ಲಕ್ಷ ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ, 43 ಲಕ್ಷ ಮಂದಿ ಸೋಂಕಿತರಿದ್ದಾರೆ.ಅನೇಕ ದೇಶಗಳು ವಿಭಿನ್ನ ಕ್ರಮಗಳ ಮೂಲಕ ಕೊರೊನಾದಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಚ್ಚರಿಕೆ ಉನ್ನತಪಟ್ಟದಲ್ಲಿಲ್ಲ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂತು ಮತ್ತೊಂದು ಎಚ್ಚರಿಕೆ ಸಂದೇಶ

ಲಾಕ್‌ಡೌನ್ ತೆರವುಗೊಳಿಸಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಕೆಲವು ರಾಷ್ಟ್ರಗಳು ಮುಂದಾಗಿವೆ ಆದರೆ ಇದು ಅಪಾಯದ ಹಾದಿ ಎಂದು ಎಚ್ಚರಿಕ ನೀಡಿದ್ದಾರೆ.

HIV ಕೂಡ ಹೋಗಿಲ್ಲ ನಮ್ಮ ಮಧ್ಯೆಯೇ ಇದೆ

HIV ಕೂಡ ಹೋಗಿಲ್ಲ ನಮ್ಮ ಮಧ್ಯೆಯೇ ಇದೆ

ಕೊರೊನಾವೈರಸ್ ಸ್ಥಳೀಯ ವೈರಸ್‌ ಆಗಿ ಪರಿವರ್ತನೆ ಹೊಂದಿ ನಮ್ಮ ಬಳಿಯೇ ಇರಲಿದೆ, ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಎಚ್‌ಐವಿಯನ್ನು ತೊಲಗಿಸಲು ಸಾಧ್ಯವಾಯಿತೇ ಹಾಗೆಯೇ ಕೊರೊನಾ ಕೂಡ ನಮ್ಮ ಮಧ್ಯೆ ಇರಲಿದೆ. ಯಾರಾದರೂ ಕೊರೊನಾವನ್ನು ಹೋಗಲಾಡಿಸಬಹುದು ಎಂದು ಹೇಳಿದರೆ ನಂಬಬೇಡಿ ಎಂದು ಹೇಳಿದ್ದಾರೆ.

100 ಬಗೆಯ ಲಸಿಕೆ ಸಂಶೋಧನೆ ಪ್ರಗತಿಯಲ್ಲಿದೆ

100 ಬಗೆಯ ಲಸಿಕೆ ಸಂಶೋಧನೆ ಪ್ರಗತಿಯಲ್ಲಿದೆ

ಸುಮಾರು 100 ಬಗೆಯ ಲಸಿಕೆ ಸಂಶೋಧನೆ ಪ್ರಗತಿಯಲ್ಲಿದೆ. ದಡಾರವನ್ನು ಕೂಡ ಇದುವರೆಗೆ ಹೋಗಲಾಡಿಸಲು ಸಾಧ್ಯವಾಗಿಲ್ಲ. ಅದಕ್ಕೆ ಲಸಿಕೆಯನ್ನು ಕೂಡ ಕಂಡು ಹಿಡಿಯಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಡೈರೆಕ್ಟರ್ ಜನರಲ್ ಟೆಡ್ರೋಸ್ ಮಾತನಾಡಿ ಕಷ್ಟ ಪಟ್ಟರೆ ಈ ವೈರಸ್‌ ಅನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದರು.

ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

ಎಲ್ಲವೂ ನಮ್ಮ ಕೈಯಲ್ಲಿದೆ

ಎಲ್ಲವೂ ನಮ್ಮ ಕೈಯಲ್ಲಿದೆ

ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ ಈ ಸಾಂಕ್ರಾಮಿಕ ರೋಗವನ್ನು ತಡೆಯಲು ನಾವೆಲ್ಲರೂ ಸಹಕರಿಸಬೇಕು. ಹಾಗೆಯೇ ಈ ಪಿಡುಗಿನಿಂದ ನಾವು ಹೊರಬರಲು ಸಾಕಷ್ಟು ಸಮಯ ಬೇಕು ಎನ್ನುವುದನ್ನು ಅರಿತುಕೊಳ್ಳಬೇಕು.

ಲಾಕ್‌ಡೌನ್ ತೆರವು

ಲಾಕ್‌ಡೌನ್ ತೆರವು

ಹಲವು ದೇಶಗಳಲ್ಲಿ ಕ್ರಮೇಣವಾಗಿ ಲಾಕ್‌ಡೌನ್ ತೆರವುಗೊಳಿಸಲಾಗುತ್ತಿದೆ. ತಮ್ಮ ಆರ್ಥಿಕತೆಯನ್ನು ಯಾವಾಗ ಹೇಗೆ ಆರಂಭಿಸಬೇಕು ಎನ್ನುವ ತಲೆನೋವಿದೆ. ಆದರೆ ಕೊರೊನಾ ವೈರಸ್‌ನ ಎರಡನೇ ಅಲೆ ಪ್ರಾರಂಭವಾಗುವುದಿಲ್ಲ ಎಂದು ನಂಬಲು ಕೂಡ ಯಾವುದೇ ಪುರಾವೆಗಳಿಲ್ಲ.

English summary
The coronavirus "may never go away", the World Health Organization (WHO) has warned.peaking at a briefing on Wednesday, WHO emergencies director Dr Mike Ryan warned against trying to predict when the virus would disappear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X