ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಬಲಿ: 5 ಸಾವಿರ ಗಡಿ ದಾಟಿದ ಅಮೆರಿಕಾ ಸಾವಿನ ಸಂಖ್ಯೆ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 2: ಕೊರೊನಾದಿಂದ ಅಮೆರಿಕದ ಪರಿಸ್ಥಿತಿ ದಿನೇ ದಿನೇ ಹಾಳಾಗುತ್ತಿದೆ. ಕೊರೊನಾ 5 ಸಾವಿರ ಅಮೆರಿಕನರನ್ನು ಬಲಿ ಪಡೆದುಕೊಂಡು ಕೇಕೆ ಹಾಕಿ ಮುಂದೆ ಹೋಗುತ್ತಿದೆ.

Recommended Video

ಡಿ ಬಾಸ್ ಮಾನವೀಯತೆಯನ್ನು ಮನಸಾರೆ ಹೊಗಳಿದ ಪ್ರತಾಪ್ ಸಿಂಹ | Oneindia Kannada

ಇಂದಿಗೆ ಅಮೆರಿಕದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 5 ಸಾವಿರ ದಾಟಿದೆ. ಮಂಗಳವಾರ ಒಂದೇ ದಿನ 865 ಮಂದಿ ಮರಣ ಹೊಂದಿದ್ದಾರೆ. ಆರು ತಿಂಗಳ ಮಗು ಕೂಡ ಕೊರೊನಾಗೆ ಬಲಿಯಾಗಿದೆ. ಎಎಫ್‌ಸಿ ಸುದ್ದಿ ಸಂಸ್ಥೆಯ ಪ್ರಕಾರ ಕೊರೊನಾದಿಂದ ಮರಣ ಹೊಂದಿದ ಅತಿ ಚಿಕ್ಕ ವಯಸ್ಸಿನ ಪ್ರಕರಣ ಇದಾಗಿದೆ.

ಅಮೆರಿಕದಲ್ಲಿ 6 ವಾರಗಳ ಹಸುಗೂಸು ಕೊರೊನಾ ವೈರಸ್‌ಗೆ ಬಲಿ ಅಮೆರಿಕದಲ್ಲಿ 6 ವಾರಗಳ ಹಸುಗೂಸು ಕೊರೊನಾ ವೈರಸ್‌ಗೆ ಬಲಿ

ಅಮೆರಿಕಾದ ಸೋಂಕಿತರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸರ್ಕಾರ ಅದನ್ನು ನಿಯಂತ್ರಣ ಮಾಡಲು ಆಗುತ್ತಲೇ ಇಲ್ಲ. ಅಮೆರಿಕಾದಲ್ಲಿ ಸದ್ಯ 2 ಲಕ್ಷ ಜನರಿಗೆ ಕೊರೊನಾ ಪಾಸಿಟಿವ್‌ ಇದೆ ಎನ್ನುವುದು ದೃಢವಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸೋಂಕಿತರು ಇಲ್ಲಿ ಇದ್ದಾರೆ.

Coronavirus In America 5000 Crossed Death Number

ಮತ್ತೊಂದು ಕಡೆ ವಿಶ್ವದಾದ್ಯಂತ ಕೊರೊನಾ ಸೋಂಕು ತಗುಲಿರುವವರ ಸಂಖ್ಯೆ 10 ಲಕ್ಷ ದಾಟುತ್ತಿದೆ. ಸದ್ಯ, ಜಗತ್ತಿನ 9 ಲಕ್ಷದ 35 ಸಾವಿರ ಜನರಿಗೆ ಕೊರೊನಾ ವೈರಸ್‌ ಪತ್ತೆಯಾಗಿದೆ. ಅಮೆರಿಕಾದ ನಂತರ ಸ್ಥಾನದಲ್ಲಿ ಇಟಲಿ ಹಾಗೂ ಸ್ಪೇನ್ ರಾಷ್ಟ್ರಗಳು ಇವೆ. ಇಟಲಿಯಲ್ಲಿ 1 ಲಕ್ಷ 10 ಸಾವಿರ ಹಾಗೂ ಸ್ಪೇನ್‌ನಲ್ಲಿ 1 ಲಕ್ಷ ಸೋಂಕಿತರು ಇದ್ದಾರೆ.

ಡೊನಾಲ್ಡ್ ಟ್ರಂಪ್‌ ಹೇಳಿಕೆಗೆ ಬೆಚ್ಚಿ ಬಿದ್ದ ಅಮೆರಿಕದ ನಾಗರಿಕರು..!ಡೊನಾಲ್ಡ್ ಟ್ರಂಪ್‌ ಹೇಳಿಕೆಗೆ ಬೆಚ್ಚಿ ಬಿದ್ದ ಅಮೆರಿಕದ ನಾಗರಿಕರು..!

ಕೊರೊನಾ ವೈರಸ್‌ ಹುಟ್ಟಿದ ಚೀನಾದಲ್ಲಿಯೇ 81 ಸಾವಿರ ಸೋಂಕಿತರು ಇದ್ದಾರೆ. ಚೀನಾವನ್ನು ಅಮೆರಿಕ, ಇಟಲಿ ಹಾಗೂ ಸ್ಪೇನ್ ದೇಶಗಳು ಹಿಂದಕ್ಕೆ ಹಾಕಿವೆ.

English summary
Coronavirus in America 5000 crossed death number. Highest deaths in world. infected people are crossed 2 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X