ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ 3,000 ಜನರ ಬಲಿ ಪಡೆದ ಮಹಾಮಾರಿ ಕೊರೊನಾ!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 31: ಅಮೆರಿಕದಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಇತ್ತೀಚಿನ ವರದಿಗಳ ಪ್ರಕಾರ 3,000ಕ್ಕಿಂತ ಹೆಚ್ಚು ಜನರು ಅಲ್ಲಿ ಮೃತಪಟ್ಟಿದ್ದಾರೆ.

ಸೋಮವಾರ ಅಮೆರಿಕಾದಲ್ಲಿ ಈ ಮಾರಕ ವೈರಸ್ ಗೆ 540 ಜನರು ಬಲಿಯಾಗಿದ್ದು, ಒಟ್ಟಾರೆ ಸಾವಿನ ಪ್ರಮಾಣ 3,165ಕ್ಕೆ ಏರಿಕೆಯಾಗಿದೆ. ಆ ಮೂಲಕ ದೇಶದಲ್ಲಿ 1.65 ಲಕ್ಷ ಜನ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ಕೇಂದ್ರವಾಗಿರುವ ನ್ಯೂಯಾರ್ಕ್ ನಗರ ಕೂಡ ಅಕ್ಷರಶಃ ಕುಸಿದು ಬಿದ್ದಿದ್ದು ಸೋಂಕಿತರ ಪ್ರಮಾಣದ ಏರಿಕೆಯಾಗುತ್ತಲೇ ಇದೆ.

ವುಹಾನ್ ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ: ಅಸಲಿ ಸಾವಿನ ಪ್ರಮಾಣ ಎಷ್ಟು?ವುಹಾನ್ ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ: ಅಸಲಿ ಸಾವಿನ ಪ್ರಮಾಣ ಎಷ್ಟು?

ಸೋಂಕಿತರ ಪ್ರಮಾಣ ಇತರ ದೇಶಗಳಿಗಿಂತ ಅಮೆರಿಕಾದಲ್ಲೇ ಹೆಚ್ಚಿದೆ. 1 ಮಿಲಿಯನ್ ಗಿಂತಲೂ ಹೆಚ್ಚು ಜನರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

Coronavirus In America: 3000 Crossed Death Number

ನ್ಯೂಯಾರ್ಕ್ ನ ನಂತರ ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್-19 ಅಟ್ಟಹಾಸ ಮೆರಯುತ್ತಿದ್ದು ಜನರು ಕಂಗಾಲಾಗಿದ್ದಾರೆ. ಸೋಂಕಿತರ ಪ್ರಮಾಣ ಕೂಡ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ.

English summary
Coronavirus In America: 3000 Crossed Death Number. In New york City Maximum Deaths. 1011 people died by coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X