ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಗಾಳಿಯಿಂದಲೂ ಹರಡುತ್ತೆ ಎಂದು ಒಪ್ಪಿಕೊಂಡ WHO

|
Google Oneindia Kannada News

ಜಿನೇವಾ, ಜುಲೈ 8: ಕೊರೊನಾ ಸೋಂಕು ಗಾಳಿಯಿಂದಲೂ ಹಡರುತ್ತದೆ ಎನ್ನುವ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ.

Recommended Video

MOJ replaces TIK TOK | Oneindia Kannada

ಕೊರೊನಾ ಸೋಂಕು ಗಾಳಿಯಿಂದಲೂ ಹರಡುತ್ತಿದೆ ಎನ್ನುವುದಕ್ಕೆ ಪುರಾವೆಗಳಿವೆ, ಸಾಂಕ್ರಾಮಿಕ ರೋಗ ಮತ್ತಷ್ಟು ವೇಗಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿ

ವಿಶ್ವದ 239 ವಿಜ್ಞಾನಿಗಳು ಕೊರೊನಾ ಸೋಂಕು ಗಾಳಿಯಿಂದಲೂ ಹರಡಬಲ್ಲದು ಎಂದು ಹೇಳಿಕೆ ನೀಡಿದ ಒಂದೇ ದಿನದಲ್ಲಿ ವಿಶ್ವ ಸಂಸ್ಥೆ ಅವರ ಮಾತನ್ನು ಒಪ್ಪಿಕೊಂಡಿದೆ. ಸೋಂಕು ಹೇಗೆ ಹರಡುತ್ತದೆ ಎಂಬುದನ್ನು ಮತ್ತೊಮ್ಮೆ ಪರಿಷ್ಕರಿಸಬೇಕಿದೆ, ಬಳಿಕ ಸರಿಯಾದ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದೆ.

ಎರಡು ಮೀಟರ್ ಅಂತರವಿರಬೇಕು

ಎರಡು ಮೀಟರ್ ಅಂತರವಿರಬೇಕು

ಪ್ರತಿಯೊಬ್ಬರು ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು.ಈಗಾಗಲೇ ಕೊರೊನಾ ಸೋಂಕಿನಿಂದ 5,38,000 ಮಂದಿ ಮೃತಪಟ್ಟಿದ್ದಾರೆ. 11.6 ಮಿಲಿಯನ್ ಮಂದಿ ಕೊರೊನಾ ಸೋಂಕಿತರಿದ್ದಾರೆ. ವಿಶ್ವದಾದ್ಯಂತ ಸೋಂಕು ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ವಾರಾಂತ್ಯದಲ್ಲಿ 400000 ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ.

ವಿಜ್ಞಾನಿಗಳು ಹೇಳಿದ್ದೇನು?

ವಿಜ್ಞಾನಿಗಳು ಹೇಳಿದ್ದೇನು?

ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ. ಇಷ್ಟು ದಿನ ವೈದ್ಯರು ಕೊರೊನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಮಾತ್ರ ಹರಡುತ್ತದೆ. ಎಂದು ಹೇಳಿದ್ದರು. ಈಗ ಗಾಳಿಯ ಮುಖಾಂತರವೂ ಹರಡಲಿದೆ ಎಂಬ ಮಾಹಿತಿ ನಿಜಕ್ಕೂ ಎಲ್ಲರಲ್ಲಿ ಆತಂಕ ಮೂಡಿಸಿದೆ. ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ 32 ದೇಶಗಳ 239 ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದು ಕೊರೋನಾ ರೋಗದ ಸೋಂಕು ಗಾಳಿಯ ಮುಖಾಂತರವೂ ಹರಡಲಿದೆ. ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಗಾಳಿಯಿಂದಲೂ ಸೋಂಕು

ಗಾಳಿಯಿಂದಲೂ ಸೋಂಕು

ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಶೇಷವಾಗಿ ಕಳೆದ ಎರಡು ತಿಂಗಳುಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಾಯು ಮುಖಾಂತರ ಪ್ರಸರಣವಾಗುವ ಬಗ್ಗೆ ಸಾಧ್ಯವಾದಷ್ಟು ಪರಿಗಣಿಸಿದ್ದೇವೆ. ಆದರೆ, ಈವರೆಗೆ ನಮಗೆ ದೃಢವಾದ ಅಥವಾ ಸ್ಪಷ್ಟವಾದ ಪುರಾವೆಗಳು ಲಭಿಸಿಲ್ಲ ಎಂದು ಡಬ್ಲ್ಯುಎಚ್‌ಒ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ತಾಂತ್ರಿಕ ಪ್ರಮುಖ ಡಾ. ಬೆನೆಡೆಟ್ಟಾ ಅಲೆಗ್ರಾಂಜಿ ಅಭಿಪ್ರಾಯಪಟ್ಟಿದ್ದಾರೆ.

ವ್ಯಕ್ತಿಯಿಂದ ವ್ಯಕ್ತಿಗೆ ಮಾತ್ರ ಹರಡುತ್ತೆ ಎಂದು ಆರೋಗ್ಯ ಸಂಸ್ಥೆ

ವ್ಯಕ್ತಿಯಿಂದ ವ್ಯಕ್ತಿಗೆ ಮಾತ್ರ ಹರಡುತ್ತೆ ಎಂದು ಆರೋಗ್ಯ ಸಂಸ್ಥೆ

ಕೊರೊನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಮಾತ್ರ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ವ್ಯಕ್ತಿ ಸೀನಿದಾಗ, ಮತ್ತೊಬ್ಬರ ಜೊತೆ ಮಾತನಾಡುತ್ತಾ ಆತನ ಎಂಜಿಲು ಮತ್ತೊಬ್ಬರನ್ನು ಸೋಕಿದಾಗ ಇದು ಹರಡುತ್ತದೆ ಎಂದು ಹೇಳಲಾಗಿತ್ತು. ಆದರೆ ವೈರಸ್ ಗಾಳಿಯಿಂದ ಹರಡುತ್ತದೆ ಎಂದರೆ ನಂಬಲು ಸಾರ್ಧಯವಿಲ್ಲ ಎಂದು ಹೆಲ್ತ್ ಏಜೆನ್ಸಿಗಳು ಹೇಳಿವೆ.

English summary
The WHO pointed Tuesday to "emerging evidence" that the coronavirus might spread by air further than previously thought, and warned the pandemic was still accelerating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X