ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೂಪಾಂತರಗಳು ಗಾಳಿಯಲ್ಲಿ ಹರಡಬಲ್ಲಷ್ಟು ಸಮರ್ಥವಾಗಿವೆ; ಅಧ್ಯಯನ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 21: ಕೊರೊನಾ ರೂಪಾಂತರಿಗಳು ಗಾಳಿಯಲ್ಲಿ ಹರಡಬಲ್ಲಷ್ಟು ಸಮರ್ಥವಾಗುತ್ತಿವೆ. ಹೀಗಾಗಿ ಜನರು ಕೊರೊನಾ ಲಸಿಕೆಯನ್ನು ಪಡೆಯುವುದರ ಜೊತೆಗೆ ಬಿಗಿಯಾಗಿ ಮಾಸ್ಕ್‌ ಧರಿಸುವುದು ಹಾಗೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ವಾಷಿಂಗ್ಟನ್‌ನಲ್ಲಿ ನಡೆದ ಈಚಿನ ಅಧ್ಯಯನವೊಂದು ತಿಳಿಸಿದೆ.

ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹದಲ್ಲಿ ಈ ರೂಪಾಂತರಗಳು ಸಕ್ರಿಯವಾಗಿರುವುದು ಕಂಡುಬಂದಿದೆ. ಜೊತೆಗೆ ಗಾಳಿಯಲ್ಲಿ ಹರಡುವ ಸಾಮರ್ಥ್ಯವನ್ನು ಇವು ಹೆಚ್ಚಿಸಿಕೊಳ್ಳುತ್ತಿವೆ ಎಂದು ಅಧ್ಯಯನ ಹೇಳಿದೆ.

'ಸ್ಥಳೀಯ ಮಟ್ಟದ ಸೋಂಕಿನ ಉಲ್ಬಣ 3ನೇ ಅಲೆಗೆ ಕಾರಣವಾಗಬಹುದು''ಸ್ಥಳೀಯ ಮಟ್ಟದ ಸೋಂಕಿನ ಉಲ್ಬಣ 3ನೇ ಅಲೆಗೆ ಕಾರಣವಾಗಬಹುದು'

ಅಮೆರಿಕ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ನಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಕೊರೊನಾ ಸೋಂಕಿತರು ಉಸಿರಾಡುವ ಗಾಳಿಯಲ್ಲಿ ಸೋಂಕು ಇರುತ್ತದೆ ಹಾಗೂ ಗಾಳಿ ಮೂಲಕ ಬೇರೆಯವರಿಗೂ ಸುಲಭವಾಗಿ ತಗುಲುತ್ತದೆ. ಆಲ್ಫಾ ರೂಪಾಂತರ ಸೋಂಕು 43-100 ಪಟ್ಟು ಹೆಚ್ಚಿನ ವೇಗದಲ್ಲಿ ಗಾಳಿಯ ಮೂಲಕ ಮತ್ತೊಬ್ಬರಿಗೆ ಹರಡಬಲ್ಲದು ಎಂದು ಅಧ್ಯಯನ ವರದಿ ಹೇಳಿದೆ.

 Coronavirus Evolving To Get Better At Becoming Airborne Says Study

'ಜರ್ನಲ್ ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್‌'ನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದ್ದು, 'ಮಾಸ್ಕ್‌ ಧರಿಸುವುದರಿಂದ ಸೋಂಕಿತರ ಮೂಲಕ ಸೋಂಕಿನ ಕಣ ಗಾಳಿಯಲ್ಲಿ ಹರಡುವುದನ್ನು ಅರ್ಧದಷ್ಟು ತಪ್ಪಿಸಬಹುದು' ಎಂದು ಮೇರಿಲ್ಯಾಂಡ್‌ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ ವಿಭಾಗದ ಪ್ರೊ. ಡಾನ್ ಮಿಲ್ಟನ್ ಹೇಳಿದ್ದಾರೆ.

ಆಲ್ಫಾ ಗಾಳಿಯಲ್ಲಿ ಹೆಚ್ಚು ವೇಗಿಯಾಗಿ ಹರಡಬಲ್ಲದು. ಡೆಲ್ಟಾ ರೂಪಾಂತರ ಆಲ್ಫಾಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ. ಹೀಗಾಗಿ ಮಾಸ್ಕ್‌ ಧಾರಣೆ ಅತ್ಯವಶ್ಯಕ ಎಂದು ಹೇಳಿದೆ.

ಜ್ವರ, ಕೆಮ್ಮು, ನೆಗಡಿ ಎಲ್ಲಾ ಕೊರೊನಾವೈರಸ್ ಅಲ್ಲ!?: ಇಲ್ಲಿದೆ ಸರಿಯಾದ ಅಂಕಿ-ಅಂಶಜ್ವರ, ಕೆಮ್ಮು, ನೆಗಡಿ ಎಲ್ಲಾ ಕೊರೊನಾವೈರಸ್ ಅಲ್ಲ!?: ಇಲ್ಲಿದೆ ಸರಿಯಾದ ಅಂಕಿ-ಅಂಶ

ಮೂಗಿನ ದ್ರವ ಹಾಗೂ ಎಂಜಿಲಿನ ಮೂಲಕ ಸೋಂಕು ಹರಡುವುದಕ್ಕಿಂತ ಹೆಚ್ಚಾಗಿ ಆಲ್ಫಾ ಗಾಳಿಯಲ್ಲಿ ಹರಡುವ ಪ್ರಮಾಣ 18 ಪಟ್ಟು ಹೆಚ್ಚಾಗಿರುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ. ಮೂಗಿನ ದ್ರವ ಅಥವಾ ಎಂಜಿಲಿನಿಂದ ಸೋಂಕು ಹರಡುವುದನ್ನು ತಡೆಯಬಹುದು. ಆದರೆ ಗಾಳಿಯಲ್ಲಿ ಹರಡುವುದು ಅಪಾಯಕಾರಿಯಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.

 Coronavirus Evolving To Get Better At Becoming Airborne Says Study

ಕೊರೊನಾ ಸೋಂಕು ಗಾಳಿಯಲ್ಲಿ ಒಬ್ಬ ವ್ಯಕ್ತಿಯಿಂದ ಎಷ್ಟು ಅಂತರದವರೆಗೆ ಉಪಸ್ಥಿತವಿರಬಹುದು ಎಂಬ ಕುರಿತು ಈ ಹಿಂದೆ ಕೆಲವು ಅಧ್ಯಯನಗಳನ್ನು ನಡೆಸಲಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆ, ಕೊರೊನಾ ಸೋಂಕಿತ ವ್ಯಕ್ತಿಯ ಸುತ್ತ 10 ಅಡಿ ಅಥವಾ 3.048 ಮೀಟರ್ ಅಂತರದವರೆಗೂ ಗಾಳಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಬಹುದು ಎಂದು ತಿಳಿಸಿದೆ.

ಒಳಾಂಗಣ ಪರಿಸರದಲ್ಲಿ ಉಗುಳಿನ ಹನಿಗಳು ಗಾಳಿಯಲ್ಲಿ ಅಧಿಕ ಮಟ್ಟದಲ್ಲಿ ಶೇಖರಣೆಯಾಗಬಲ್ಲವು. ಈ ಹನಿಯಲ್ಲಿನ ಕೊರೊನಾ ವೈರಸ್ ಗಂಭೀರ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಮತ್ತೊಂದು ಅಧ್ಯಯನ ತಿಳಿಸಿದೆ.

ಸೋಂಕಿತರ ಎಂಜಲು ಅಥವಾ ಮೂಗಿನ ದ್ರವವು ಎರಡು ಮೀಟರ್ ಅಂತರದಲ್ಲಿ ನೆಲದ ಮೇಲೆ ಅಥವಾ ಇನ್ನಾವುದೇ ಮೇಲ್ಮೈಗೆ ಬಿದ್ದರೆ ಆ ಕಣಗಳು ಹತ್ತು ಮೀಟರ್‌ವರೆಗೂ ಗಾಳಿಯಲ್ಲಿ ಪಸರಿಸಬಲ್ಲವು ಎಂದು ಸರ್ಕಾರದ ಕೊರೊನಾ ಮಾರ್ಗಸೂಚಿಯಲ್ಲಿಯೂ ತಿಳಿಸಲಾಗಿತ್ತು. ಹೋಟೆಲ್, ಬಾರ್, ರೆಸ್ಟೊರೆಂಟ್‌ಗಳು ಸಾಮಾನ್ಯವಾಗಿ ಒಳಾಂಗಣದಲ್ಲಿರುವುದರಿಂದ ವೈರಸ್‌ಗಳ ಹರುಡುವಿಕೆ ಅತಿ ವೇಗವಾಗಿರುತ್ತದೆ. ಜನರು ಹೆಚ್ಚಿರುವ ಕಡೆಗಳಿಂದ ದೂರವುಳಿಯುವುದು ಒಳಿತು ಎಂದು ಸಲಹೆ ನೀಡಲಾಗಿತ್ತು.

ಇದೀಗ ಮತ್ತೆ ಅದೇ ಅಂಶವನ್ನು ಉಲ್ಲೇಖಿಸಿದ್ದು, ಹೆಚ್ಚು ಜಾಗರೂಕವಾಗಿರುವಂತೆ ಸೂಚಿಸಲಾಗಿದೆ.

English summary
The variants of SARS-CoV-2 are getting better at travelling through the air, says new study in washington
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X