ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಕೊರೊನಾ ರಣಕೇಕೆ: 1 ಲಕ್ಷದ ಸನಿಹಕ್ಕೆ ಸಾವಿನ ಸಂಖ್ಯೆ

|
Google Oneindia Kannada News

ವಾಷಿಂಗ್ಟನ್, ಮೇ 26: ಕೊರೊನಾ ವೈರಸ್‌ ಇಡೀ ವಿಶ್ವಕ್ಕೆ ಮಾರಕವಾಗಿದೆ. ಲಕ್ಷಾಂತರ ಜನರ ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ. ಸಾವಿನ ಸಂಖ್ಯೆ ಇನ್ನೂ ಏರುತ್ತಲೆ ಇದೆ. ಪ್ರಸ್ತುತ ವಿಶ್ವಾದ್ಯಂತ 3.4 ಲಕ್ಷ ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

Recommended Video

ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

ಇದರಲ್ಲಿ ಅಮೆರಿಕದಲ್ಲಿ ಮಾತ್ರ ಒಂದು ಲಕ್ಷ ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಸಹಜವಾಗಿ ಯುಎಸ್‌ಗೆ ಭಾರಿ ನಷ್ಟವನ್ನುಂಟು ಮಾಡಿದೆ. ಒಂದು ಲಕ್ಷಕ್ಕೆ ನಿಂತಿಲ್ಲ, ನಿಲ್ಲುವಂತೆ ಕಾಣುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ ಎಂಬುದು ನಿರಾಳ ಅಷ್ಟೇ.

ಯುಎಸ್‌ನಲ್ಲಿ ಯಾವ ಯಾವ ನಗರಗಳು ಕೊರೊನಾ ವೈರಸ್‌ ಕೆಂಗಣ್ಣಿಗೆ ಬಲಿಯಾಗಿದೆ ಎಂದು ನೋಡುವುದಾರೇ, ದೇಶದ ಪ್ರಮುಖ ಪ್ರದೇಶಗಳಲ್ಲೇ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಮೆರಿಕ ಅಂಕಿ ಅಂಶದ ವಿವರ ಇಲ್ಲಿದೆ. ಮುಂದೆ ಓದಿ....

ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ? ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?

98.8 ಸಾವಿರ ಜನರು ಸಾವು

98.8 ಸಾವಿರ ಜನರು ಸಾವು

ಮೇ 25ರ ವರದಿಯಂತೆ ಯುಎಸ್‌ನಲ್ಲಿ ಈವರೆಗೂ 98,805 ಮಂದಿ ಕೊರೊನಾ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 1,706,226 ಕೇಸ್‌ಗಳು ದಾಖಲಾಗಿದೆ. ಬಹುಶಃ ಇಂದಿನ ವರದಿ ಬರುವ ವೇಳೆಗೆ ಅಮೆರಿಕದಲ್ಲಿ ಒಂದು ಲಕ್ಷ ಸಾವು ದಾಖಲಾಗಿರುತ್ತೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕಂದ್ರೆ, ಪ್ರತಿದಿನದ ಲೆಕ್ಕಾಚಾರ ಗಮನಿಸಿದರೆ ಮೇ 26ಕ್ಕೆ ಅಮೆರಿಕದಲ್ಲಿ ಸಾವನ ಸಂಖ್ಯೆ ಒಂದು ಲಕ್ಷ ಗಡಿ ದಾಟಲಿದೆ.

ನ್ಯೂಯಾರ್ಕ್‌ನಲ್ಲಿ ಹೆಚ್ಚು ಸಾವು

ನ್ಯೂಯಾರ್ಕ್‌ನಲ್ಲಿ ಹೆಚ್ಚು ಸಾವು

ಅಮೆರಿದ ಹೃದಯ ಭಾಗ ನ್ಯೂಯಾರ್ಕ್ ನಗರದಲ್ಲಿ ಹೆಚ್ಚು ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 372,494 ಜನರಿಗೆ ನ್ಯೂಯಾರ್ಕ್‌ನಲ್ಲಿ ವೈರಸ್ ಅಂಟಿಕೊಂಡಿದೆ. ಆದರೆ, 29,310 ಜನರು ಸಾವನ್ನಪ್ಪಿದ್ದಾರೆ. ಯುಎಸ್‌ ನಗರಗಳ ಪೈಕಿ ನ್ಯೂಯಾರ್ಕ್‌ನಲ್ಲೆ ಹೆಚ್ಚು ಸಾವು ಸಂಭವಿಸಿದೆ.

ನ್ಯೂಜೆರ್ಸಿಯಲ್ಲಿ 11 ಸಾವಿರ ಸಾವು

ನ್ಯೂಜೆರ್ಸಿಯಲ್ಲಿ 11 ಸಾವಿರ ಸಾವು

ನ್ಯೂಯಾರ್ಕ್‌ನಷ್ಟೆ ಪ್ರಮುಖ ನಗರ ನ್ಯೂಜೆರ್ಸಿ. ಇಲ್ಲಿ 11,155 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲಿನಾಯ್ಸ್ 4,884 ಜನ, ಕ್ಯಾಲಿಫೋರ್ನಿಯಾದಲ್ಲಿ 3,809 ಮಂದಿ, ಮ್ಯಾಸಚೂಸೆಟ್ಸ್ 6,416 ಜನರು, ಪೆನ್ಸಿಲ್ವೇನಿಯಾ 5,178 ಮಂದಿ, ಮಿಚಿಗನ್ 5,240 ಜನರು, ಕನೆಕ್ಟಿಕಟ್‌ನಲ್ಲಿ 3,742 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವೇಗ ಹೆಚ್ಚಿಸಿದ ಬ್ರೆಜಿಲ್

ವೇಗ ಹೆಚ್ಚಿಸಿದ ಬ್ರೆಜಿಲ್

ಯುಎಸ್ ಬಿಟ್ಟರೆ ಯುಕೆಯಲ್ಲಿ ಹೆಚ್ಚು ಸಾವು ಸಂಭವಿಸಿದೆ. ಯುಕೆಯಲ್ಲಿ 36,914 ಜನರು ಕೊರೊನಾದಿಂದ ಸತ್ತಿದ್ದಾರೆ. ಈಗ ಯುನೈಟೆಡ್ ಕಿಂಗ್‍ಡಮ್ ನಿಯಂತ್ರಣದಲ್ಲಿದೆ. ಇಟಲಿಯಲ್ಲಿ 32,877 ಜನರ ಸಾವು ವರದಿಯಾಗಿದೆ. ಸ್ಪೇನ್‌ನಲ್ಲಿ 26,837 ಮಂದಿ ಮೃತಪಟ್ಟಿದ್ದಾರೆ. ಫ್ರಾನ್ಸ್‌ನಲ್ಲಿ 28,432 ಹಾಗೂ ಜರ್ಮನಿಯಲ್ಲಿ 8,428 ಜನರು ಸಾವನ್ನಪ್ಪಿದ್ದಾರೆ. ಈಗ ವಿಶ್ವದ ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ಬ್ರೆಜಿಲ್‌ನಲ್ಲಿ 23,522 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಬ್ರೆಜಿಲ್ (376,669) ಎರಡನೇ ಸ್ಥಾನಕ್ಕೆ ಬಂದಿದೆ.

English summary
America is very close to reach 1 lakh COVID 19 death. at now 99,805 people died in US. end of today death toll rises to lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X