ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಕೊರೊನಾ ಸೋಂಕಿತರು ಹೆಚ್ಚಿದ್ದರೂ ಸಾವಿನ ಸಂಖ್ಯೆ ಕಡಿಮೆ!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 27: ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಕೂಡ ಸಾವಿನ ಸಂಖ್ಯೆ ಅತಿ ವಿರಳ. ನ್ಯೂಯಾರ್ಕ್‌ನಲ್ಲಿ ಒಂದೇ ದಿನ 115 ಮಂದಿ ಮೃತಪಟ್ಟಿದ್ದು, ನ್ಯೂಯಾರ್ಕ್‌ನಲ್ಲಿ ಸಾವಿನ ಸಂಖ್ಯೆ 385ಕ್ಕೆ ಏರಿಕೆಯಾಗಿದೆ.

ಅಮೆರಿಕದ ನ್ಯೂಯಾರ್ಕ್ ಕೊರೊನಾ ವೈರಸ್‌ನ ಕೇಂದ್ರ ಬಿಂದುವಾಗಿದೆ. ಒಟ್ಟು 37,258 ಮಂದಿ ಕೊರೊನಾ ಸೋಂಕಿತರಿದ್ದಾರೆ. ಆದರೂ ಕೇವಲ 385 ಮಂದಿ ಮಾತ್ರ ಮೃತಪಟ್ಟಿರುವುದು ಆಶ್ಚಯ ಮೂಡಿಸಿದೆ. ಅಲ್ಲಿನ ಚಿಕಿತ್ಸಾ ವಿಧಾನವೂ ಕೂಡ ಉತ್ತಮವಾಗಿದೆ.

ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!

ದಿನದಿಂದ ದಿನಕ್ಕೆ ಕೊರೊನಾ ಸೋಂಕು ತನ್ನ ನಾಗಾಲೋಟ ಮುಂದುವರಿಸಿದ್ದು ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ ಭಾರಿ ಏರಿಕೆಯಾಗಿದೆ. ಇಲ್ಲಿ ಸಾವಿಗೀಡಾದವರ ಸಂಖ್ಯೆಯೂ 1 ಸಾವಿರ ದಾಟಿದೆ. ಜಗತ್ತಿನಾದ್ಯಂತ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 21 ಸಾವಿರ ದಾಟಿದ್ದು, 21,308 ಜನರು ಕೋವಿಡ್‌ 19 ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಕೊರೊನಾ ಪೀಡಿತರ ಸಂಖ್ಯೆ 5 ಲಕ್ಷದತ್ತ ಮುನ್ನುಗ್ಗಿದ್ದು, ಸದ್ಯ 4,72,076 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಅಮೆರಿಕಾದಲ್ಲಿ ಕಳೆದ 24 ಗಂಟೆಯಲ್ಲಿ 13 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಬರೋಬ್ಬರಿ 69,197ಕ್ಕೆ ಏರಿಕೆಯಾಗಿದೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಬಗ್ಗೆ ಭಯಹುಟ್ಟಿಸಿದ ಅಧ್ಯಯನಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಬಗ್ಗೆ ಭಯಹುಟ್ಟಿಸಿದ ಅಧ್ಯಯನ

ದೇಶದಲ್ಲಿ ಕೊರೊನಾದಿಂದ ಇಲ್ಲಿಯವರೆಗೆ 1,050 ಜನರು ಸಾವನ್ನಪ್ಪಿದ್ದರೆ ಕೇವಲ 619 ಜನರಷ್ಟೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನ್ಯೂಯಾರ್ಕ್‌ ನಗರವೊಂದರಲ್ಲೇ 30,000 ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ.

ಅಮೆರಿಕದಲ್ಲಿ 69,200 ಮಂದಿ ಕೊರೊನಾ ಸೋಂಕಿತರು

ಅಮೆರಿಕದಲ್ಲಿ 69,200 ಮಂದಿ ಕೊರೊನಾ ಸೋಂಕಿತರು

ಜಾನ್‌ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ನೀಡಿರುವ ಮಾಹಿತಿ ಪ್ರಕಾರ ಅಮೆರಿಕದಲ್ಲಿ 69,200 ಮಂದಿ ಕೊರೊನಾ ಸೋಂಕಿತರಿದ್ದಾರೆ, ಅದರಲ್ಲಿ 1 ಸಾವಿರ ಮಂದಿ ಮೃತಪಟ್ಟಿದ್ದಾರೆ.

ಇಟಲಿಯಲ್ಲಿ ಸೋಂಕಿತರು ಕಡಿಮೆ, ಸಾವು ಹೆಚ್ಚು

ಇಟಲಿಯಲ್ಲಿ ಸೋಂಕಿತರು ಕಡಿಮೆ, ಸಾವು ಹೆಚ್ಚು

ಇಟಲಿಯಲ್ಲಿ ಚೀನಾಗಿಂತ ಕಡಿಮೆ ಸೋಂಕಿತರಿದ್ದರೂ ಕೂಡಾ ಸಾವಿನ ಸಂಖ್ಯೆ ಅತಿಹೆಚ್ಚು. ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ ಎಲ್ಲ ದೇಶಗಳಿಗಿಂತ ಹೆಚ್ಚಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ. ಚೀನಾದಲ್ಲಿ 81285 ಸೋಂಕಿತರಿದ್ದರೆ ಇಟಲಿಯಲ್ಲಿ 80583 ಸೋಂಕಿತರಿದ್ದಾರೆ. ಆದರೆ ಇಟಲಿಯಲ್ಲಿ ನಿತ್ಯ ಸಾವಿರಕ್ಕಿಂತಲೂ ಹೆಚ್ಚು ಮಂದಿ ಮೃತಪಡುತ್ತಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್‌ನಿಂದ ಸತ್ತವರ ಸಂಖ್ಯೆ ಕಡಿಮೆ

ಅಮೆರಿಕದಲ್ಲಿ ಕೊರೊನಾ ವೈರಸ್‌ನಿಂದ ಸತ್ತವರ ಸಂಖ್ಯೆ ಕಡಿಮೆ

ಇಟಲಿಗೆ ಹೋಲಿಕೆ ಮಾಡಿದರೆ ಅಮೆರಿಕದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ ಅತಿ ವಿರಳ, ನಿತ್ಯ ಹಲವು ಸಂಶೋಧನೆಗಳು ನಡೆಯುತ್ತಿದೆ. ಆಂಟಿ ಎಚ್‌ಐವಿ ಡ್ರಗ್ಸ್, ಹೈಡ್ರಾಕ್ಸಿಕ್ಲೋರೋಕ್ವಿನ್, ಕ್ಲೋರೊಕ್ವಿನ್ ಬಳಕೆ ಮಾಡಿರುವುದರಿಂದ ಸಾವಿನ ಸಂಖ್ಯೆ ಕಡಿಮೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕೊರೊನಾ ಔಷಧಿ ಖರೀದಿಸಲು ಟ್ರಂಪ್ ಬರೋಬ್ಬರಿ 700 ಕೋಟಿ ರೂಪಾಯಿ ಕೊಟ್ಟು , ಅಮೆರಿಕಕ್ಕೆ ಮಾತ್ರ ಸೀಮಿತವಾಗಿ ಕೊರೊನಾ ವೈರಸ್‌ ನ ಔಷಧಿಯನ್ನು ಖರೀದಿಸಲು ಮುಂದಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು.

ಚೀನಾದಲ್ಲಿ ಕೊರೊನಾ ವೈರಸ್ ಮರಣಮೃದಂಗ ಬಾರಿಸುತ್ತಿರುವಾಗಲೇ ಎಚ್ಚೆತ್ತ ಅಮೆರಿಕ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿತ್ತು.

ವೈದ್ಯಕೀಯ ಗುಣಮಟ್ಟವನ್ನು ಕೂಡ ಹೆಚ್ಚಿಸಿತ್ತು. ಕೊರೊನಾ ರೋಗಿಗಳಿಗೆ ತುರ್ತು ಚಿಕಿತ್ಸೆಯನ್ನೂ ನೀಡಿತ್ತು.

ಇಟಲಿಯಲ್ಲಿ ಕೊರೊನಾ ಪೀಡಿತರೆಷ್ಟು?

ಇಟಲಿಯಲ್ಲಿ ಕೊರೊನಾ ಪೀಡಿತರೆಷ್ಟು?

ಇಟಲಿ ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 80,589 ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 8215 ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 10,361 ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 3612.

English summary
New York's governor Andrew Cuomo said Thursday that the populous US state's coronavirus death tally has jumped to 385, with 115 fatalities in the past day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X