ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇರಿಕಾದಲ್ಲಿ ಕೊರೊನಾ ರಣಕೇಕೆ: 76,000 ಕ್ಕೂ ಅಧಿಕ ಮಂದಿ ಸಾವು!

|
Google Oneindia Kannada News

ವಾಷಿಂಗ್ಟನ್, ಮೇ 8: ಮಾರಣಾಂತಿಕ ಕೊರೊನಾ ವೈರಸ್ ಹೊಡೆತಕ್ಕೆ ಅಮೇರಿಕಾ ಅಕ್ಷರಶಃ ಜರ್ಜರಿತವಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಇಲ್ಲಿಯವರೆಗೂ 12,92,623 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೂ ಅಮೇರಿಕಾದಲ್ಲಿ 76,928 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಏಪ್ರಿಲ್ ಎರಡನೇ ವಾರದಿಂದ ಅಮೇರಿಕಾದಲ್ಲಿ ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಹಾಗ್ನೋಡಿದ್ರೆ, 1967 ಬಳಿಕ ಇಷ್ಟೊಂದು ಸಾವು-ನೋವು ಅಮೇರಿಕಾದಲ್ಲಿ ಸಂಭವಿಸಿರಲಿಲ್ಲ. 1981-1991 ರ ಅವಧಿಯಲ್ಲಿ ಏಡ್ಸ್ ನಿಂದ ಮೃತಪಟ್ಟವರಿಗಿಂತ, ಈಗಿನ ಕೊರೊನಾ ವೈರಸ್ ಗೆ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ.

ಕೊರೊನಾ ಬಗ್ಗೆ ಮಹತ್ವದ ಸಂಶೋಧನೆ ಮಾಡುತ್ತಿದ್ದ ಚೀನಾದ ಪ್ರೊಫೆಸರ್ ಗುಂಡೇಟಿಗೆ ಬಲಿ!ಕೊರೊನಾ ಬಗ್ಗೆ ಮಹತ್ವದ ಸಂಶೋಧನೆ ಮಾಡುತ್ತಿದ್ದ ಚೀನಾದ ಪ್ರೊಫೆಸರ್ ಗುಂಡೇಟಿಗೆ ಬಲಿ!

ಅತ್ತ ಮೇರಿಲ್ಯಾಂಡ್, ಮಿನೆಸೋಟಾ, ಟೆಕ್ಸಾಸ್, ವರ್ಜಿನಿಯಾ ಮುಂತಾದ ಕಡೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.

Coronavirus Death Toll In US Tops 76,000

ಇನ್ನೆರಡು ವರ್ಷ ಅಮೇರಿಕಾದಲ್ಲಿ ಕೊರೊನಾ ಕಂಟಕ ತಪ್ಪಿದ್ದಲ್ಲ! ಇನ್ನೆರಡು ವರ್ಷ ಅಮೇರಿಕಾದಲ್ಲಿ ಕೊರೊನಾ ಕಂಟಕ ತಪ್ಪಿದ್ದಲ್ಲ!

ಇತ್ತ ಅತಿ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಯಲ್ಲಿ ಈಗೀಗ ಹೊಸ ಸೋಂಕಿತರ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ.

ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?

ವಾಷಿಂಗ್ಟನ್ ವಿಶ್ವವಿದ್ಯಾಲಯ ಅಂದಾಜಿಸಿರುವ ಪ್ರಕಾರ, ಆಗಸ್ಟ್ 4 ರ ಹೊತ್ತಿಗೆ ಯುಎಸ್ಎ ನಲ್ಲಿ ಸಾವಿನ ಪ್ರಮಾಣ 134,000 ಕ್ಕೆ ಏರಿಕೆಯಾಗಲಿದೆ. ಮೇ ಅಂತ್ಯದ ವೇಳೆಗೆ ಯುಎಸ್ಎನಲ್ಲಿ ಪ್ರತಿ ದಿನ ಮೂರು ಸಾವಿರ ಮಂದಿ ಕೊರೊನಾಗೆ ಬಲಿಯಾಗಬಹುದು ಎಂದು ಟ್ರಂಪ್ ಆಂತರಿಕ ಸಮೀಕ್ಷೆ ಕೂಡ ಅಂದಾಜಿಸಿದೆ.

English summary
Coronavirus death toll in US Tops 76,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X