ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕೇಬಿಡ್ತು ಸಂಜೀವಿನಿ, ಕೊರೊನಾ ವ್ಯಾಕ್ಸಿನ್ ಸಕ್ಸಸ್..?

|
Google Oneindia Kannada News

ಕೊರೊನಾ ಕೂಪದಲ್ಲಿ ರೌರವ ನರಕ ಕಾಣುತ್ತಿರುವ ಅಮೆರಿಕನ್ನರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅಮೆರಿಕದ ಮಾಡೆರ್ನಾ ಕಂಪನಿಯ ಕೊರೊನಾ ವ್ಯಾಕ್ಸಿನ್ ಸೋಂಕಿತರ ಮೇಲೆ ಶೇ. 95ರಷ್ಟು ಪರಿಣಾಮಕಾರಿ ಎಂಬ ಗುಡ್‌ ನ್ಯೂಸ್ ಹೊರಬಿದ್ದಿದೆ. ಕೊರೊನಾ ಚೀನಿಯರ ನಾಡಲ್ಲಿ ಹುಟ್ಟಿದ್ದರೂ, ಈ ಡೆಡ್ಲಿ ವೈರಸ್‌ನಿಂದಾಗಿ ಬೀದಿಗೆ ಬಿದ್ದಿದ್ದು ಮಾತ್ರ ವಿಶ್ವದ ದೊಡ್ಡಣ್ಣ ಅಮೆರಿಕ.

ಇಡೀ ಜಗತ್ತಿನಲ್ಲಿ ಕೊರೊನಾ ಕಾಟಕ್ಕೆ ಅತಿಹೆಚ್ಚು ನರಳಾಡಿರುವ ದೇಶ ಅಮೆರಿಕ. ಈಗಾಗಲೇ ಅಮೆರಿಕದಲ್ಲಿ 1 ಕೋಟಿ 13 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೇ 2 ಲಕ್ಷ 50 ಸಾವಿರಕ್ಕೂ ಹೆಚ್ಚು ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ. ಅದರಲ್ಲೂ ಕಳೆದ ಕೆಲ ವಾರಗಳಿಂದ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ನಿತ್ಯ ಸರಾಸರಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಭಾರತದಲ್ಲಿ ಜನವರಿಯಲ್ಲಿ ಲಸಿಕೆ ಲಭ್ಯ: ಸೆರಮ್ ಸಂಸ್ಥೆಭಾರತದಲ್ಲಿ ಜನವರಿಯಲ್ಲಿ ಲಸಿಕೆ ಲಭ್ಯ: ಸೆರಮ್ ಸಂಸ್ಥೆ

ಇಡೀ ಜಗತ್ತಿನಲ್ಲಿ 5 ಕೋಟಿ 50 ಲಕ್ಷ ಸೋಂಕಿತರು ಪತ್ತೆಯಾಗಿದ್ದರೆ, ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕದ ಪಾಲು 1 ಕೋಟಿ 13 ಲಕ್ಷ. ಈ ಅಂಕಿ-ಅಂಶ ಅಮೆರಿಕದ ಭಯಾನಕ ಪರಿಸ್ಥಿತಿ ಬಿಂಬಿಸುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲೇ ಮಾಡೆರ್ನಾ ಕಂಪನಿ ಅಮೆರಿಕನ್ನರಿಗೆ ಸ್ವೀಟ್ ನ್ಯೂಸ್ ಕೊಟ್ಟಿದೆ.

 ಟ್ರಂಪ್ ಕೂಟ್ಟಿದ್ದರು ಹಿಂಟ್..!

ಟ್ರಂಪ್ ಕೂಟ್ಟಿದ್ದರು ಹಿಂಟ್..!

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ನವೆಂಬರ್ ತಿಂಗಳಲ್ಲಿ ವ್ಯಾಕ್ಸಿನ್ ಸಿಗುತ್ತದೆ ಎಂಬ ಬಗ್ಗೆ ಕಳೆದ ತಿಂಗಳು ಸುಳಿವು ನೀಡಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಟ್ರಂಪ್ ಭರವಸೆ ನೀಡಿದ್ದರು. ದುರಾದೃಷ್ಟ ಎಂದರೆ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ವ್ಯಾಕ್ಸಿನ್ ಸಕ್ಸಸ್ ಆಗಿರುವ ವಿಚಾರ ರಿವೀಲ್ ಆಗಿದೆ. ಟ್ರಂಪ್ ವ್ಯಾಕ್ಸಿನ್ ವಿಷಯವನ್ನೇ ಮುಂದಿಟ್ಟು ವೋಟ್ ಗಿಟ್ಟಿಸಲು ಶತಪ್ರಯತ್ನ ಮಾಡಿದ್ದರು. ಆದರೆ ಅದ್ಯಾವುದೂ ಈಡೇರಲಿಲ್ಲ. ಈಗ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ಮಾಡೆರ್ನಾ ಕಂಪನಿ ಸಿಹಿಸುದ್ದಿ ಕೊಟ್ಟಿದೆ.

 ಅಮೆರಿಕದಲ್ಲಿ ಭಯಾನಕ ಪರಿಸ್ಥಿತಿ

ಅಮೆರಿಕದಲ್ಲಿ ಭಯಾನಕ ಪರಿಸ್ಥಿತಿ

ಭೂ ಮಧ್ಯೆ ರೇಖೆಯಿಂದ ಉತ್ತರಕ್ಕೆ ಚಾಚಿಕೊಂಡಿರುವ ಅಮೆರಿಕದ ಭೂಭಾಗದಲ್ಲಿ ಡಿಸೆಂಬರ್ ವೇಳೆಗಾಗಲೇ ಮೈಕೊರೆಯುವ ತಾಪಮಾನ ಇರುತ್ತದೆ. ಚಳಿಯ ಕಾರಣಕ್ಕೆ ಈಗಾಗಲೇ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಕಾಣುತ್ತಿದೆ. ಎಷ್ಟರಮಟ್ಟಿಗೆ ಎಂದರೆ ದಿನನಿತ್ಯ ಒಂದೂವರೆ ಲಕ್ಷ ಸರಾಸರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಇದು ಅಮೆರಿಕನ್ನರನ್ನ ನಡುಗಿಸಿದ್ದು, ಲಕ್ಷ ಲಕ್ಷ ಮಂದಿ ಸಾಯುತ್ತಿದ್ದಾರೆ. ಈ ಸ್ಥಿತಿಯಲ್ಲಿ ಕೊರೊನಾ ಒದ್ದೋಡಿಸಲು ಲಸಿಕೆ ಅತ್ಯಗತ್ಯವಾಗಿತ್ತು. ಮಾಡೆರ್ನಾ ಕಂಪನಿ ಅದನ್ನ ಸಾಧಿಸಿದೆ. ಸ್ವತಃ ಮಾಡೆರ್ನಾ ಕಂಪನಿ ಅಧಿಕಾರಿಗಳು ತಿಳಿಸಿರುವಂತೆ ಮುಂದಿನ ಕೆಲವೇ ವಾರಗಳಲ್ಲಿ ವ್ಯಾಕ್ಸಿನ್‌ಗೆ ಅಮೆರಿಕ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದ್ದು, ನವೆಂಬರ್ ಅಂತ್ಯಕ್ಕೆ ವ್ಯಾಕ್ಸಿನ್ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ಡಿಸೆಂಬರ್ ವೇಳೆಗೆ ಭಾರತಕ್ಕೆ ಬರಲಿದೆ 10 ಕೋಟಿ ಕೊರೊನಾ ಲಸಿಕೆಡಿಸೆಂಬರ್ ವೇಳೆಗೆ ಭಾರತಕ್ಕೆ ಬರಲಿದೆ 10 ಕೋಟಿ ಕೊರೊನಾ ಲಸಿಕೆ

ಭಾರತೀಯರಿಗೆ ಭರ್ಜರಿ ಲಾಭ..!

ಭಾರತೀಯರಿಗೆ ಭರ್ಜರಿ ಲಾಭ..!

ಅಮೆರಿಕದ ಮಾಡೆರ್ನಾ ಕಂಪನಿ ಲಸಿಕೆ ಸಕ್ಸಸ್ ಆಗಿರುವುದು ಭಾರತಕ್ಕೂ ಗುಡ್‌ ನ್ಯೂಸ್. ಏಕೆಂದರೆ ಈಗಿನ ಪರಿಸ್ಥಿತಿಯಲ್ಲಿ ಭಾರತಕ್ಕೂ ಅಗಾಧ ಪ್ರಮಾಣದಲ್ಲಿ ಲಸಿಕೆ ಬೇಕಿದೆ. ಆಕ್ಸ್‌ಫರ್ಡ್ ವಿವಿ ಲಸಿಕೆ ಸಕ್ಸಸ್ ಆಗುವ ಹಂತ ತಲುಪಿದ್ದರೂ, ಭಾರತದ ನೂರಾರು ಕೋಟಿ ಜನಸಂಖ್ಯೆಗೆ ಅಗಾಧ ಪ್ರಮಾಣದಲ್ಲಿ ಲಸಿಕೆ ಬೇಕಾಗುತ್ತದೆ. ಹೀಗಾಗಿ ಅಮೆರಿಕದ ಮಾಡೆರ್ನಾ ಕಂಪನಿಯ ಲಸಿಕೆ ಕೂಡ ಅತ್ಯಗತ್ಯ ಎನಿಸುತ್ತದೆ. ಅಮೆರಿಕ ಸರ್ಕಾರ ಲಸಿಕೆ ಬಳಕೆಗೆ ಒಪ್ಪಿಗೆ ಸೂಚಿಸಿದ ನಂತರ ಭಾರತದಲ್ಲೂ ಮಾಡೆರ್ನಾ ಕಂಪನಿ ಲಸಿಕೆ ಕೊಳ್ಳುವುದಕ್ಕೆ ಚಟುವಟಿಕೆಗಳು ಆರಂಭವಾಗುವ ನಿರೀಕ್ಷೆ ಇದೆ. ಇನ್ನುಳಿದಂತೆ ಅಮೆರಿಕದ ಮಿತ್ರ ರಾಷ್ಟ್ರಗಳಿಗೆ ‘ದೊಡ್ಡಣ್ಣ' ಈ ವ್ಯಾಕ್ಸಿನ್ ಗಿಫ್ಟ್ ಮಾಡುವ ಸಾಧ್ಯತೆ ದಟ್ಟವಾಗಿದೆ.

ಕೋವಿಡ್‌-19 ಚಿಕಿತ್ಸೆಗೆ ರೆಮ್ಡೆಸಿವಿರ್ ಪರಿಣಾಮಕಾರಿ: ಡಾ. ಮಂಜುನಾಥ್ಕೋವಿಡ್‌-19 ಚಿಕಿತ್ಸೆಗೆ ರೆಮ್ಡೆಸಿವಿರ್ ಪರಿಣಾಮಕಾರಿ: ಡಾ. ಮಂಜುನಾಥ್

ಅಮೆರಿಕಾದ ಮಾಡೆರ್ನಾ ಕಂಪೆನಿ ಲಸಿಕೆ

ಅಮೆರಿಕಾದ ಮಾಡೆರ್ನಾ ಕಂಪೆನಿ ಲಸಿಕೆ

ಅಮೆರಿಕಾದ ಮಾಡೆರ್ನಾ ಕಂಪೆನಿಯು 2,400 ರೂ.ಗಳಿಂದ 2,800 ರೂ.ವರೆಗೆ ನಿಗದಿ ಪಡಿಸಿದೆ. ಭಾರತದಲ್ಲಿ ಸಿರಂ ಇನ್‌ಸ್ಟಿಟ್ಯೂಟ್‌‌‌‌‌ ಲಸಿಕೆಗೆ 1,000 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದ್ದು, ಈ ಬೆಲೆಯನ್ನು ಗೇಟ್ಸ್‌‌‌ ಪ್ರತಿಷ್ಠಾನದ ನೆರವು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿದಂತಾಗಿದೆ. ಕೆಲವು ಸಂಸ್ಥೆಗಳು ಆಯಾ ದೇಶಗಳ ಆರ್ಥಿಕ ಸಹಕಾರದ ಅಡಿಯಲ್ಲಿ ಸಂಶೋಧನೆ ನಡೆಸುತ್ತಿದ್ದು, ಈ ಕಾರಣದಿಂದ ಲಸಿಕೆಯನ್ನು ಅಂತಹ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದರೆ, ಉಳಿದಂತೆ ದೇಶಗಳು ಈ ಲಸಿಕೆಯನ್ನು ಅಧಿಕ ಬೆಲೆಗೆ ಕೊಡಬೇಕಾಗುತ್ತದೆ.

ಎಚ್ಚರ.. ಎಚ್ಚರ.. ಕೊರೊನಾ ಸುಲಭವಾಗಿ ಸಾಯೋದಿಲ್ಲಎಚ್ಚರ.. ಎಚ್ಚರ.. ಕೊರೊನಾ ಸುಲಭವಾಗಿ ಸಾಯೋದಿಲ್ಲ

English summary
The Moderna Company has given Good News to Americans who are suffering from Coronavirus. Moderna Company vaccine shows nearly 95% protection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X