ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಚಿಂತೆಯಲ್ಲಿ ಟ್ರಂಪ್ ಪತ್ರ ಬರೆದಿದ್ದು ಯಾರಿಗೆ?

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದಿನದಂದ ದಿನಕ್ಕೆ ಕೊರೊನಾವೈರಸ್ ನಿಯಂತ್ರಣದ ಬಗ್ಗೆ ಚಿಂತೆ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ಒಂದೇ ದಿನ 100ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಹೀಗಾಗಿ, ಕೊರೊನಾ ಹತೋಟಿ ಮಾಡಿ, ಜನರನ್ನು ರಕ್ಷಿಸಿರುವ ನಾಯಕರೊಬ್ಬರಿಗೆ ಟ್ರಂಪ್ ಪತ್ರ ಬರೆದು ನೆರವು ಕೋರಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸುಮಾರು 431ಕ್ಕೂ ಅಧಿಕ ಮಂದಿ ಮೃತರಾಗಿದ್ದು, ಸೋಂಕಿತರ ಸಂಖ್ಯೆ 33,461ಕ್ಕೇರಿದೆ. ನ್ಯೂಯಾರ್ಕ್ ನಲ್ಲೇ ಅಧಿಕ ಸೋಂಕಿತರಿದ್ದು 15, 168ಕ್ಕೂ ಅಧಿಕ ಮಂದಿ ಇದ್ದಾರೆ. ಸಾರ್ವಜನಿಕರಿಗೆ ಏಪ್ರಿಲ್ ತಿಂಗಳ ತನಕ ಮನೆಯಲ್ಲೇ ಇರುವಂತೆ ಆದೇಶಿಸಲಾಗಿದೆ. ಆದರೆ, ಕೊರೊನಾ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತಿಲ್ಲ.

ಟ್ರಂಪ್ ಟ್ವೀಟ್ ನಂತರ HCQ ಲಸಿಕೆ ಫುಲ್ ಟ್ರೆಂಡಿಂಗ್ ಯಾಕೆ?ಟ್ರಂಪ್ ಟ್ವೀಟ್ ನಂತರ HCQ ಲಸಿಕೆ ಫುಲ್ ಟ್ರೆಂಡಿಂಗ್ ಯಾಕೆ?

ಕೊರಿಯಾ ನೆರವು ಕೋರಿದ ಯುಎಸ್ಎ:
"ಹೌದು ಕಿಮ್ ಅವರಿಗೆ ವೈಯಕ್ತಿಕವಾಗಿ ಪತ್ರ ಬರೆದು ನೆರವು ಕೋರಿದ್ದೇನೆ. ಪರಸ್ಪರ ಸಹಕಾರದಿಂದ ಸಾಂಕ್ರಾಮಿಕ ಪಿಡುಗು ದೂರಾಗಿಸಬಹುದು. ಸೌದಿ ಅರೇಬಿಯಾ, ಉತ್ತರ ಕೊರಿಯಾಕ್ಕೂ ಅಮೆರಿಕ ನೆರವು ಒದಗಿಸಲಿದೆ. 3 ಲಕ್ಷಕ್ಕೂ ಅಧಿಕ ಮಂದಿ ನೊವೆಲ್ ಕೊರೊನಾವೈರಸ್ ಸೋಂಕಿಗೆ ಒಳಪಟ್ಟಿದ್ದಾರೆ. 12 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ" ಎಂದು ಟ್ರಂಪ್ ಹೇಳಿದರು.

Corona Scare: Trump confirms seeking Kim Jong Un help

ಉತ್ತರ ಕೊರಿಯಾದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಿಮ್ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಟ್ರಂಪ್ ತಮ್ಮ ಪತ್ರದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟಂಪ್ ಪತ್ರವನ್ನು ಸ್ವೀಕರಿಸಿರುವ ಕಿಮ್ ಅವರ ಕಚೇರಿ, ಇದು ಉತ್ತಮ ಸಂಬಂಧದ ಪ್ರತೀಕವಾಗಿದ್ದು, ಪರಸ್ಪರ ಸಹಕಾರದ ಬಗ್ಗೆ ಚರ್ಚೆ ಆರಂಭವಾಗಿದೆ ಎಂದಿದ್ದಾರೆ.

ಇನ್ನೊಂದೆಡೆ, ಕೊವಿಡ್19ಗಾಗಿ ಲಸಿಕೆ ಕಂಡು ಹಿಡಿಯುತ್ತಿರುವ ವಿಜ್ಞಾನಿಗಳು ಸಂಶೋಧಕರಿಗೆ ಟ್ರಂಪ್ ಅಗತ್ಯ ನೆರವು ನೀಡುತ್ತಿದ್ದು, ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧದ ಬಗ್ಗೆ ಟ್ರಂಪ್ ಅವರು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು. HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು.

English summary
President Donald Trump confirmed Sunday that he sent a letter to North Korean leader Kim Jong Un about cooperation on the novel coronavirus and offered assistance to North Korea, Iran and other countries that need help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X