ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಂಟಕದಿಂದ ಬಚಾವ್, ಆದರೂ ಎಚ್ಚರವಾಗಿರಲು ಸೂಚನೆ..!

|
Google Oneindia Kannada News

ಅಮೆರಿಕ ಕೊರೊನಾ ಕಂಟಕದಿಂದ ಬಚಾವ್ ಆಗಿದ್ದರೂ 2-3 ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು ಅಂತಾ ತಜ್ಞರು ಅಮೆರಿಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕನ್ನರಿಗೆ ಒಂದಿಷ್ಟು ನೆಮ್ಮದಿ ತಂದಿದೆ. ಭೂಮಿ ಮೇಲಿನ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ಅಮೆರಿಕ, ಕೊರೊನಾ ಕಾರಣಕ್ಕೆ ಭೂಮಿ ಮೇಲಿನ ನರಕ ಎಂಬಂತಾಗಿದೆ.

ಸುಮಾರು 1 ವರ್ಷದಿಂದಲೂ ಅಮೆರಿಕ ಕೊರೊನಾ ರಾಯಭಾರಿ ಆಗಿದೆ. ಇಡೀ ಜಗತ್ತಿನ ಸೋಂಕಿತರ ಸಂಖ್ಯೆ ಒಂದು ಲೆಕ್ಕಕ್ಕಾದರೆ, ಅಮೆರಿಕದ ಸೋಂಕಿತರ ಸಂಖ್ಯೆ ಇನ್ನೊಂದು ಲೆಕ್ಕ. ಈವರೆಗೂ ಜಾಗತಿಕವಾಗಿ ಸುಮಾರು 11 ಕೋಟಿ 51 ಲಕ್ಷ ಸೋಂಕಿತರು ಪತ್ತೆಯಾಗಿದ್ದರೆ, ಕೇವಲ ಅಮೆರಿಕದಲ್ಲೇ 3 ಕೋಟಿ ಸೋಂಕಿತರು ಪತ್ತೆಯಾಗಿದ್ದಾರೆ. 2-3 ತಿಂಗಳ ಅವಧಿಯಲ್ಲಿ ಪ್ರತಿನಿತ್ಯ 2 ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್‌ಗಳನ್ನ ಕಂಡಿತ್ತು ಅಮೆರಿಕ.

ಅಷ್ಟು ಮಾತ್ರವಲ್ಲದೆ ಪ್ರತಿದಿನ 3ರಿಂದ 4 ಸಾವಿರ ಅಮೆರಿಕನ್ನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದ ಭಯಾನಕ ಉದಾಹರಣೆ ಕೂಡ ಇದೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಇದೀಗ ಅಮೆರಿಕ ಸ್ವಲ್ಪ ರಿಲೀಫ್ ಪಡೆಯುತ್ತಿದೆ.

3 ಕೋಟಿ ಸೋಂಕಿತರು..!

3 ಕೋಟಿ ಸೋಂಕಿತರು..!

ಅಮೆರಿಕದಲ್ಲಿ ಈವರೆಗೂ 2 ಕೋಟಿ 93 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಕೋಟಿ ಗಡಿಗೆ ಸಮೀಪಿಸಿದೆ. ಅಲ್ಲದೆ 5 ಲಕ್ಷ 27 ಸಾವಿರ ಅಮೆರಿಕನ್ನರು ಡೆಡ್ಲಿ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಅಮೆರಿಕನ್ನರಿಗೆ ಸಾಮೂಹಿಕವಾಗಿ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭವಾಗಿದ್ದರೂ, ಜನರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಭವಿಷ್ಯವೇ ಮಂಕಾಗಿ ಹೋಗುತ್ತಿದೆ. ಜೀವ ಉಳಿಸಿಕೊಂಡವನೇ ಮಹಾಶೂರ ಎಂಬಂತಾಗಿದೆ. ಹೊರಗಡೆ ಬರಲು ಜನರು ಭಯಪಡುತ್ತಿದ್ದಾರೆ. ಜೀವ ಉಳಿದರೆ ಸಾಕಪ್ಪಾ ಅಂತಾ ಗೊಣಗುತ್ತಿದ್ದಾರೆ ಅಮೆರಿಕನ್ನರು.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ 'ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಹಾಗೆ ನೋಡಿದರೆ ಕೊರೊನಾ ಸೋಂಕು ಕಂಟ್ರೋಲ್ ಮಾಡಿರುವ ವಿಚಾರದಲ್ಲಿ ಭಾರತವೇ ಅಮೆರಿಕ ನಾಯಕರಿಗೆ ಮಾದರಿ.

ಮುನ್ನೆಚ್ಚರಿಕೆ ಇಲ್ಲದಿದ್ದರೆ ಸಂಕಷ್ಟ ಪಕ್ಕಾ..!

ಮುನ್ನೆಚ್ಚರಿಕೆ ಇಲ್ಲದಿದ್ದರೆ ಸಂಕಷ್ಟ ಪಕ್ಕಾ..!

ಲಸಿಕೆ ಸಿಕ್ಕರೂ ಸದ್ಯಕ್ಕೆ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಿರುವಾಗ 2-3 ತಿಂಗಳು ಎಚ್ಚರಿಕೆ ಅತ್ಯಗತ್ಯ ಎಂದು ಬೈಡನ್ ಸರ್ಕಾರಕ್ಕೆ ತಜ್ಞರು ಎಚ್ಚರಿಸಿದ್ದಾರೆ. ಕಳೆದ ಬಾರಿ ಕೂಡ ಇದೇ ರೀತಿ ಅಮೆರಿಕದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದಾಗ ಜನ ಮೈಮರೆತರು. ಎಲ್ಲಕ್ಕಿಂತ ಹೆಚ್ಚಾಗಿ ಖುದ್ದು ಡೊನಾಲ್ಡ್ ಟ್ರಂಪ್ ಮನಸ್ಸಿಗೆ ಬಂದಂತೆ ನಿರ್ಧಾರ ಕೈಗೊಂಡು, ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದ್ದರು. ಅಂದಿನ ಅಮೆರಿಕ ಅಧ್ಯಕ್ಷರ ನಿರ್ಧಾರ ಇದೀಗ ನೂತನ ಅಧ್ಯಕ್ಷ ಬೈಡನ್‌ಗೆ ದೊಡ್ಡ ಸವಾಲು ತಂದೊಡ್ಡಿದೆ. ಸದ್ಯಕ್ಕೆ ಸೋಂಕಿತರ ಸಂಖ್ಯೆ ಕಡಿಮೆ ಆಗಿದ್ದರೂ ಸಂಪೂರ್ಣವಾಗಿ ಕೊರೊನಾ ಅಮೆರಿಕ ಬಿಟ್ಟು ತೊಲಗಿಲ್ಲ.

5 ಲಕ್ಷ ಸಾವು, ಆಸ್ಪತ್ರೆಗಳು ಫುಲ್..!

5 ಲಕ್ಷ ಸಾವು, ಆಸ್ಪತ್ರೆಗಳು ಫುಲ್..!

ಅಮೆರಿಕದಲ್ಲಿ ಕೊರೊನಾ ನೋಡ ನೋಡುತ್ತಿದ್ದಂತೆ ನರಕ ಸೃಷ್ಟಿಸಿತ್ತು. ಡಿಸೆಂಬರ್, ಜನವರಿ ಸಮಯದಲ್ಲಿ ಆ ದೇಶದ ಪರಿಸ್ಥಿತಿ ಭಯಾನಕವಾಗಿತ್ತು. ಪ್ರತಿದಿನ ಸಾವಿರ ಸಾವಿರ ಜನ ಕೊರೊನಾಗೆ ಬಲಿಯಾಗುತ್ತಿದ್ದರೆ, ಅಲ್ಲಿ ಹೊಸ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆಸ್ಪತ್ರೆಗಳಲ್ಲಿ ಜಾಗವೇ ಖಾಲಿ ಇರಲಿಲ್ಲ. ಆಸ್ಪತ್ರೆಗಳ ಹಾಸಿಗೆಗಳು ಫುಲ್ ಆಗಿದ್ದವು. ಮತ್ತೊಂದು ನೋವಿನ ಸಂಗತಿ ಎಂದರೆ, ಮೃತಪಟ್ಟ ಸೋಂಕಿತರನ್ನು ಮಣ್ಣು ಮಾಡೋದಕ್ಕೆ ಸ್ಥಳಾವಕಾಶದ ಕೊರತೆ ಎದುರಾಯಿತು. ಆಗ ಸಾಮೂಹಿಕವಾಗಿ ಸಂಸ್ಕಾರ ಮಾಡಿತ್ತು ಅಲ್ಲಿನ ಸರ್ಕಾರ. ಹೀಗೆ 5 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾಗೆ ಬಲಿಯಾಗಿ ಹೋಗಿದ್ದಾರೆ.

English summary
Corona new cases record low in America, but experts warned US govt to be alert for 3 more months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X