ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ಕೊರೊನಾ: ನಿಂತು ಹೋಗುತ್ತಾ ಅಮೆರಿಕ ಅಧ್ಯಕ್ಷೀಯ ಚುನಾವಣೆ..?

|
Google Oneindia Kannada News

ಜಗತ್ತಿನಾದ್ಯಂತ ಈಗ ಒಂದೇ ಚರ್ಚೆ, ಒಂದೇ ವಿಚಾರದ ಬಗ್ಗೆ ಆತಂಕ ಹಾಗೂ ಕುತೂಹಲ. ವಿಶ್ವದ ಬಲಿಷ್ಠ ರಾಷ್ಟ್ರ ಅಮೆರಿಕ ಅಧ್ಯಕ್ಷರಿಗೇ ಕೊರೊನಾ ವೈರಸ್ ಅಟ್ಯಾಕ್ ಆಗಿರುವುದು ಜಗತ್ತನ್ನು ತಲ್ಲಣಗೊಳಿಸಿದೆ. ಹೀಗೆ ಅಮೆರಿಕದ ಮಿತ್ರರಾಷ್ಟ್ರಗಳು ಇದರಿಂದ ಶಾಕ್‌ಗೆ ಒಳಗಾಗಿದ್ದರೆ, ಅಮೆರಿಕದ ಶತ್ರು ದೇಶಗಳು ಒಳಗೊಳಗೆ ಖುಷಿ ಪಡುತ್ತಿವೆ. ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಚಾರವೊಂದಿದೆ.

ಅದೇನೆಂದರೆ ಅಕಸ್ಮಾತ್ ಟ್ರಂಪ್ ಕೊರೊನಾ ಸೋಂಕಿನಿಂದ ತೀವ್ರ ಅಸ್ವಸ್ಥರಾದರೆ ಅಥವಾ ಸೋಂಕಿಗೆ ತುತ್ತಾದರೆ ಅಮೆರಿಕದ ಭವಿಷ್ಯ ಹೇಗಿರಲಿದೆ ಎಂಬುದು. ಇಂತಹ ಆತಂಕಗಳು ಈಗ ಅಮೆರಿಕದ ನಾಗಿರಕರನ್ನು ಕಾಡುತ್ತಿವೆ. ಇದರ ಜೊತೆಗೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕೂಡ ನಡೆಯುತ್ತಿದೆ. ಹೀಗೆ ಟ್ರಂಪ್ ಆರೋಗ್ಯದ ಬಗ್ಗೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಹಾಗೂ ಆತಂಕಗಳಿಗೆ ಅಮೆರಿಕದ ಸಂವಿಧಾನ ಗೊಂದಲ ಇಲ್ಲದ ಉತ್ತರ ನೀಡಿದೆ. ಅಧ್ಯಕ್ಷರ ಅಕಾಲಿಕ ಮರಣ ಅಥವಾ ಅಧಿಕಾರ ನಿಭಾಯಿಸಲು ಸಾಧ್ಯವಾಗದಿರುವ ಸಂದರ್ಭ ಹೀಗೆ ತುರ್ತು ಪರಿಸ್ಥಿತಿಯಲ್ಲಿ ಎಂತಹ ನಿರ್ಣಯ ಕೈಗೊಳ್ಳಬೇಕು ಎಂಬುದನ್ನು ಸಂವಿಧಾನದಲ್ಲಿ ವಿವರಿಸಲಾಗಿದೆ. ಅಮೆರಿಕ ಸಂವಿಧಾನದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಅಂಶಗಳ ಕಂಪ್ಲೀಟ್ ಚಿತ್ರಣ ಇಲ್ಲಿದೆ.

ಟ್ರಂಪ್ ಅಧಿಕಾರ ಹಸ್ತಾಂತರ ಮಾಡಬಹುದೇ..?

ಟ್ರಂಪ್ ಅಧಿಕಾರ ಹಸ್ತಾಂತರ ಮಾಡಬಹುದೇ..?

ಜಗತ್ತಿನಲ್ಲೇ ಅಮೆರಿಕದ ಸಂವಿಧಾನ ಅತ್ಯಂತ ಸರಳವಾದದ್ದು ಎಂಬ ಖ್ಯಾತಿ ಪಡೆದಿದೆ. ಅಷ್ಟಕ್ಕೂ ಅಧ್ಯಕ್ಷರ ಅಧಿಕಾರ ಹಸ್ತಾಂತರದ ಕುರಿತು ಅಮೆರಿಕ ಸಂವಿಧಾನದಲ್ಲಿ ಸ್ಪಷ್ಟನೆ ನೀಡಲಾಗಿದೆ. 1963ರಲ್ಲಿ ನಡೆದ 25ನೇ ತಿದ್ದುಪಡಿಯ 3ನೇ ಸೆಕ್ಷನ್ ಅನುಸಾರ, ಅಧ್ಯಕ್ಷರು ತಮ್ಮ ಅಧಿಕಾರವನ್ನು ನಿಭಾಯಿಸುವಲ್ಲಿ ತಾತ್ಕಾಲಿಕವಾಗಿ ಅಸಮರ್ಥರಾದರೆ ಅಥವಾ ದೀರ್ಘಕಾಲಿನ ಅನಾರೋಗ್ಯಕ್ಕೆ ತುತ್ತಾದರೆ ಉಪಾಧ್ಯಕ್ಷರಿಗೆ ತಮ್ಮ ಅಧಿಕಾರವನ್ನ ಹಸ್ತಾಂತರಿಸಬಹುದು. ಅಧ್ಯಕ್ಷರು ತಮ್ಮ ಅಧಿಕಾರ ಹಸ್ತಾಂತರದ ಕುರಿತು ಪತ್ರದ ಮೂಲಕ ಅಧಿಸೂಚನೆ ಹೊರಡಿಸಬಹುದು. ಹಾಗೇ ಅಧಿಕಾರ ಮರಳಿ ಪಡೆಯಲು ಇದೇ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಅಕಸ್ಮಾತ್ ಈಗ ಟ್ರಂಪ್‌ ಅವರಿಗೆ ಕೊರೊನಾ ಸೋಂಕು ಉಲ್ಬಣಿಸಿ, ಆರೋಗ್ಯ ಕ್ಷೀಣಿಸಿದರೆ ಅಮೆರಿಕದ ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್‌ಗೆ ಟ್ರಂಪ್ ತಮ್ಮ ಅಧ್ಯಕ್ಷೀಯ ಅಧಿಕಾರ ಹಸ್ತಾಂತರ ಮಾಡಬೇಕಾಗುತ್ತದೆ.

ಅಮೆರಿಕದ ಇತಿಹಾಸ ಏನು ಹೇಳುತ್ತದೆ..?

ಅಮೆರಿಕದ ಇತಿಹಾಸ ಏನು ಹೇಳುತ್ತದೆ..?

ನವೆಂಬರ್ 22, 1963 ಅಮೆರಿಕದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಸೃಷ್ಟಿಮಾಡಿ ಹೋಗಿದೆ. ಅಂದು ಯಾರೂ ಊಹಿಸಲಾಗದ ಘಟನೆ ನಡೆದಿತ್ತು. ಆಗಿನ ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರನ್ನ ಗುಂಡು ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕೆನಡಿ ಹತ್ಯೆಯ ಬಳಿಕ ಅಮೆರಿಕದ ಸಂವಿಧಾನದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಇದರಲ್ಲಿ 25ನೇ ತಿದ್ದುಪಡಿ ಪ್ರಮುಖವಾದದ್ದು. 1985ರಲ್ಲಿ 25ನೇ ತಿದ್ದುಪಡಿಯ 3ನೇ ಸೆಕ್ಷನ್ ಪ್ರಕಾರ ಅಮೆರಿಕದ 40ನೇ ಅಧ್ಯಕ್ಷ ರೋನಾಲ್ಡ್ ರೇಗನ್ ತಮ್ಮ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರ ಮಾಡಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಿನ್ನೆಲೆ ಸುಮಾರು 8 ಗಂಟೆಗಳ ಕಾಲ ಅಂದಿನ ಉಪಾಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ (ಜಾರ್ಜ್ ಡಬ್ಲ್ಯೂ ಬುಷ್ ತಂದೆ) ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಈ ಘಟನೆ ಮತ್ತೆ 2002 ಹಾಗೂ 2007ರಲ್ಲಿ ಮರುಕಳಿಸಿತ್ತು.

ಟ್ರಂಪ್ ವಿರುದ್ಧ ಅವರದ್ದೇ ಪಕ್ಷದವರು ತಿರುಗಿಬಿದ್ದಿದ್ದೇಕೆ?ಟ್ರಂಪ್ ವಿರುದ್ಧ ಅವರದ್ದೇ ಪಕ್ಷದವರು ತಿರುಗಿಬಿದ್ದಿದ್ದೇಕೆ?

ಅಧ್ಯಕ್ಷೀಯ ಚುನಾವಣೆ ನಿಂತು ಹೋಗುವುದಾ..?

ತಜ್ಞರ ಪ್ರಕಾರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಸದ್ಯದ ಬೆಳವಣಿಗೆಗಳು ಯಾವುದೇ ರೀತಿ ಪ್ರಭಾವ ಬೀರಲಾರವು. ಏಕೆಂದರೆ ಈಗಾಗಲೇ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗಿದೆ. ಕೆಲ ರಾಜ್ಯಗಳು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಬಹುಬೇಗ ಮತದಾನ ಆರಂಭಿಸಿವೆ. ಅಮೆರಿಕದಲ್ಲಿ ಒಕ್ಕೂಟ ವ್ಯವಸ್ಥೆಗೆ ಸಾಕಷ್ಟು ಬಲವಿದೆ. ರಾಜ್ಯಗಳು ಹಲವಾರು ನಿರ್ಧಾರಗಳನ್ನು ಕೇಂದ್ರದ ಒತ್ತಡವಿಲ್ಲದೆ ನಿರಾಯಾಸವಾಗಿ ತೆಗೆದುಕೊಂಡು, ಜನರ ಹಿತರಕ್ಷಣೆಗೆ ಮುಂದಾಗಬಹುದು. ಹೀಗಾಗಿ ಅಮೆರಿಕದ ಕೆಲವು ರಾಜ್ಯಗಳಲ್ಲಿ ಅಂಚೆ ಮತದಾನ ಈಗಾಗಲೇ ಆರಂಭವಾಗಿದೆ. ಅಕಸ್ಮಾತ್ ಟ್ರಂಪ್ ಅವರಿಗೆ ಏನಾದರೂ ಹೆಚ್ಚುಕಡಿಮೆ ಆದರೂ, ಚುನಾವಣೆ ಮಾತ್ರ ನಿಲ್ಲುವುದಿಲ್ಲ. ಹೀಗಾಗಿ ಯಾವುದೇ ಆತಂಕ ಬೇಡ ಎನ್ನುವುದು ತಜ್ಞರ ಸಲಹೆಯಾಗಿದೆ.

ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಪಾಸಿಟಿವ್: ಷೇರುಪೇಟೆ, ತೈಲ ಬೆಲೆ ನಷ್ಟಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಪಾಸಿಟಿವ್: ಷೇರುಪೇಟೆ, ತೈಲ ಬೆಲೆ ನಷ್ಟ

ಟ್ರಂಪ್‌ಗೆ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ

74 ವರ್ಷದ ಡೊನಾಲ್ಡ್ ಟ್ರಂಪ್‌ಗೆ ಸ್ವಲ್ಪ ಜ್ವರವಿತ್ತು. ಮುಂದಿನ ಕೆಲವು ದಿನಗಳವರೆಗೆ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ರೆಜೆನೆರಾನ್ ಫಾರ್ಮಾಸ್ಯುಟಿಕಲ್ ಇಂಕ್ ಪರೀಕ್ಷಿಸುತ್ತಿರುವ ಪ್ರತಿಕಾಯ ಕಾಕ್ಟೈಲ್ ಅನ್ನು ಟ್ರಂಪ್ ತೆಗೆದುಕೊಳ್ಳುತ್ತಿದ್ದಾರೆ. ಈ ಪ್ರಯೋಗದಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲ.

ಡೊನಾಲ್ಡ್ ಟ್ರಂಪ್ ಕೊರೊನಾ ಸೋಂಕಿಗೆ ಪಡೆಯುತ್ತಿರುವ ಚಿಕಿತ್ಸೆ ಏನು?ಡೊನಾಲ್ಡ್ ಟ್ರಂಪ್ ಕೊರೊನಾ ಸೋಂಕಿಗೆ ಪಡೆಯುತ್ತಿರುವ ಚಿಕಿತ್ಸೆ ಏನು?

ಪ್ರಾಯೋಗಿಕ ಕೊವಿಡ್ 19 ಔಷಧವೆಂದರೆ ಮೊನೊಕ್ಲೋನಲ್ ಪ್ರತಿಕಾಯಗಳು, ವೈರಸ್‌ಗೆ ಮಾನವ ಪ್ರತಿಕಾಯಗಳ ಪ್ರತಿಯನ್ನು ತಯಾರಿಸಲಾಗುತ್ತದೆ. ಚುಚ್ಚುಮದ್ದಿನ ಆಂಟಿಬಾಡಿಗಳನ್ನು ತಕ್ಷಣವೇ ವೈರಸ್ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾಗಿದೆ. ಮತ್ತು ಕೊವಿಡ್ 19 ಅನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಈ ಮೊನೊಕ್ಲೋನಲ್ ಆಂಟಿಬಾಟಿ ಅಭಿವೃದ್ಧಿಪಡಿಸಲಾಗುತ್ತಿದೆ.

English summary
Coronavirus disease confirmed for Trump. It happened just before the November 3rd US Election. This incident is expected to have a significant impact on the US presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X