ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಭಾರತವನ್ನು ಬೆದರಿಸಲು ಯತ್ನ,ಅಮೆರಿಕ ಕಳವಳ

|
Google Oneindia Kannada News

ವಾಷಿಂಗ್ಟನ್,ಫೆಬ್ರವರಿ 02: ಚೀನಾವು ಗಡಿ ವಿಚಾರದಲ್ಲಿ ಭಾರತವನ್ನು ಬೆದರಿಸಲು ಯತ್ನಿಸುತ್ತಿರುವ ಕುರಿತು ಅಮೆರಿಕ ಕಳವಳ ವ್ಯಕ್ತಪಡಿಸಿದೆ.

ಚೀನಾ- ಭಾರತ ನಡುವಣ ಗಡಿ ಬಿಕ್ಕಟ್ಟು ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಜೋ- ಬೈಡೆನ್ ಆಡಳಿತ ನೆರೆಯ ರಾಷ್ಟ್ರವನ್ನು ಬೆದರಿಸುವ ಚೀನಾದ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿರುವುದಾಗಿ ತಿಳಿಸಿದೆ.

"ಚೀನಾದ ಗಡಿ ಅತಿಕ್ರಮಣದ ಹಿಂದೆ 40 ವರ್ಷದ ಇತಿಹಾಸ"

ಇಂಡೋ- ಫೆಸಿಪಿಕ್ ವಲಯದಲ್ಲಿ ತನ್ನ ಮೈತ್ರಿ ರಾಷ್ಟ್ರಗಳೊಂದಿಗೆ ಮೌಲ್ಯಗಳನ್ನು ಹಂಚಿಕೊಳ್ಳುವಲ್ಲಿ ಅಮೆರಿಕ ಬದ್ಧವಾಗಿರುವುದಾಗಿ ನ್ಯೂ ಬೈಡೆನ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Concerned By Chinas Attempts To Intimidate Neighbours: White House

ಮೇ 5 ರಿಂದ ಪೂರ್ವ ಲಡಾಖ್ ನಲ್ಲಿ ಚೀನಾ ಮತ್ತು ಭಾರತ ಸೇನೆಗಳನ್ನು ಸೈನಿಕರನ್ನು ನಿಯೋಜಿಸಿದ ನಂತರ ಸಂಘರ್ಘ ಉಂಟಾಗಿದೆ. ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಣೆ ಹಲವು ಬಾರಿ ಮಿಲಿಟರಿ ಮತ್ತು ರಾಯಭಾರಿಗಳ ಮಟ್ಟದ ಮಾತುಕತೆ ನಡೆದಿದೆ. ಆದಾಗ್ಯೂ, ಸಮಸ್ಯೆ ಬಗೆಹರಿದಿಲ್ಲ.

ಇತ್ತೀಚಿಗೆ ಚೀನಾದಿಂದ ಭಾರತದ ದೇಶದೊಳಗೆ ನುಸುಳುವಿಕೆ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೆರೆಯ ರಾಷ್ಟ್ರವನ್ನು ಬೆದರಿಸುವ ಚೀನಾದ ಪ್ರಯತ್ನದಿಂದ ಅಮೆರಿಕ ಕಳವಳಗೊಂಡಿದ್ದು, ಇಂಡೋ ಫೆಸಿಪಿಕ್ ವಲಯದಲ್ಲಿನ ತಮ್ಮ ಗೆಳೆಯರು, ಮೈತ್ರಿ ಪಾಲುದಾರರೊಂದಿಗೆ ನಮ್ಮ ಸೌಹಾರ್ದತೆ. ಭದ್ರತೆ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳಲು ಬದ್ಧವಾಗಿರುವುದಾಗಿ ಅವರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಹತ್ತಿರದಿಂದ ನಿರ್ವಹಿಸುತ್ತಿದ್ದು, ಭಾರತ ಹಾಗೂ ಚೀನಾ ಸರ್ಕಾರದ ನಡುವಣ ನಡೆಯುತ್ತಿರುವ ಮಾತುಕತೆಯನ್ನು ಗಮನಿಸುತ್ತಿದ್ದೇವೆ. ಗಡಿ ವಿವಾದವನ್ನು ನೇರ ಮಾತುಕತೆ ಹಾಗೂ ಶಾಂತಿಯುತವಾಗಿ ಬಗೆಹರಿಸಲು ನಿರಂತರ ಬೆಂಬಲ ನೀಡುತ್ತಿರುವುದಾಗಿ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಇಮಿಲಿ ಜೆ ಹಾರ್ನ್ ಸೋಮವಾರ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

English summary
In its first response to the China-India border standoff, the Biden administration has voiced concern over Beijing's ongoing attempts to "intimidate" its neighbours and said it was closely monitoring the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X