ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೆ ಡೆಲ್ಟಾ ರೂಪಾಂತರದ್ದೇ ಅತಿ ದೊಡ್ಡ ಚಿಂತೆ ಎಂದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜುಲೈ 01: ಕೊರೊನಾ ಲಸಿಕೆಗಳನ್ನು ಪಡೆದುಕೊಳ್ಳದ ಹಾಗೂ ಭಾಗಶಃ ಲಸಿಕೆ ಪಡೆದುಕೊಂಡಿರುವ ಭಾಗಗಳಲ್ಲಿ ಡೆಲ್ಟಾ ರೂಪಾಂತರ ಹರಡುವಿಕೆಯ ಆತಂಕ ಎದುರಾಗಿದೆ. ಈ ಕುರಿತು ವಿಶೇಷ ಕಾಳಜಿ ವಹಿಸಿದ್ದೇವೆ ಎಂದು ಅಮೆರಿಕ ಆಡಳಿತ ಕಳವಳ ವ್ಯಕ್ತಪಡಿಸಿದೆ.

"ಲಸಿಕೆ ಪಡೆಯದ ಜನಸಂಖ್ಯೆ ಮೇಲೆ ಹಾಗೂ ಭಾಗಶಃ ಲಸಿಕೆ ನೀಡಿಕೆಯಾಗಿರುವ ಕಡೆಗಳಲ್ಲಿ ಡೆಲ್ಟಾ ರೂಪಾಂತರ ಬಹುಬೇಗ ವ್ಯಾಪಿಸುವ ಸಾಧ್ಯತೆ ಕುರಿತು ಕಾಳಜಿ ವಹಿಸಿದ್ದೇವೆ" ಎಂದು ಗೃಹ ವ್ಯವಹಾರಗಳ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಡಾ. ಟೆರ್ರಿ ಅಡಿರಿಮ್ ಹೇಳಿದ್ದಾರೆ.

Concerned About Impact Of Delta Variant On Unvaccinated Population Says US

ಕೊರೊನಾ ಎರಡನೇ ಅಲೆಯಿಂದ ತತ್ತರಿಸಿದ ರಾಷ್ಟ್ರಗಳಲ್ಲಿ ಅಮೆರಿಕವೂ ಒಂದಾಗಿತ್ತು. ಜಾನ್ ಹಾಪ್‌ಕಿನ್ಸ್ ಯೂನಿವರ್ಸಿಟಿ ಕೊರೊನಾ ಟ್ರ್ಯಾಕರ್ ಮಾಹಿತಿಯಂತೆ, ಅಮೆರಿಕದಲ್ಲಿ 33,566,000 ದೃಢಪಟ್ಟ ಪ್ರಕರಣಗಳಿದ್ದು, 602,400 ಮರಣ ಸಂಭವಿಸಿದ್ದವು. ಇದೀಗ ಕ್ರಮೇಣ ಮತ್ತೆ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

"ಅತಿ ವೇಗವಾಗಿ ಹರಡಬಲ್ಲ ಡೆಲ್ಟಾ ರೂಪಾಂತರ, ಕೊರೊನಾ ನಿರ್ಮೂಲನೆ ಮಾಡುವ ಅಮೆರಿಕದ ಪ್ರಯತ್ನಕ್ಕೆ ದೊಡ್ಡ ತೊಡಕಾಗಿದೆ" ಎಂದು ದೇಶದ ಪ್ರಮುಖ ಸಾಂಕ್ರಾಮಿಕ ರೋಗತಜ್ಞ ಹಾಗೂ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಬುಧವಾರ ಎಚ್ಚರಿಸಿದ್ದರು.

ಚೀನಾ ಆಯ್ತು ಅಮೆರಿಕದಲ್ಲೂ ಆತಂಕ! ಜನಸಂಖ್ಯೆ ಕುಸಿಯುತ್ತಿದೆ ಯಾಕೆ? ಚೀನಾ ಆಯ್ತು ಅಮೆರಿಕದಲ್ಲೂ ಆತಂಕ! ಜನಸಂಖ್ಯೆ ಕುಸಿಯುತ್ತಿದೆ ಯಾಕೆ?

"ಡೆಲ್ಟಾ ರೂಪಾಂತರವು ದೇಶದಲ್ಲಿ ಎರಡು ವಾರಗಳ ಹಿಂದೆ ಶೇ 10ರಷ್ಟಿತ್ತು. ಈಗ ದಾಖಲಾಗುತ್ತಿರುವ ಎಲ್ಲಾ ಹೊಸ ಪ್ರಕರಣಗಳಲ್ಲಿ ಶೇ. 20ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಈ ರೂಪಾಂತರವಿದೆ. ಇದರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಬ್ರಿಟನ್‌ನಲ್ಲಿಯೂ ಇದೇ ಪರಿಸ್ಥಿತಿಯಿದೆ. ಅಮೆರಿಕದ ಕೊರೊನಾ ನಿರ್ಮೂಲನೆ ಪ್ರಯತ್ನಕ್ಕೆ ಡೆಲ್ಟಾ ಅತಿ ದೊಡ್ಡ ಮಾರಕವಾಗಿದೆ" ಎಂದು ಡಾ. ಫೌಸಿ ಆತಂಕ ವ್ಯಕ್ತಪಡಿಸಿದ್ದಾರೆ.

"ಆದರೆ ಈ ನಡುವೆ ಒಳ್ಳೆಯ ಸುದ್ದಿ ಎಂದರೆ, ಅಮೆರಿಕದ ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿವೆ ಎಂಬುದು. ಲಸಿಕೆ ಎಂಬ ಸಾಧನ ಬಳಸಿ ಸೋಂಕನ್ನು ಹೊಡೆದೋಡಿಸೋಣ" ಎಂದು ಜನರಿಗೆ ಕರೆ ನೀಡಿದ್ದಾರೆ.

ಲಸಿಕೆಯ ಎರಡನೇ ಡೋಸ್ ಪಡೆದ ನಂತರದ ಎರಡು ವಾರಗಳಲ್ಲಿ ಡೆಲ್ಟಾ ರೂಪಾಂತರದ ರೋಗಲಕ್ಷಣಗಳನ್ನು ತಡೆಗಟ್ಟುವಲ್ಲಿ ಫೈಜರ್ ಹಾಗೂ ಬಯೋಂಟೆಕ್ ಲಸಿಕೆಗಳು ಶೇ 88ರಷ್ಟು ಪರಿಣಾಮಕಾರಿಯಾಗಿವೆ ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ಕೊರೊನಾ ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾಧ್ಯವಾದಷ್ಟು ಬೇಗ ಲಸಿಕೆ ಪಡೆಯುವಂತೆ ಅಧಿಕಾರಿಗಳು ಅಮೆರಿಕನ್ನರಿಗೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದಾರೆ.

English summary
United States administration has said that it was particularly concerned with the impact of Deta variant country's unvaccinated or partially vaccination populations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X