ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡನ್ ದುರ್ಬಲ ಅಧ್ಯಕ್ಷ, ಅವರು ಯುದ್ಧಗಳನ್ನು ಸಾರಬಹುದು: ಚೀನಾ

|
Google Oneindia Kannada News

ಬೀಜಿಂಗ್, ನವೆಂಬರ್ 24: ಜೋ ಬೈಡನ್ ಅಧ್ಯಕ್ಷರಾದ ಬಳಿಕ ಅಮೆರಿಕದೊಂದಿಗಿನ ಚೀನಾ ಸಂಬಂಧ ತಾನಾಗಿಯೇ ಸುಧಾರಣೆಯಾಗುತ್ತದೆ ಎಂಬ ಭ್ರಮೆಯನ್ನು ಚೀನಾ ಬಿಟ್ಟುಬಿಡಬೇಕು ಎಂದಿರುವ ಚೀನಾ ಸರ್ಕಾರದ ಸಲಹೆಗಾರರೊಬ್ಬರು, ವಾಷಿಂಗ್ಟನ್‌ನ ಕಠಿಣ ನಿಲುವಿಗೆ ಬೀಜಿಂಗ್ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.

ಶೆಹಜಾನ್ ಮೂಲದ ಚಿಂತಕರ ಚಾವಡಿ ಅಡ್ವಾನ್ಸಡ್ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಆಂಡ್ ಕಂಟೆಂಪೊರರಿ ಚೀನಾ ಸ್ಟಡೀಸ್‌ನ ಡೀನ್ ಝೆಂಗ್ ಯೊಂಗ್ನೈನ್, ಅಮೆರಿಕದೊಂದಿಗಿನ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಎಲ್ಲ ಅವಕಾಶಗಳನ್ನೂ ಚೀನಾ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಅಮೆರಿಕಾದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿ ಅಮೆರಿಕಾದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿ

'ಹಳೆಯ ಒಳ್ಳೆಯ ದಿನಗಳು ಹೊರಟುಹೋದವು. ಹಲವು ವರ್ಷಗಳಿಂದ ತೀವ್ರವಾಗಿ ಒಂದುಗೂಡಿರುವ ಅಮೆರಿಕದ ಶೀತಲ ಸಮರ ಸ್ಥಿತಿಯು ರಾತ್ರೋರಾತ್ರಿ ಮಾಯವಾಗುವುದಿಲ್ಲ' ಎಂದು ಹೇಳಿದ್ದಾರೆ.

 Chinese Adviser Says Biden Is Very Weak President, He Could Start Wars

ಶ್ವೇತಭವನ ಪ್ರವೇಶಿಸಿದ ಬಳಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಚೀನಾದೆಡೆಗಿನ ಜನರ ಅಸಮಾಧಾನದ ಪ್ರಯೋಜನ ಪಡೆಯಬಹುದು. ಅಮೆರಿಕ ಸಮಾಜ ಹರಿದು ಹಂಚಿಹೋಗಿದೆ. ಆದರೆ ಅದರ ಬಗ್ಗೆ ಜೀ ಬೈಡನ್ ಏನೂ ಮಾಡಲಾರರು ಎಂದಿದ್ದಾರೆ.

ಜಿಲ್ ಬೈಡನ್ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ ನೇಮಕಜಿಲ್ ಬೈಡನ್ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ ನೇಮಕ

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

'ಜೋ ಬೈಡನ್ ನಿಶ್ಚಿತವಾಗಿಯೂ ಒಬ್ಬ ದುರ್ಬಲ ಅಧ್ಯಕ್ಷ. ಅವರಿಗೆ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೆ ಹೋದಾಗ ಅವರು ರಾಜತಾಂತ್ರಿಕವಾದ ಯಾವುದಾದರೂ ಅಸ್ತ್ರ ಕೈಗೆತ್ತಿಕೊಳ್ಳುತ್ತಾರೆ. ಚೀನಾ ವಿರುದ್ಧ ಏನಾದರೂ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್‌ಗೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಪ್ರಚುರಪಡಿಸುವ ಆಸಕ್ತಿ ಇರಲಿಲ್ಲ ಎಂದು ನಾವು ಹೇಳಿದರೆ, ಬೈಡೆನ್‌ಗೆ ಇದೆ. ಟ್ರಂಪ್‌ಗೆ ಯುದ್ಧದಲ್ಲಿಯೂ ಆಸಕ್ತಿ ಇರಲಿಲ್ಲ. ಆದರೆ ಡೆಮಾಕ್ರಟಿಕ್ ಅಧ್ಯಕ್ಷ (ಬೈಡನ್) ಯುದ್ಧ ಶುರುಮಾಡಬಹುದು' ಎಂದು ಹೇಳಿದ್ದಾರೆ.

English summary
A Chinse government adviser said, president elect Joe Biden ias very weak president. He could start wars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X