ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾವು ಭಾರತದ ಕೊರೊನಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದೆ: ಅಮರಿಕ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 03: ಚೀನಾವು ಕೊರೊನಾ ಸೋಂಕನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಅದಕ್ಕೆ ಭಾರತವನ್ನೇ ಉದಾಹರಣೆಯನ್ನಾಗಿ ನೀಡಿದೆ.

Recommended Video

MJ Appaji Gowda JDS ಶಕ್ತಿ ಭದ್ರಾವತಿ ಶಾಸಕ ಇನ್ನಿಲ್ಲ | Oneindia Kannada

ಯುಎಸ್ ಡಿಪ್ಲೋಮ್ಯಾಟ್ ಡೇವಿಡ್ ಸ್ಟಿಲ್‌ವೆಲ್ ಈ ಕುರಿತು ಮಾತನಾಡಿದ್ದು, ಕೊರೊನಾ ಸೋಂಕು ವುಹಾನ್‌ನಿಂದ ಹರಡಲು ಆರಂಭಿಸಿದ ದಿನದಿಂದ ಚೀನಾವು ಭಾರತವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.

ಪಾಂಗಾಂಗ್ ಸರೋವರದ ಬಳಿ ಪ್ರಚೋದನಕಾರಿ ಕ್ರಮ ಮುಂದುವರೆಸಿದ ಚೀನಾಪಾಂಗಾಂಗ್ ಸರೋವರದ ಬಳಿ ಪ್ರಚೋದನಕಾರಿ ಕ್ರಮ ಮುಂದುವರೆಸಿದ ಚೀನಾ

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿ ಅದರ ಬಗ್ಗೆ ಗಮನ ನೀಡುತ್ತಿರುವ ಸಂದರ್ಭದಲ್ಲಿ ಚೀನಾ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಈ ಸಂದರ್ಭದಲ್ಲಿ ದಾಳಿ ಮಾಡಿದರೆ ಮತ್ತಷ್ಟು ಭೂಭಾಗವನ್ನು ವಶಪಡಿಸಿಕೊಳ್ಳಬಹುದು ಎನ್ನುವ ಹಗಲುಕನಸನ್ನು ಕಾಣುತ್ತಿದೆ.

ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

ಡೇವಿಡ್ ಮಾತನಾಡಿ, ಬೀಜಿಂಗ್‌ನಲ್ಲಿರುವ ನನ್ನ ಸ್ನೇಹಿತರಿಗೆ ಹೇಳುವುದಿಷ್ಟೆ, ಮಾತಿನಿಂದ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಿ, ಭಾರತ-ಚೀನಾ ಮಧ್ಯೆ ಉತ್ತಮ ಸಂಬಂಧ ವೃದ್ಧಿಯಾಗಲಿ.

ಚೀನಾ ಭಾರತದ ಮಧ್ಯತೆ ಶಾಂತಿ ಕಾಪಾಡಲು ಅಮೆರಿಕ ಪ್ರಯತ್ನ

ಚೀನಾ ಭಾರತದ ಮಧ್ಯತೆ ಶಾಂತಿ ಕಾಪಾಡಲು ಅಮೆರಿಕ ಪ್ರಯತ್ನ

ಚೀನಾ ಹಾಗೂ ಭಾರತದ ಗಡಿ ಮಧ್ಯೆ ಶಾಂತಿ ಕಾಪಾಡಲು ಅಮೆರಿಕ ಯತ್ನಿಸುತ್ತಿದೆ. ಚೀನಾವು ತನ್ನ ಸೇನೆಯನ್ನು ಬಳಸಿಕೊಳ್ಳದೆ, ಪ್ರಾಣಹಾನಿ ಮಾಡದೆ ಭಾರತದ ಜೊತೆ ರಾಜಿ ಮಾಡಿಕೊಳ್ಳಬೇಕು, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.

ಭಾರತ, ಚೀನಾ ನಡುವೆ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆ

ಭಾರತ, ಚೀನಾ ನಡುವೆ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆ

ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಚೀನಾದ "ಪ್ರಚೋದನಕಾರಿ ಕ್ರಮಗಳ" ನಂತರ ಆ ಪ್ರದೇಶದ ಪರಿಸ್ಥಿತಿ ಬುಧವಾರ ಮತ್ತಷ್ಟು ಸೂಕ್ಷ್ಮವಾಗಿದ್ದು, ಉದ್ವಿಗ್ನತೆಯನ್ನು ನಿವಾರಿಸಲು ಎರಡೂ ಕಡೆಯ ಸೇನಾ ಕಮಾಂಡರ್‌ಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ಉದ್ದೇಶದಿಂದ ಉಭಯ ದೇಶಗಳ ಸೇನೆ ಚುಶುಲ್‌ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದವು ಎಂದು ಅವರು ಹೇಳಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಸಹ ಇದೇ ರೀತಿಯ ಮಾತುಕತೆ ನಡೆದಿದ್ದು, ಇಂದು ಆರು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಆದರೆ ಮಾತುಕತೆ ಫಲಪ್ರದವಾಗಿಲ್ಲ.

ಆಗಸ್ಟ್ 29-30 ರಂದು ಪಾಂಗಾಂಗ್‌ನಲ್ಲಿ ಅತಿಕ್ರಮ

ಆಗಸ್ಟ್ 29-30 ರಂದು ಪಾಂಗಾಂಗ್‌ನಲ್ಲಿ ಅತಿಕ್ರಮ

ಆ.29-30 ರ ರಾತ್ರಿ ಭಾರತೀಯ ಸೇನೆ ಚೀನಾ ಸಿಬ್ಬಂದಿಗಳ ಚಲನವಲನಗಳನ್ನು ಗುರುತಿಸಿದ್ದು, ಲಡಾಕ್ ನ ಪ್ಯಾಂಗಾಂಗ್ ತ್ಸೋ ಲೇಕ್ ನ ಪೂರ್ವದಲ್ಲಿರುವ ಚುಶುಲ್ ನಲ್ಲಿ ಅತಿಕ್ರಮಣ ಮಾಡುವ ಚೀನಾ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು.

English summary
India is among the countries that China has taken advantage of since the outbreak of the COVID-19 from Wuhan, US diplomat David Stilwell said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X