ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತದ ವಿರುದ್ದ ಪಾಕಿಸ್ತಾನವನ್ನು ಚೀನಾ ಬಳಸಬಹುದು'

|
Google Oneindia Kannada News

ವಾಷಿಂಗ್ಟನ್‌, ಸೆಪ್ಟೆಂಬರ್‌ 02: "ಒಂದು ಕಾಲದಲ್ಲಿ ಅಮೆರಿಕದ ನಿಯಂತ್ರಣದಲ್ಲಿದ್ದ ಅಫ್ಘಾನಿಸ್ತಾನದ ಬಾಗ್ರಾಮ್ ವಾಯುಪಡೆ ನೆಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಚೀನಾ ಮುಂದಾಗಬಹುದು," ಎಂದು ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಬುಧವಾರ ಫಾಕ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ನಿಕ್ಕಿ ಹ್ಯಾಲೆ, "ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ವಿರುದ್ದವಾಗಿ ನಾವು ಹೋರಾಟ ಮಾಡುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ಈ ಹಿನ್ನೆಲೆ ರಷ್ಯಾದಂತಹ ನಟರು ನಮ್ಮನ್ನು ಹ್ಯಾಕ್ ಮಾಡುವುದನ್ನು ಮುಂದುವರಿಸುತ್ತಾರೆ," ಎಂದು ನಿಕ್ಕಿ ಹ್ಯಾಲೆ ಟೀಕಿಸಿದ್ದಾರೆ.

ನಿಮ್ಮನ್ನು ಬೇಟೆಯಾಡಿ ಕೊಲ್ಲುತ್ತೇವೆ; ಪ್ರತಿಜ್ಞೆ ಮಾಡಿದ ಬೈಡನ್ನಿಮ್ಮನ್ನು ಬೇಟೆಯಾಡಿ ಕೊಲ್ಲುತ್ತೇವೆ; ಪ್ರತಿಜ್ಞೆ ಮಾಡಿದ ಬೈಡನ್

"ನಾವು ಈ ಸಂದರ್ಭದಲ್ಲಿ ಚೀನಾವನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಯಾಕೆಂದರೆ ಚೀನಾವು ಅಫ್ಘಾನಿಸ್ತಾನದ ಬಾಗ್ರಾಮ್ ವಾಯುಪಡೆ ನೆಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಹಾಗೆಯೇ ಅಫ್ಘಾನಿಸ್ತಾನಕ್ಕೆಯೇ ತೆರಳುವ ಎಲ್ಲಾ ಸಿದ್ದತೆಯನ್ನು ಚೀನಾ ಮಾಡುತ್ತಿದೆ. ಹಾಗೆಯೇ ಭಾರತದ ವಿರುದ್ದವಾಗಿ ಪಾಕಿಸ್ತಾನವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ," ಎಂದು ಸುದ್ದಿ ಸಂಸ್ಥೆ ಪಿಟಿಐನ ವರದಿಯೊಂದನ್ನು ಉಲ್ಲೇಖ ಮಾಡಿ ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.

China may use Pakistan against India Says Former US envoy Nikki Haley

ತಾಲಿಬಾನ್‌ ಈ ಸಂದರ್ಭದಲ್ಲಿ ನಮಗೆ ನೀಡಿರುವ ಸವಾಲನ್ನು ಯುಎಸ್‌ ಎದುರಿಸಬೇಕು. ಯುಎಸ್‌ ತನ್ನ ಸೈಬರ್‌ ಕ್ರೈಮ್‌ ವಿಭಾಗವನ್ನು ಬಲಪಡಿಸಬೇಕು ಹಾಗೂ ತಮ್ಮ ಮಿತ್ರ ಪಕ್ಷದೊಂದಗಿನ ಸಂಬಂಧವನ್ನು ಗಟ್ಟಿಗೊಳಿಸಬೇಕು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುಎಸ್‌ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಾಸ್‌ ಪಡೆದ ವಿಚಾರದಲ್ಲಿ ನಿಕ್ಕಿ ಹ್ಯಾಲೆ ನಿರಂತರವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. "ಅಮೆರಿಕ ಆಡಳಿತವು ತನ್ನ ಮಿತ್ರರಾಷ್ಟ್ರಗಳಾದ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನು ತಲುಪುವ ಸಮಯ ಬಂದಿದೆ," ಎಂದಿದ್ದಾರೆ. "ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆಡಳಿತವು 'ಯುಎಸ್ ಮಿತ್ರ ಪಕ್ಷಗಳ ಬೆನ್ನಿಗಿದೆ' ಎಂಬ ಆಶ್ವಾಸನೆ ನೀಡಬೇಕು," ಎಮದು ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.

'ನಾನು ಯಾರನ್ನೂ ನಂಬಲ್ಲ': ಮಾತು ತಪ್ಪಿದ ತಾಲಿಬಾನ್‌ ಬಗ್ಗೆ ಬೈಡನ್‌'ನಾನು ಯಾರನ್ನೂ ನಂಬಲ್ಲ': ಮಾತು ತಪ್ಪಿದ ತಾಲಿಬಾನ್‌ ಬಗ್ಗೆ ಬೈಡನ್‌

ಭಯೋತ್ಪಾದನೆ ಹಾಗೂ ಪ್ರತಿ ಭಯೋತ್ಪಾದನೆಯ ಬಗ್ಗೆ ನಿಕ್ಕಿ ಹ್ಯಾಲೆ ಒತ್ತಿ ಹೇಳಿದ್ದಾರೆ. "ನಮ್ಮ ಸೈಬರ್ ಭದ್ರತೆ ಬಲವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು," ಎಂದು ಕೂಡಾ ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು. ಈ ಹಿಂದೆ, ಅಫ್ಘಾನಿಸ್ತಾನದಿಂದ ಯುಎಸ್ ಪಡೆಗಳನ್ನು ಹಿಂತೆಗೆದುಕೊಂಡಿರುವುದಕ್ಕೆ ನಿಕ್ಕಿ ಹ್ಯಾಲೆ ಜೋ ಬೈಡೆನ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಅಸಹ್ಯಕರವಾಗಿದೆ," ಎಂದಿದ್ದರು.

"ಅಧ್ಯಕ್ಷ ಜೋ ಬೈಡೆನ್‌ ನಮ್ಮ ಸೇವಾ ಸದಸ್ಯರು ಮತ್ತು ಮಿಲಿಟರಿ ಕುಟುಂಬಗಳ ಮೇಲಿರುವ ನಂಬಿಕೆಯ ಕಳೆದುಕೊಂಡರು. ಹಾಗೆಯೇ ನಮ್ಮ ಮಿತ್ರ ದೇಶಗಳಿಗೆ ನಮಮ್ ಮೇಲಿದ್ದ ನಂಬಿಕೆಯನ್ನು ಹುಸಿಗೊಳಿಸಿದರು. ಹಾಗೆಯೇ ಅಮೆರಿಕದ ಜನರ ನಂಬಿಕೆಯನ್ನು ಕೂಡಾ ಕಳೆದುಕೊಂಡಿದ್ದಾರೆ," ಎಂದು ನಿಕ್ಕಿ ಹ್ಯಾಲೆ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನಯನ್ನು ವಾಪಾಸ್‌ ಪಡೆದ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ರಷ್ಯಾ ಮತ್ತು ಚೀನಾ ಅಫ್ಘಾನಿಸ್ತಾನದಲ್ಲಿ ಜೋ ಬೈಡೆನ್‌ ತನ್ನ ಸೇನೆಯನ್ನು ವಾಪಾಸ್‌ ಪಡೆದಿರುವ ವಿಚಾರವನ್ನು ಸಂಭ್ರಮಿಸುತ್ತಿದೆ. ಹಾಗೆಯೇ ಈ ಸಂದರ್ಭದಲ್ಲಿ ಜೋ ಬೈಡೆನ್‌ರ ವಿದೇಶಾಂಗ ನೀತಿಯ ಪರಿಣಾಮಗಳು ಅಮೆರಿಕಕ್ಕೆ ದುರಂತವಾಗಬಹುದು," ಎಂದು ಅಭಿಪ್ರಾಯಿಸಿದ್ದಾರೆ.

ಈ ನಡುವೆ ಮಂಗಳವಾರ ಶ್ವೇತಭವನದಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಜೋ ಬೈಡೆನ್‌, "ಯುಎಸ್‌ ರಷ್ಯಾ ಮತ್ತು ಚೀನಾದಂತಹ ಪ್ರಬಲ ವಿರೋಧಿಗಳ ಸವಾಲುಗಳನ್ನು ಎದುರಿಸಬೇಕಾಗಿದೆ," ಎಂದು ಹೇಳಿದರು. "ಅಫ್ಘಾನಿಸ್ತಾನದಲ್ಲಿ ಅಮೆರಿಕ ತಾಲಿಬಾನ್‌ ವಿರುದ್ದದ ತನ್ನ ಯುದ್ದವನ್ನು ಕೊನೆಗೊಳಿಸಿರುವುದು, ಚೀನಾ ಮತ್ತು ರಷ್ಯಾಗಳಿಂದ ಹೆಚ್ಚುತ್ತಿರುವ ಸವಾಲುಗಳ ನಿಟ್ಟಿನಲ್ಲಿ ಅಮೆರಿಕದ ವಿದೇಶಾಂಗ ನೀತಿಯನ್ನು ಮರುಮೌಲ್ಯಮಾಪನ ಮಾಡಲು ಪ್ರಮುಖ ಹೆಜ್ಜೆಯಾಗಿದೆ," ಎಂದಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
China eyeing Afghanistan's Bagram air base and may use Pakistan against India Says Former US envoy Nikki Haley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X