ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಉತ್ತರ ಗಡಿಯಲ್ಲಿ ಚೀನಾದ 60 ಸಾವಿರ ಸೈನಿಕರ ನಿಯೋಜನೆ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 10: ಚೀನಾವು ಭಾರತದ ಉತ್ತರ ಗಡಿಯಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ಯುಎಸ್ ಸೆಕ್ರೆಟರಿ ಮೈಕ್ ಪೊಂಪಿಯೋ ಹೇಳಿದ್ದಾರೆ.

ಈ ಮೂಲಕ ಚೀನಾವು ಕೆಟ್ಟ ನಡವಳಿಕೆಯನ್ನು ಪ್ರದರ್ಶಿಸುತ್ತಿದೆ. ಹಾಗೆಯೇ ಕ್ವಾಡ್‌ ತಂಡಕ್ಕೆ ಬೆದರಕೆಯನ್ನೂ ಒಡ್ಡುತ್ತಿದೆ ಎಂದರು.

ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುತ್ತಿದೆಯಾ ಚೀನಾ? ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುತ್ತಿದೆಯಾ ಚೀನಾ?

ಕ್ವಾಡ್ ಗುಂಪು ಎಂದು ಕರೆಯಲ್ಪಡುವ ಇಂಡೋ-ಫೆಸಿಫಿಕ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಯುಎಸ್, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಟೋಕಿಯೋದಲ್ಲಿ ಮಾತುಕತೆ ನಡೆಸಿತ್ತು.

China Has Deployed 60,000 Soldiers On Indias Northern Border

ಕೊವಿಡ್ ಸಾಂಕ್ರಾಮಿಕ ರೋಗವು ಆರಂಭವಾದ ನಂತರ ಮೊದಲ ವೈಯಕ್ತಿಕ ಮಾತುಕತೆ ಇದಾಗಿತ್ತು. ಇಂಡೋ-ಪೆಸಿಫಿಕ್, ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ದಲ್ಲಿ ಚೀನಾದ ಆಕ್ರಮಣಕಾರಿ ಮಿಲಿಟರಿ ನಡವಳಿಕೆಯ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಜಪಾನ್, ಯುಎಸ್ ಮತ್ತು ಆಸ್ಟ್ರೇಲಿಯಾದೊಂದಿಗೆ ಭಾರತ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುತ್ತಿದೆ.ಭಾರತದ ಉತ್ತರ ಭಾಗಲದಲ್ಲಿ ಚೀನಾವು 60 ಸಾವಿರ ಸೈನಿಕರನ್ನು ನಿಯೋಜಿಸುತ್ತಿದೆ.

ವುಹಾನ್‌ನಲ್ಲಿಯೇ ಕೊರೊನಾ ಸೋಂಕು ಉತ್ಪತ್ತಿಯಾಯಿತೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಆಸ್ಟ್ರೇಲಿಯಾ ಕೇಳಿತ್ತು, ಆದರೆ ಚೀನಾದ ಕಮ್ಯುನಿಸ್ಟ್ ಪಕ್ಷವು ಬೆದರಿಸಿ ಆಸ್ಟ್ರೇಲಿಯಾದ ಬಾಯಿ ಮುಚ್ಚಿಸಿದೆ. ಚೀನಾವು ಹಾಕುತ್ತಿರುವ ಬೆದರಿಕೆಯಿಂದ ಅಮೆರಿಕದವರನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ.

English summary
China has amassed more than 60,000 troops along the Line of Actual Control with India, US Secretary of State Mike Pompeo has said as he hit out at Beijing for its "bad behaviour" and the threats it poses to the Quad countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X