ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಪರೀಕ್ಷೆ: ಭಾರತ ಮತ್ತು ಚೀನಾ ಬಗ್ಗೆ ಟ್ರಂಪ್ ಹೇಳಿದ್ದೇನು?

|
Google Oneindia Kannada News

ವಾಷಿಂಗ್ಟನ್, ಜೂನ್ 6: ''ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾದ ಚೀನಾ ಮತ್ತು ಭಾರತದಲ್ಲಿ ಹೆಚ್ಚು ಕೋವಿಡ್-19 ಪರೀಕ್ಷೆ ನಡೆಸಬೇಕಿತ್ತು. ಅದು ಸಾಧ್ಯವಾಗಿದ್ದರೆ, ಅಮೇರಿಕಾಗಿಂತ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಚೀನಾ ಮತ್ತು ಭಾರತದಲ್ಲಿ ಪತ್ತೆಯಾಗುತ್ತಿದ್ದರು'' ಎಂದು ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Recommended Video

India surpasses Italy in Corona cases count | Oneindia kannada

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಇಲ್ಲಿಯವರೆಗೂ 20 ಮಿಲಿಯನ್ ಮಂದಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಜರ್ಮನಿಯಲ್ಲಿ 4 ಮಿಲಿಯನ್ ಜನರು ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದಾರೆ. ದಕ್ಷಿಣ ಕೊರಿಯಾದಲ್ಲಿ 3 ಮಿಲಿಯನ್ ಜನರಿಗೆ ಕೋವಿಡ್-19 ಪರೀಕ್ಷೆ ನೆರವೇರಿದೆ.

WHOಗೆ ಮತ್ತೆ ಸೇರ್ಪಡೆಗೊಳ್ಳಲು ಅಮೇರಿಕಾ ಹಾಕಿದೆ ಹೊಸ ಕಂಡೀಷನ್!WHOಗೆ ಮತ್ತೆ ಸೇರ್ಪಡೆಗೊಳ್ಳಲು ಅಮೇರಿಕಾ ಹಾಕಿದೆ ಹೊಸ ಕಂಡೀಷನ್!

ಅಮೇರಿಕಾದಲ್ಲಿ ಇಲ್ಲಿಯವರೆಗೂ 19,65,912 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, ಭಾರತದಲ್ಲಿ 236,954 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಕಂಡುಬಂದಿದೆ. ಇನ್ನೂ ಚೀನಾ ತೋರಿಸಿರುವ ಲೆಕ್ಕದ ಪ್ರಕಾರ, 83,030 ಮಂದಿಗೆ ಮಾತ್ರ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಹೆಚ್ಚು ಟೆಸ್ಟ್ ಮಾಡಿದರೆ ಹೆಚ್ಚು ಪ್ರಕರಣ ದಾಖಲು

ಹೆಚ್ಚು ಟೆಸ್ಟ್ ಮಾಡಿದರೆ ಹೆಚ್ಚು ಪ್ರಕರಣ ದಾಖಲು

ಅಮೇರಿಕಾದಲ್ಲಿನ ಕೋವಿಡ್-19 ಪರೀಕ್ಷೆ ಬಗ್ಗೆ ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ''20 ಮಿಲಿಯನ್ ಗೂ ಅಧಿಕ ಮಂದಿಯನ್ನು ನಾವು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದೇವೆ. ಹೆಚ್ಚು ಟೆಸ್ಟ್ ಮಾಡಿದರೆ ಮಾತ್ರ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗುವುದು ಎಂಬುದು ನಿಮ್ಮೆಲ್ಲರ ಗಮನದಲ್ಲಿರಲಿ'' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೇರಿಕಾಗಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿತ್ತು.!

ಅಮೇರಿಕಾಗಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿತ್ತು.!

''ಚೀನಾ ಅಥವಾ ಭಾರತದಲ್ಲಿ ಹೆಚ್ಚು ಕೋವಿಡ್-19 ಪರೀಕ್ಷೆ ನಡೆಸಿದ್ದರೆ, ಅಮೇರಿಕಾಗಿಂತ ಹೆಚ್ಚು ಸೋಂಕಿತ ಪ್ರಕರಣಗಳು ಅಲ್ಲಿ ಪತ್ತೆಯಾಗುತ್ತಿತ್ತು'' ಎಂದಿದ್ದಾರೆ ಡೊನಾಲ್ಡ್ ಟ್ರಂಪ್.

'ಚೀನಾ ನೀಡಿದ ಕೆಟ್ಟ ಉಡುಗೊರೆ ಕೊರೊನಾ': ಡೊನಾಲ್ಡ್ ಟ್ರಂಪ್ ವಾಗ್ದಾಳಿ'ಚೀನಾ ನೀಡಿದ ಕೆಟ್ಟ ಉಡುಗೊರೆ ಕೊರೊನಾ': ಡೊನಾಲ್ಡ್ ಟ್ರಂಪ್ ವಾಗ್ದಾಳಿ

ಭಾರತದಲ್ಲಿ ಎಷ್ಟು ಮಂದಿಗೆ ಟೆಸ್ಟ್ ಮಾಡಲಾಗಿದೆ.?

ಭಾರತದಲ್ಲಿ ಎಷ್ಟು ಮಂದಿಗೆ ಟೆಸ್ಟ್ ಮಾಡಲಾಗಿದೆ.?

ಅಂದ್ಹಾಗೆ, ಭಾರತದಲ್ಲಿ ಇಲ್ಲಿಯವರೆಗೂ 45,24,317 ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 137,938 ಮಂದಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ಆರನೇ ಸ್ಥಾನಕ್ಕೇರಿದ ಭಾರತ

ಆರನೇ ಸ್ಥಾನಕ್ಕೇರಿದ ಭಾರತ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವುದರಿಂದ, ಜಾಗತಿಕ ಪಟ್ಟಿಯಲ್ಲಿ ಇಟಲಿಯನ್ನು ಭಾರತ ಹಿಂದಕ್ಕೆ ತಳ್ಳಿದೆ. ಆ ಮೂಲಕ ಇಡೀ ವಿಶ್ವದಲ್ಲಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವ ದೇಶಗಳ ಪೈಕಿ ಭಾರತ ಆರನೇ ಸ್ಥಾನಕ್ಕೇರಿದೆ.

ಮೊದಲ ಐದು ಸ್ಥಾನಗಳಲ್ಲಿ ಕ್ರಮವಾಗಿ ಯು.ಎಸ್.ಎ, ಬ್ರೆಜಿಲ್, ರಷ್ಯಾ, ಸ್ಪೇನ್, ಯು.ಕೆ ಇದೆ.

English summary
China and India would have had more Covid-19 cases if they had done more tests says Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X