ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್‌ನಲ್ಲಿ ಓಮಿಕ್ರಾನ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಮಕ್ಕಳೇ ಹೆಚ್ಚು!

|
Google Oneindia Kannada News

ನ್ಯೂಯಾರ್ಕ್, ಡಿಸೆಂಬರ್ 27: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವುದರ ಮಧ್ಯೆ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತ ಮಕ್ಕಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಾಕಿ ಉಳಿದಿರುವ ಕೊವಿಡ್-19 ಸೋಂಕು ಪರೀಕ್ಷೆಯ ವರದಿಯನ್ನು ನೀಡುವಂತೆ ಶ್ವೇತ ಭವನ ಭರವಸೆ ನೀಡಿದೆ.
ನ್ಯೂಯಾರ್ಕ್ ಸ್ಟೇಟ್ ಆರೋಗ್ಯ ಇಲಾಖೆಯ ಹೇಳಿಕೆಯಲ್ಲಿ "ಕೋವಿಡ್ -19 ಸೋಂಕು ಸಂಬಂಧಿಸಿದಂತೆ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಎಚ್ಚರಿಕೆ ನೀಡಿದೆ. ಕಳೆದ ಡಿಸೆಂಬರ್ 5ಕ್ಕೆ ಹೋಲಿಸಿದರೆ ಈ ವಾರ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯು ನಾಲ್ಕು ಪಟ್ಟು ಹೆಚ್ಚಾಗಿದೆ.

ಲಸಿಕೆ ಹಾಕದ ಓಮಿಕ್ರಾನ್ ಸೋಂಕಿತ ಬಲಿ: ಯುಎಸ್ ವರದಿಲಸಿಕೆ ಹಾಕದ ಓಮಿಕ್ರಾನ್ ಸೋಂಕಿತ ಬಲಿ: ಯುಎಸ್ ವರದಿ

ನ್ಯೂಯಾರ್ಕ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚಾಗಿ ಕೊವಿಡ್-19 ಸೋಂಕು ಅಥವಾ ಓಮಿಕ್ರಾನ್ ಸೋಂಕಿನಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪೈಕಿ ಶೇ.50ರಷ್ಟು ಮಂದಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ. ಈ ವಯಸ್ಸಿನ ಮಕ್ಕಳಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತಿಲ್ಲ ಎಂಬ ಅಂಶವನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Children Hospitalization Increase As Omicron Cases Rise at New York

ಅಮೆರಿಕಾದಲ್ಲಿ ಕೊವಿಡ್-19 ಪ್ರಕರಣಗಳು:
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ. ಕಳೆದ ಏಳು ದಿನಗಳಲ್ಲಿ ಪ್ರತಿದಿನ ಸುಮಾರು 190,000 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಹೊಸ ಓಮಿಕ್ರಾನ್ ರೂಪಾಂತರದ ಹೆಚ್ಚಳವು ರಜಾದಿನದ ಆಚರಣೆಗಳಿಂದ ಆಗುತ್ತಿದೆ. ಇದು ಸಾಮಾನ್ಯವಾಗಿ ಪ್ರಯಾಣ ಮತ್ತು ಕುಟುಂಬಗಳ ಕೂಡುವಿಕೆಯಿಂದ ಆಗುತ್ತಿದೆ.
ಉನ್ನತ ಯುಎಸ್ ಸಾಂಕ್ರಾಮಿಕ ಸಲಹೆಗಾರ ಆಂಥೋನಿ ಫೌಸಿ ಭಾನುವಾರ ಕೊವಿಡ್-19 "ಪರೀಕ್ಷೆಯಲ್ಲಿನ ಸಮಸ್ಯೆ"ಯನ್ನು ಒಪ್ಪಿಕೊಂಡರು. ಮುಂದಿನ ತಿಂಗಳು ಅಮೆರಿಕನ್ನರಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು. ಒಂದು ಸಮಸ್ಯೆಯೆಂದರೆ, ನಾವು ಜನವರಿಗೆ ಬರುವವರೆಗೆ ಅದು ಎಲ್ಲರಿಗೂ ಸಂಪೂರ್ಣವಾಗಿ ಲಭ್ಯವಿರುವುದಿಲ್ಲ. ಆದ್ದರಿಂದ ಜನರು ಪರೀಕ್ಷೆಗೆ ಒಳಗಾಗುವಲ್ಲಿ ಇನ್ನೂ ಕೆಲವು ಸಮಸ್ಯೆಗಳಿವೆ. ಆದರೆ ನಾವು ಪರೀಕ್ಷಾ ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ. ಅದನ್ನು "ಶೀಘ್ರದಲ್ಲೇ" ಸರಿಪಡಿಸುತ್ತೇವೆ," ಎಂದು ಫೌಸಿ ಎಬಿಸಿ ನ್ಯೂಸ್‌ಗೆ ತಿಳಿಸಿದರು.

'ಅಸಾಧಾರಣ ಸಾಂಕ್ರಾಮಿಕ':
ಒಮಿಕ್ರಾನ್ "ಅಸಾಧಾರಣವಾಗಿ ಸಾಂಕ್ರಾಮಿಕ"ವಾಗಿದ್ದು, ಸೋಂಕಿತ ಪ್ರಕರಣಗಳ ಏರಿಕೆಯನ್ನು ನಿಯಂತ್ರಿಸಲು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಫೌಸಿ ಒತ್ತಿ ಹೇಳಿದ್ದಾರೆ. ಕೋವಿಡ್ ರೂಪಾಂತರದ ಏರಿಕೆಯಿಂದಾಗಿ ಆಸ್ಪತ್ರೆಗಳನ್ನು ಹೆಚ್ಚಿಸುವುದು ಮತ್ತು ಕೊವಿಡ್ ಪರೀಕ್ಷಾ ಕೇಂದ್ರಗಳ ಹೊರತಾಗಿ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೂರಾರು ವಿಮಾನಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ಸಿಬ್ಬಂದಿಯು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆ ವೈರಸ್‌ಗೆ ಒಡ್ಡಿಕೊಂಡ ನಂತರ ಕ್ವಾರೆಂಟೇನ್ ಆಗಬೇಕಿದೆ.
ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್‌ನಲ್ಲಿನ ಇತ್ತೀಚಿನ ಅಧ್ಯಯನಗಳು ಓಮಿಕ್ರಾನ್ ಸೋಂಕು ತಗುಲಿದವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ತೀರಾ ಕಡಿಮೆಯಾಗಿದೆ ಎಂದು ಹೇಳುತ್ತವೆ. ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಆಮ್ಲಜನಕದ ಅಗತ್ಯತೆ ಕಡಿಮೆಯಾಗಿದೆ ಎಂದು ಫೌಸಿ ತಿಳಿಸಿದ್ದಾರೆ.

English summary
Children Hospitalization Increase As Omicron Cases Rise at New York.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X