ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯೋತ್ಸವ ದಿನದಂದೇ ಅಮೆರಿಕದಲ್ಲಿ ಶೂಟೌಟ್

|
Google Oneindia Kannada News

ಚಿಕಾಗೋ, ಜುಲೈ 4: ಇಂದು ಸೋಮವಾರ ಅಮೆರಿಕಕ್ಕೆ 247ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಅದರೆ, ಚಿಕಾಗೋದ ಪ್ರದೇಶವೊಂದರಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ಜನರಿಗೆ ಗುಂಡಿನ ದಾಳಿಯ ಆಘಾತವಾದ ದುರ್ಘಟನೆ ನಡೆದಿದೆ. ಸೋಮವಾರ ನಡೆದ ಇಂಡಿಪೆಂಡೆನ್ಸ್ ಡೇ ಪೆರೇಡ್ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದು ತಿಳಿದುಬಂದಿದೆ.

ಈ ಘಟನೆಯ ಕೆಲ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ಗುಂಡಿನ ದಾಳಿ ಎಸಗಿದ್ದು ಯಾರು ಎಂಬುದು ಗೊತ್ತಾಗಿಲ್ಲ. ಅದೃಷ್ಟಕ್ಕೆ ಸಾವುಗಳು ಸಂಭವಿಸಿಲ್ಲ. ಆದರೆ ಹಲವು ಮಂದಿ ಗಾಯಗೊಂಡಿದ್ದಾರೆನ್ನಲಾಗಿದೆ. ಕೆಲ ವರದಿಗಳ ಪ್ರಕಾರ ಕೆಲವರು ಸಾವನ್ನಪ್ಪಿರುವ ಸಾಧ್ಯತೆ ಇದೆ.

ಚಿಕಾಗೋದ ಲೇಕ್ ಕೌಂಟಿಯ ಹೈಲ್ಯಾಂಡ್ ಪಾರ್ಕ್ ಬಳಿ ಈ ಘಟನೆ ಸಂಭವಿಸಿದೆ. ನೂರಾರು ಜನರು ಸ್ವಾತಂತ್ರ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಕಾಲಮಾನದಲ್ಲಿ ಬೆಳಗ್ಗೆ 10 ಗಂಟೆಗೆ ಪೆರೇಡ್ ಆರಂಭವಾಯಿತು. ಪಥ ಸಂಚಲನ ವೀಕ್ಷಿಸಲು ರಸ್ತೆ ಬದಿ ಉದ್ದಕ್ಕೂ ಜನರು ನೆರೆದಿದ್ದರು. ಅದಾಗಿ ಹತ್ತೇ ನಿಮಿಷದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡವರ ಮೇಲೆ ಗುಂಡಿನ ದಾಳಿಗಳಾಗಿವೆ. ಮೆರವಣಿಗೆ ಮಾಡುತ್ತಿದ್ದವರು, ಮತ್ತು ವೀಕ್ಷಿಸುತ್ತಿದ್ದವರೆಲ್ಲರೂ ಭಯ, ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದು ವಿಡಿಯೋಗಳಲ್ಲಿ ಕಾಣಬಹುದು.

Tweet Embed:

ಅಮೆರಿಕನ್ನರಿಗೆ ಹೆಮ್ಮೆಯ ದಿನ ಜುಲೈ 4
1776ರಲ್ಲಿ ಬ್ರಿಟಿಷರಿಂದ ಅಮೆರಿಕ ಸ್ವಾತಂತ್ರ್ಯ ಪಡೆದ ದಿನ ಇದು. ಈಗಲೂ ಈ ದಿನವನ್ನು ಅಮೆರಿಕನ್ನರು ಬಹಳ ಹೆಮ್ಮೆಯಿಂದ ಆಚರಿಸುತ್ತಾರೆ. ಈ ದಿನ ದೇಶಭಕ್ತಿಯ ಹಾಡು ಇತ್ಯಾದಿ ಕಾರ್ಯಕ್ರಮಗಳು ವಿವಿಧೆಡೆ ಇರುತ್ತದೆ. ಜನರೂ ಕೂಡ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

Shootout at Chicago During America Independence Day Celebrations

"ಜುಲೈ ನಾಲ್ಕು ನಮ್ಮ ದೇಶಕ್ಕೆ ಪವಿತ್ರ ದಿನ. ನಮ್ಮ ರಾಷ್ಟ್ರದ ಒಳ್ಳೆಯತನವನ್ನು ಆಚರಿಸುವ ಸಮಯ ಇದು. ಎಲ್ಲಾ ಜನರೂ ಸಮಾನರು ಎಂಬ ತತ್ವದಲ್ಲಿ ಈ ಭೂಮಿಯಲ್ಲಿ ರಚನೆಯಾದ ಏಕೈಕ ದೇಶ ನಮ್ಮದು... ನಮ್ಮ ಅತ್ಯುತ್ತಮ ದಿನಗಳು ಇನ್ನೂ ಬರಬೇಕಿವೆ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿ ಶುಭಾಶಯ ಕೋರಿದ್ದರು.

ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವನ್ನು ಬಹಳ ವೈಭವವಾಗಿ ಆಚರಿಸುತ್ತಾರೆ. ರಾತ್ರಿಯಂತೂ ಪಟಾಕಿ ಸದ್ದಿನ ಜೊತೆಗೆ ಬೆಳಕಿನ ಚಿತ್ತಾರ ಆಗಸದಲ್ಲಿ ಮೂಡುತ್ತದೆ. ಅಮೆರಿಕದ 50 ರಾಜ್ಯಗಳಾದ್ಯಂತ ವಿವಿಧ ನಗರಗಳಲ್ಲಿ ಬಣ್ಣ ಬಣ್ಣದ ಸಣ್ಣ ಮತ್ತು ದೊಡ್ಡ ಬೋರ್ಡುಗಳು ಅಮೆರಿಕದ ಸೊಗಸನ್ನು ಹೆಚ್ಚಿಸುತ್ತವೆ.

ಸ್ವಾತಂತ್ರ್ಯೋತ್ಸವದ ನಡುವೆ ಬೇಸರ
ಕೋವಿಡ್ ಸಾಂಕ್ರಾಮಿಕ ರೋಗ ಬೇರೆಲ್ಲಾ ದೇಶಗಳಿಗಿಂತ ಅಮೆರಿಕದಲ್ಲಿ ಹೆಚ್ಚು ಕಾಡಿರುವುದು ಅಂಕಿ-ಅಂಶಗಳಿಂದ ತಿಳಿಯುತ್ತದೆ. ಈ ವೇಳೆ ಅಮೆರಿಕದ ಆರ್ಥಿಕತೆ ಸಾಕಷ್ಟು ಕುಸಿತ ಕಂಡಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಹಣದುಬ್ಬರ ಇತ್ಯಾದಿ ಆರ್ಥಿಕ ಬಾಧೆಗಳು ಇವೆ.

ಗಾಯದ ಮೇಲೆ ಉಪ್ಪು ಸುರಿದಂತೆ ಇತ್ತೀಚೆಗೆ ಅಲ್ಲಿನ ನ್ಯಾಯಾಲಯಗಳು ನೀಡಿದ ತೀರ್ಪು ಸ್ವಾತಂತ್ರ್ಯಪ್ರಿಯ ಜನರನ್ನು ಘಾಸಿಗೊಳಿಸಿದೆ. ಅದರಲ್ಲೂ ಅಬಾರ್ಷನ್ ಹಕ್ಕು ಕಾನೂನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು ಅನೇಕರನ್ನು ಅಸಮಾಧಾನಗೊಳಿಸಿದೆ.

ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಗರ್ಭಪಾತ ಅಕ್ರಮ ಎಂಬ ಕಾನೂನು ರೂಪಿಸಲು ಅಥವಾ ಗರ್ಭಪಾತಕ್ಕೆ ಅನುಮತಿ ಕೊಡುವ ಕಾನೂನು ತರಲು ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ. ಅದರೆ, ಗರ್ಭಪಾತ ಮೂಲಭೂತ ಹಕ್ಕು ಎಂಬ ಅಂಶವನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದೆ.

"ನಮ್ಮ ಜೀವನದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿರುವಾಗ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಲು ಮನಸಾಗುತ್ತಿಲ್ಲ" ಎಂದು ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಹಾಗೂ ಡೆಮಾಕ್ರಾಟ್ ಪಕ್ಷದ ನಾಯಕ ತೀಶ್ ಜೇಮ್ಸ್ ಟ್ವೀಟ್ ಮಾಡಿದ್ದಾರೆ.

ಚಿಕಾಗೋದಲ್ಲಿ ಇಂದು ಗುಂಡಿನ ದಾಳಿ ಆದಂತೆ ಅಮೆರಿಕದಲ್ಲಿ ಶೂಟೌಟ್‌ಗಳು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ಅಮೆರಿಕನ್ನರಲ್ಲಿ ಮೂಲಭೂತವಾದ ಹೆಚ್ಚುತ್ತಿರುವ ಆತಂಕ ಇದೆ. ಅಮೆರಿಕದ ಬಹುತೇಕ ಶೂಟೌಟ್‌ಗಳಲ್ಲಿ ಈ ಜನಾಂಗೀಯ ಅಸಹಿಷ್ಣು ವಿಚಾರವೇ ಕಾರಣವಾಗಿರುವುದು ಗಮನಾರ್ಹ.

(ಒನ್ಇಂಡಿಯಾ ಸುದ್ದಿ)

Recommended Video

BJP ನಾಯಕರು ಸಚಿವ ಸ್ಥಾನ ಬೇಡವೆನ್ನಲು ಕಾರಣವೇನು | OneIndia Kannada

English summary
Gun Shots Occurred During Independence Day march at Chicago suburb in USA on July 4th morning. Many were reportedly injured in this incident. The attackers are unknown yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X