ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟ್ಯಂತರ ಹಣದ ಖಾತೆ ಪಾಸ್‌ವರ್ಡ್‌ ಗೊತ್ತಿದ್ದ ವ್ಯಕ್ತಿ ಸಾವು, ಹೂಡಿಕೆದಾರರು ಕಂಗಾಲು

|
Google Oneindia Kannada News

ಕೆನಡಾ, ಫೆಬ್ರವರಿ 06: ನಿಧಿ ಇರುವ ಜಾಗ ಗೊತ್ತಿದ್ದ ವ್ಯಕ್ತಿ ಸಾವನ್ನಪ್ಪಿದರೆ. ಇದು ಯಾವುದೋ ಸಿನಿಮಾದ ದೃಶ್ಯದಂತೆ ತೋರುತ್ತಿದೆ ಅಲ್ಲವೆ, ಆದರೆ ಇದೇ ರೀತಿಯ ಘಟನೆ ನಿಜವಾಗಿಯೂ ನಡೆದಿದೆ.

ಕೋಟ್ಯಂತರ ರೂಪಾಯಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಹೂಡಿಕೆ ಮಾಡಿಕೊಂಡಿದ್ದ ಕೆನಡಾದ ವ್ಯಕ್ತಿಯೊಬ್ಬ ಭಾರತದಲ್ಲಿ ಸಾವನ್ನಪ್ಪಿದ್ದಾನೆ. ಹೂಡಿಕೆ ಮಾಡಿಖಾತೆಯ ಪಾಸ್‌ವರ್ಡ್‌ ಗೊತ್ತಿದ್ದಿದ್ದು ಆತನೊಬ್ಬನಿಗೆ!

ಅಮೆರಿಕ ವೀಸಾ ಹಗರಣ: 130 ವಿದ್ಯಾರ್ಥಿಗಳಿಗೆ ತಪ್ಪಿನ ಅರಿವಿತ್ತುಅಮೆರಿಕ ವೀಸಾ ಹಗರಣ: 130 ವಿದ್ಯಾರ್ಥಿಗಳಿಗೆ ತಪ್ಪಿನ ಅರಿವಿತ್ತು

ಹೌದು, 13.60 ಲಕ್ಷ ಕೋಟಿ ಮೌಲ್ಯದ ಹೂಡಿಕೆದಾರರ ಕ್ರಿಪ್ಟೊ ಕರೆನ್ಸಿಯನ್ನು ಹೂಡಿಕೆ ಮಾಡಿಕೊಂಡಿದ್ದ ಸಂಸ್ಥೆಯೊಂದರ ಕಾರ್ಯನಿರ್ವಾಹಕ (ಸಿಇಓ) ಭಾರತದಲ್ಲಿ ಸಾವನ್ನಪ್ಪಿದ್ದಾನೆ. ಅಷ್ಟೂ ಹಣದ ಖಾತೆಯ ಪಾಸ್‌ವರ್ಡ್‌ ಆತನೊಬ್ಬನಿಗೆ ಮಾತ್ರವೇ ಗೊತ್ತಿತ್ತು.

CEO dies in India taking password to 190 million with him

ಕ್ವಾಡ್ರಿಗಾ ಸಿಎಕ್ಸ್‌ ಎಂಬ ಕ್ರಿಪ್ಟೊ ಕರೆನ್ಸಿ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಸಿಇಓ ಗೆರಾಲ್ಡ್ ಕಾಟನ್ ಭಾರತಕ್ಕೆ ಬಂದಿದ್ದಾಗ ಕ್ರೋನ್ಸ್‌ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆತನ ಬಳಿಯೇ ತನ್ನ ಹೂಡಿಕೆದಾರರ ಹಣವೆಲ್ಲವೂ ಕೋಲ್ಡ್‌ ಸ್ಟೋರೆಜ್‌ನಲ್ಲಿತ್ತು ಅದರ ಡಿಜಿಟಲ್ ಕೀ ಗೆರಾಲ್ಡ್‌ಗೆ ಮಾತ್ರವೇ ಗೊತ್ತಿತ್ತು.

ಗೆರಾಲ್ಡ್‌ನ ಲ್ಯಾಪ್‌ಟಾಪ್‌ ಆತನ ಪತ್ನಿಯ ಬಳಿ ಇದೆ ಆದರೆ ಆಕೆಗೆ ಅದರ ಪಾಸ್‌ವರ್ಡ್‌ ಗೊತ್ತಿಲ್ಲ. ತಂತ್ರಜ್ಞರು ಸಹ ಅದನ್ನು ಅನ್‌ಲಾಕ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಗೆರಾಲ್ಡ್ ಕಾಟನ್ ಸಾವನ್ನಪ್ಪಿದ ಬಳಿಕ ಸಂಸ್ಥೆಯ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದು, ತಮ್ಮ ಹಣದ ಗತಿಯೇನು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

English summary
Canadian cryptocurrency firm CEO dies in India taking password to 190 million dolor with him. His wife also dont know the password.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X