ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳು

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 17: ಕೊರೊನಾ ಲಸಿಕೆಗಳಿಗಂತಲೂ ಮಾಸ್ಕ್‌ ಸುರಕ್ಷಿತ ಎಂದು ಅಮೆರಿಕ ವಿಜ್ಞಾನಿಗಳು ಹೇಳಿದ್ದಾರೆ.

ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತಲೂ ರೋಗ ಬಾರದಂತೆ ತಡೆಯುವುದು ಉತ್ತಮ, ಹೀಗಾಗಿ ಮಾಸ್ಕ್ ಬಳಕೆ ಮಾಡಿ, ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.

ಕೊರೊನಾ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಸೂಚಿಸುವುದು ಅಸಾಧ್ಯ: ಐಸಿಎಂಆರ್ ಕೊರೊನಾ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಸೂಚಿಸುವುದು ಅಸಾಧ್ಯ: ಐಸಿಎಂಆರ್

ಮುಂದಿನ ವರ್ಷ ಅಂದರೆ ಜನವರಿಯಲ್ಲಿ ಲಭಿಸಲಿರುವ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಕೊರೊನಾ ವೈರಸ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೇವಲ ಎರಡು ಮಾರ್ಗಗಳಿವೆ.

CDC Director Says Face Masks May Provide More Protection Than Coronavirus Vaccine

ಒಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಇನ್ನೊಂದು ಮಾಸ್ಕ್ ಧರಿಸುವುದು. ಪ್ರಸ್ತುತ ಕೊರೊನಾ ಶಮನಕ್ಕೆ ಔಷಧಿ ಕಂಡುಹಿಡಿಯಲು ಜಗತ್ತಿನ ಹಲವು ದೇಶಗಳು ಪ್ರಯತ್ನ ನಡೆಸುತ್ತಿವೆ. ಹಲವು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳು ಸಹ ನಡೆಯುತ್ತಿವೆ.

ಆದರೆ, ಲಸಿಕೆಗಳಿಗಿಂತ ಮಾಸ್ಕ್ ನಮಗೆ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸುತ್ತದೆ. ಇದು ಅತ್ಯಂತ ಶಕ್ತಿಶಾಲಿ ಸಾರ್ವಜನಿಕ ಆರೋಗ್ಯ ಸಾಧನವಾಗಿದೆ ಎಂದು ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.

ಒಂದು ವೇಳೆ ಲಸಿಕೆ ಲಭ್ಯವಾದರೂ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಏಕೆಂದರೆ ಮಾಸ್ಕ್ ಗಳು ಲಸಿಕೆಗಳಿಗಿಂತ ನಮ್ಮನ್ನು ಹೆಚ್ಚು ರಕ್ಷಿಸುತ್ತವೆ ಎಂದು ಅವರು ಹೇಳಿದ್ದಾರೆ.

Recommended Video

BSY ಪುತ್ರನಿಗೆ ರಾಜ್ಯ ರಾಜಕೀಯದಲ್ಲಿ ಏನು ಕೆಲಸ | Vijayendra | Oneindia Kannada

ಭಾರತದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿನಂತೆ ಅಮೆರಿಕಾದಲ್ಲಿ ಸಿಡಿಸಿ ಕಾರ್ಯನಿರ್ವಹಿಸುತ್ತಿದೆ. ಸೆನೆಟ್ ಉಪ ಸಮಿತಿ ವಿಚಾರಣೆಯಲ್ಲಿ ಅಮೆರಿಕಾದ ಶಾಸನ ಸಭಾ ಸದಸ್ಯರ ಪ್ರಶ್ನೆಗಳಿಗೆ ರೆಡ್ಫೀಲ್ಡ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

English summary
Face coverings are the most powerful public health tool the nation has against the coronavirus and might even provide better protection against it than a vaccine, the head of the U.S. Centers for Disease Control and Prevention told lawmakers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X