ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ಸತ್ತವರ ಸಂಖ್ಯೆ 83ಕ್ಕೆ ಏರಿಕೆ

|
Google Oneindia Kannada News

ಚಿಕೊ, ಕ್ಯಾಲಿಫೋರ್ನಿಯಾ, ನವೆಂಬರ್ 22: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ನಗರಕ್ಕೆ ತಗುಲಿರುವ ಕಾಡ್ಗಿಚ್ಚಿನಲ್ಲಿ ಸತ್ತವರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.

ಇತಿಹಾಸದಲ್ಲೇ ಭೀಕರ ಕಾಡ್ಗಿಚ್ಚು ಇದಾಗಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಅಗ್ನಿ ಶಾಮಕ ಪಡೆಯ ಸಾವಿರಾರು ಸಿಬ್ಬಂದಿಗಳು ಇನ್ನೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 600 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದುವರೆಗೆ 12 ಸಾವಿರಕ್ಕೂ ಹೆಚ್ಚು ಮನೆಗಳು ಹಾಗೂ 1.42 ಲಕ್ಷ ಎಕರೆಯಷ್ಟು ಭೂಮಿ ಬೆಂಕಿಗೆ ಆಹುತಿಯಾಗಿದೆ.

ಕ್ಯಾಲಿಫೋರ್ನಿಯಾವನ್ನು ಸುಡುತ್ತಿದೆ ಬೆಂಕಿ: ಅಗ್ನಿ ಜ್ವಾಲೆಗೆ 9 ಮಂದಿ ದಹನಕ್ಯಾಲಿಫೋರ್ನಿಯಾವನ್ನು ಸುಡುತ್ತಿದೆ ಬೆಂಕಿ: ಅಗ್ನಿ ಜ್ವಾಲೆಗೆ 9 ಮಂದಿ ದಹನ

ಕ್ಯಾಂಪ್‌ಫೈರ್ ಎಂದೇ ಕರೆಯಲಾಗದ ಈ ಕಾಡ್ಗಿಚ್ಚಿನ ಅಟ್ಟಹಾಸಕ್ಕೆ 59 ಸಾವಿರ ಎಕರೆ ಪ್ರದೇಶ ಸುಟ್ಟುಹೋಗಿದ್ದು, ಆ ಪೈಕಿ ಶೇ.50ರಷ್ಟು ಪ್ರದೇಶದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

California wildfire death toll rises to 83

ಸುಟ್ಟುಕರಕಲಾದ ಎಂಟು ಮಂದಿ ಮಂದಿಯ ಶವಗಳನ್ನು ರಕ್ಷಣಾ ಕಾರ್ಯಕರ್ತರು ಪತ್ತೆಚ್ಚಿದ್ದು, ಇದರೊಂದಿಗೆ ಕಾಡ್ಗಿಚ್ಚಿಗೆ ಬಲಿಯಾದವರ ಅಧಿಕೃತ ಸಂಖ್ಯೆ 83 ಕ್ಕೇರಿದೆಯೆಂದು ಅವರು ಹೇಳಿದ್ದಾರೆ. ನವೆಂಬರ್ 8ರಂದು ಉತ್ತರ ಕ್ಯಾಲಿಫೋರ್ನಿಯಾದ ತಪ್ಪಲು ಪ್ರದೇಶದಲ್ಲಿರುವ ಪ್ಯಾರಾಡೈಸ್ ಪಟ್ಟಣದ ಸಮೀಪದ ಸಿಯೆರಾ ನೆವಾಡ ಪರ್ವತ ಪ್ರಾಂತದ ತಪ್ಪಲಿನಲ್ಲಿ ಕಾಡ್ಗಿಚ್ಚು ಭುಗಿಲೆದ್ದಿದ್ದರಿಂದ ಸಾವಿರಾರು ಮಂದಿ ಸುರಕ್ಷಿತ ಪ್ರದೇಶಗಳಿಗೆ ಪಲಾಯನಗೈದಿದ್ದಾರೆ.

534 ಮಂದಿಯ ಹೆಸರು ಕಾಣೆಯಾದವರ ಪಟ್ಟಿಯಲ್ಲಿದೆ.ವಾಲ್‌ಮಾರ್ಟ್ ಪಾರ್ಕಿಂಗ್ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದಾರೆ.

English summary
A California sheriff (official) says two more sets of human remains have been found, bringing death toll from a wildfire to 83.Butte County Sheriff Kory Honea says more than 560 names remain on the missing list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X