ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯರ ಮೆದುಳು ತಿನ್ನುವ ಹುಳು ದಾಳಿ ಮಾಡುತ್ತಿದೆ ಹುಷಾರ್..!

|
Google Oneindia Kannada News

ಕೊರೊನಾ ದಾಳಿಯಿಂದ ಇಡೀ ಜಗತ್ತು ನರಳುತ್ತಿರುವಾಗಲೇ ಅಮೆರಿಕದಿಂದ ಶಾಕಿಂಗ್ ಸಂಗತಿಯೊಂದು ಹೊರಬಿದ್ದಿದೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಮನಷ್ಯರ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಪತ್ತೆಯಾಗಿದ್ದು, ಕೊಳಾಯಿ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.

ಟೆಕ್ಸಾಸ್‌ನ ಲೇಕ್ ಜಾಕ್ಸನ್ ನಗರದ ಸಾರ್ವಜನಿಕ ಕೊಳಾಯಿಗಳಲ್ಲಿ ಈ ಡೆಡ್ಲಿ ಮೈಕ್ರೋಬ್ಸ್ ಪತ್ತೆಯಾಗಿವೆ. 'ನಾಗ್ಲೆರಿಯಾ ಫೌಲೆರಿ' (Naegleria fowleri) ಎಂದು ಕರೆಯಲಾಗುವ, ಅಮೀಬಾ ವಂಶಕ್ಕೆ ಸೇರಿದ ಈ ಸೂಕ್ಷ್ಮಾಣು ಜೀವಿಗಳಿಗೆ ಮನುಷ್ಯರ ಮೆದುಳು ತಿನ್ನುವುದೇ ಕೆಲಸ.

ಆಘಾತಕಾರಿ ಸುದ್ದಿ, ಬಾಲಕಿಯ ಮೆದುಳನ್ನೇ ತಿಂದ ಅಮಿಬಾಆಘಾತಕಾರಿ ಸುದ್ದಿ, ಬಾಲಕಿಯ ಮೆದುಳನ್ನೇ ತಿಂದ ಅಮಿಬಾ

ಇವು ಏಕಕೋಶ ಜೀವಿಗಳಾಗಿದ್ದು, ಮನುಷ್ಯನ ಮೂಗಿನ ಮೂಲಕ ಪ್ರವೇಶ ಮಾಡಿ ಮೆದುಳನ್ನು ತಿಂದು ಮನುಷ್ಯನ ಸಾವಿಗೆ ಕಾರಣವಾಗುತ್ತವೆ. ಕಳೆದ ತಿಂಗಳು ಲೇಕ್ ಜಾಕ್ಸನ್ ನಗರದಲ್ಲಿ ಬಾಲಕನೊಬ್ಬ ಅನುಮಾನಾಸ್ಪದ ಸೋಂಕಿನಿಂದ ಮೃತಪಟ್ಟಿದ್ದ. ಬಾಲಕನ ದೇಹವನ್ನು ಪರೀಕ್ಷೆಗೆ ಒಳಪಡಿಸಿ ವರದಿ ಪಡೆದ ವೈದ್ಯರಿಗೆ ಶಾಕ್ ಕಾದಿತ್ತು.

ಏಕೆಂದರೆ ಈ ಬಾಲಕ ಮೃತಪಟ್ಟಿದ್ದು ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿಯಿಂದ. ಆದರೆ ಈ ಡೇಂಜರಸ್ ಮೈಕ್ರೋಬ್ ಬಾಲಕನ ಮೆದುಳು ಸೇರಿದ್ದಾದರೂ ಎಲ್ಲಿಂದ ಎಂಬುದು ಯಕ್ಷಪ್ರಶ್ನೆಯಾಗಿ ಉಳಿಯುವ ಜೊತೆಗೆ ಆತಂಕವನ್ನೂ ಹುಟ್ಟುಹಾಕಿತ್ತು.

ಆದರೆ ತನಿಖೆಯಲ್ಲಿ ಈ ಸೂಕ್ಷ್ಮಾಣು ಜೀವಿಗಳು ಟೆಕ್ಸಾಸ್ ರಾಜ್ಯದ ಲೇಕ್ ಜಾನ್ಸನ್ ನಗರದಲ್ಲಿ ಬದುಕಿವೆ ಎಂಬುದು ಗೊತ್ತಾಗಿದೆ. ಲೇಕ್ ಜಾನ್ಸನ್‌ನ ಕೊಳಾಯಿಗಳಲ್ಲಿ ಮೆದುಳು ತಿನ್ನುವ ಅಮೀಬಾ ಪತ್ತೆಯಾಗಿದೆ.

ಮೆದುಳು ಸೇರಿದರೆ ಒಂದೇ ವಾರದಲ್ಲಿ ಸಾವು

ಮೆದುಳು ಸೇರಿದರೆ ಒಂದೇ ವಾರದಲ್ಲಿ ಸಾವು

ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಎಂದರೆ, ಈ ಸೋಂಕಿಗೆ ಸರಿಯಾದ ಔಷಧಗಳೇ ಲಭ್ಯವಿಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದಂತೆ, ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. ಕೇವಲ ಒಂದು ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಆದರೆ ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿಗಳು.

ಜ್ವರ, ವಾಂತಿ, ತಲೆನೋವು ಕಾಡುವುದು

ಜ್ವರ, ವಾಂತಿ, ತಲೆನೋವು ಕಾಡುವುದು

ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದರೆ ಮೆಲ್ಲಗೆ ತನ್ನ ಕಾರ್ಯ ಚಟುವಟಿಕೆ ಆರಂಭಿಸುತ್ತದೆ. ಹೀಗೆ ಸೂಕ್ಷ್ಮಾಣು ಜೀವಿ ತನ್ನ ಕೆಲಸ ಆರಂಭಿಸಿದ ಒಂದೆರಡು ದಿನಗಳಲ್ಲಿ ತೀವ್ರ ಜ್ವರ ಹಾಗೂ ತಲೆನೋವು ಕಾಡಲು ಆರಂಭವಾಗುತ್ತದೆ. ಹೀಗೆ ಆರಂಭವಾಗುವ ಸೋಂಕಿನ ಲಕ್ಷಣ, ಭಾರಿ ಪ್ರಮಾಣದಲ್ಲಿ ವಾಂತಿಯಾಗುವಂತೆ ಮಾಡುತ್ತದೆ. ಮನುಷ್ಯನ ರೋಗನಿರೋಧಕ ಶಕ್ತಿಯು ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿ, ಕಡೆಗೆ 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ 'ನಾಗ್ಲೆರಿಯಾ ಫೌಲೆರಿ' ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ.

ಮೂಗಿನ ಒಳಗೆ ನೀರು ಸೇರಿಸಬೇಡಿ..!

ಮೂಗಿನ ಒಳಗೆ ನೀರು ಸೇರಿಸಬೇಡಿ..!

ಈ ಸೂಕ್ಷ್ಮಾಣು ಜೀವಿ ಲೇಕ್ ಜಾನ್ಸನ್ ನಗರದಲ್ಲಿ ಕಂಡುಬಂದ ತಕ್ಷಣ ಅಧಿಕಾರಿಗಳು ಜನರಿಗೆ ನೀಡಿದ ಮೊದಲ ಎಚ್ಚರಿಕೆ, ಮೂಗಿನ ಒಳಗೆ ನೀರು ಸೇರಿಸಬೇಡಿ ಅಂತಾ. ಏಕೆಂದರೆ ಮೂಗಿನಲ್ಲಿ ನೀರು ಹೋದರೆ ಇಂತಹ ಮೈಕ್ರೋಬ್‌ಗಳು ಮೆದುಳು ಸೇರುವುದು ತುಂಬಾ ಸುಲಭ. ಹೀಗೆ ಮೆದುಳು ಸೇರುವ ಸೂಕ್ಷ್ಮಾಣು ಜೀವಿ ನಾಗ್ಲೆರಿಯಾ ಫೌಲೆರಿ ತಕ್ಷಣ ಮೆದುಳನ್ನ ತಿನ್ನಲು ಶುರುಮಾಡುತ್ತದೆ. ಕಡೆಗೆ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೆ ಆತ ನರಳಿ ಪ್ರಾಣಬಿಡುತ್ತಾನೆ. ಹೀಗಾಗಿ ಮೂಗಿನ ಒಳಗೆ ನೀರು ಸೇರಿಸಬೇಡಿ ಎಂದು ಟೆಕ್ಸಾಸ್ ಸ್ಟೇಟ್‌ನ ಜನರಿಗೆ ಅಮೆರಿಕದ ಅಧಿಕಾರಿಗಳು ವಾರ್ನಿಂಗ್ ಕೊಟ್ಟಿದ್ದಾರೆ.

Recommended Video

UNLOCK 5.0 ಎನಿರತ್ತೆ ? ಎನಿರಲ್ಲಾ?? | Oneindia Kannada
ಭಯ ಬೇಕಿಲ್ಲ, ಮುನ್ನೆಚ್ಚರಿಕೆ ಅತ್ಯಗತ್ಯ..!

ಭಯ ಬೇಕಿಲ್ಲ, ಮುನ್ನೆಚ್ಚರಿಕೆ ಅತ್ಯಗತ್ಯ..!

ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಬಗ್ಗೆ ಭಯ ಬೇಕಿಲ್ಲ. ಆದರೂ ಇದರ ಬಗ್ಗೆ ಭಾರಿ ಮುನ್ನೆಚ್ಚರಿಕೆ ವಹಿಸಬೇಕು. ಇದು ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಅಂಟಿಕೊಳ್ಳುವ ಸೋಂಕು ಅಲ್ಲ. ಆದರೆ ನೀರಿನ ಮೂಲಕ ತುಂಬಾ ವೇಗವಾಗಿ ಇಡೀ ಮನುಕುಲದ ಮೆದುಳಿನ ಮೇಲೆ ದಾಳಿ ಮಾಡಿ, ಜೀವ ತೆಗೆಯುತ್ತದೆ. ಹೀಗಾಗಿ ನೀರು ಬಳಸುವ ಮುನ್ನ ಚೆನ್ನಾಗಿ ಕುದಿಸುವಂತೆ ಅಮೆರಿಕದ ಅಧಿಕಾರಿಗಳು ಅಲ್ಲಿನ ನಾಗರಿಕರಿಗೆ ಎಚ್ಚರಿಕೆ ಜೊತೆ ಸಲಹೆಯನ್ನೂ ನೀಡಿದ್ದಾರೆ.

English summary
Brain Eating Microbes found in US State Texas. A Microbe Called Naegleria fowleri, it is an amoeba causes to the infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X