ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ; ಹೆಚ್ಚುತ್ತಿದೆ ಮೆದುಳು ಕೊರೆಯುವ ಸೂಕ್ಷ್ಮಾಣು ಜೀವಿ ಪ್ರಕರಣ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 23: ಅಮೆರಿಕದಲ್ಲಿ, ಇದೇ ಸೆಪ್ಟೆಂಬರ್ ನಲ್ಲಿ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿತ್ತು. ಟೆಕ್ಸಾಸ್ ನಲ್ಲಿ ಏಳು ವರ್ಷದ ಬಾಲಕನ ಮೆದುಳು ಹೊಕ್ಕಿದ್ದ ಸೂಕ್ಷ್ಮಾಣು ಜೀವಿಯೊಂದು ಆತನ ಸಾವಿಗೆ ಕಾರಣವಾಗಿ ದೇಶದಲ್ಲಿಯೇ ಆತಂಕ ತಂದೊಡ್ಡಿತ್ತು. ಆದರೆ ಕೊರೊನಾ ಪ್ರಕರಣಗಳ ನಡುವೆ ಮುಚ್ಚಿ ಹೋಗಿದ್ದ ಈ ಸೂಕ್ಷ್ಮಾಣು ಜೀವಿಯ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಅಮೆರಿಕದಲ್ಲಿ ಮನುಷ್ಯರ ಮೆದುಳನ್ನೇ ತಿನ್ನಬಲ್ಲ ಈ ಸೂಕ್ಷ್ಮಾಣು ಜೀವಿಯ ಪ್ರಕರಣ ಹೆಚ್ಚಾಗುತ್ತಿದ್ದು, ನಾಗ್ಲೆರಿಯಾ ಫೌರೆಲಿ ಎಂಬ ಈ ಸೂಕ್ಷ್ಮಾಣು ಜೀವಿ ಅಮೆರಿಕದ ಉತ್ತರ ಪ್ರದೇಶಗಳಲ್ಲೂ ಹರಡುತ್ತಿದೆ ಎಂದು ತಿಳಿದುಬಂದಿದೆ. ರೋಗ ನಿಯಂತ್ರಣ ಹಾಗೂ ನಿವಾರಣಾ ಕೇಂದ್ರದ ಮಾಹಿತಿಯಂತೆ ಕೊರೊನಾ ವೈರಸ್ ಜೊತೆಗೆ ನಾಗ್ಲೆರಿಯಾ ಫೌರೆಲಿ ಪ್ರಕರಣವೂ ಹೆಚ್ಚುತ್ತಿದೆ. ಮುಂದೆ ಓದಿ...

 ಕೊರೊನಾದೊಂದಿಗೆ ತಲೆನೋವಾದ ಅಮೀಬಾ

ಕೊರೊನಾದೊಂದಿಗೆ ತಲೆನೋವಾದ ಅಮೀಬಾ

ಇಡೀ ವಿಶ್ವವೇ ಕೊರೊನಾ ವೈರಸ್ ನಿಂದ ನಲುಗುತ್ತಿದೆ. ವೈರಸ್ ಗೆ ಲಸಿಕೆ ದೊರೆಯುವ ನಿರೀಕ್ಷೆ ವ್ಯಕ್ತಗೊಂಡಿರುವ ಬೆನ್ನಲ್ಲೇ ಮೆದುಳು ತಿನ್ನಬಲ್ಲ ಈ ಸೂಕ್ಷ್ಮಾಣು ಜೀವಿಗಳು ಹೆಚ್ಚಾಗಿರುವುದಾಗಿ ತಿಳಿದುಬಂದಿದೆ. ಅಮೆರಿಕದಲ್ಲಿ ನಾಗ್ಲೆರಿಯಾ ಫೌರೆಲಿ ಎಂಬ ಅಮೀಬಾ ಈಗ ಅಮೆರಿಕದ ಉತ್ತರ ಪ್ರದೇಶಗಳಲ್ಲಿಯೂ ಹರಡುತ್ತಿರುವುದು ಭೀತಿ ಮೂಡಿಸಿದೆ. ಮೊದಲು ದಕ್ಷಿಣ ಅಮೆರಿಕದಲ್ಲಿ ಈ ಸೋಂಕು ಪತ್ತೆಯಾಗಿತ್ತು. ಆದರೆ ವಾತಾವರಣ ಬದಲಾವಣೆ ಈ ಅನಿರೀಕ್ಷಿತ ಹರಡುವಿಕೆಗೆ ಕಾರಣ ಎನ್ನಲಾಗುತ್ತಿದೆ.

ಮನುಷ್ಯರ ಮೆದುಳು ತಿನ್ನುವ ಹುಳು ದಾಳಿ ಮಾಡುತ್ತಿದೆ ಹುಷಾರ್..!ಮನುಷ್ಯರ ಮೆದುಳು ತಿನ್ನುವ ಹುಳು ದಾಳಿ ಮಾಡುತ್ತಿದೆ ಹುಷಾರ್..!

 ಸೆಪ್ಟೆಂಬರ್ ನಲ್ಲಿ ಕಂಡುಬಂದಿದ್ದ ಪ್ರಕರಣ

ಸೆಪ್ಟೆಂಬರ್ ನಲ್ಲಿ ಕಂಡುಬಂದಿದ್ದ ಪ್ರಕರಣ

ಇದೇ ಸೆಪ್ಟೆಂಬರ್ ನಲ್ಲಿ ಟೆಕ್ಸಾಸ್ ನ ಏಳು ವರ್ಷದ ಬಾಲಕನ ಮೆದುಳು ಹೊಕ್ಕಿದ್ದ ಈ ಸೂಕ್ಷ್ಮಾಣು ಜೀವಿ, ಆತನ ಜೀವವನ್ನೇ ಕಸಿದುಕೊಂಡಿತ್ತು. ಈ ಸಂಗತಿ ಅಮೆರಿಕದಲ್ಲಿ ಆಘಾತ ಮೂಡಿಸಿತ್ತು. ಸೆಪ್ಟೆಂಬರ್ 8ರಂದು ಈ ಬಾಲಕ ಸಾವನ್ನಪ್ಪಿದ್ದು, ಕುಡಿಯುವ ನೀರಿನ ಮೂಲಕ ಸೂಕ್ಷ್ಮಾಣು ಜೀವಿ ಆತನ ದೇಹ ಹೊಕ್ಕಿರುವುದಾಗಿ ತಿಳಿದುಬಂದಿತ್ತು. ಆನಂತರ ಕೊಳಾಯಿಗಳಲ್ಲಿನ ನೀರು ಬಳಕೆ ಕುರಿತು ಸರ್ಕಾರ ಎಚ್ಚರಿಕೆ ನೀಡಿತ್ತು.

 ಜೀವಕ್ಕೇ ಮಾರಕವಾಗಿರುವ ಸೂಕ್ಷ್ಮಾಣು ಜೀವಿ

ಜೀವಕ್ಕೇ ಮಾರಕವಾಗಿರುವ ಸೂಕ್ಷ್ಮಾಣು ಜೀವಿ

ಕೊರೊನಾ ನಡುವೆ ತಣ್ಣಗಾಗಿದ್ದ ನಾಗ್ಲೆರಿಯಾ ಫೌರೆಲಿ ಪ್ರಕರಣ ಈಗ ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಸೂಕ್ಷ್ಮಾಣು ಜೀವಿಗಳ ಸಂಖ್ಯೆಯೂ ಏರಿಕೆಯಾಗಿ ಪ್ರಕರಣ ಹೆಚ್ಚಾಗುತ್ತಿದೆ ಎಂದು ರೋಗ ನಿಯಂತ್ರಣ ಹಾಗೂ ನಿವಾರಣಾ ಕೇಂದ್ರ ಮಾಹಿತಿ ನೀಡಿದೆ. ಆದರೆ ಈ ರೋಗದ ಒಟ್ಟು ಪ್ರಕರಣಗಳ ಸಂಖ್ಯೆಯ ಕುರಿತು ಮಾಹಿತಿ ತಿಳಿದುಬಂದಿಲ್ಲ. ಕಲುಷಿತಗೊಂಡಿರುವ ನೀರಿನ ಸೇವನೆಯಿಂದಷ್ಟೇ ಸೋಂಕಿಗೆ ಒಳಗಾಗಲು ಸಾಧ್ಯವಿಲ್ಲ ಎಂದು ತಿಳಿಸಿರುವ ಕೇಂದ್ರ, ಈ ಅಮೀಬಾ ವ್ಯಕ್ತಿಯ ಮೂಗಿನ ಸಂಪರ್ಕಕ್ಕೆ ಬಂದರೆ ಮಾರಕವಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಆಘಾತಕಾರಿ ಸುದ್ದಿ, ಬಾಲಕಿಯ ಮೆದುಳನ್ನೇ ತಿಂದ ಅಮಿಬಾಆಘಾತಕಾರಿ ಸುದ್ದಿ, ಬಾಲಕಿಯ ಮೆದುಳನ್ನೇ ತಿಂದ ಅಮಿಬಾ

 ಏನಿದು ನಾಗ್ಲೆರಿಯಾ ಫೌರೆಲಿ?

ಏನಿದು ನಾಗ್ಲೆರಿಯಾ ಫೌರೆಲಿ?

ಮೂಗಿನ ಪೊರೆಗಳ ಮೂಲಕ ಮೆದುಳು ಸೇರುವ ಈ ಸೂಕ್ಷ್ಮಾಣು ಜೀವಿ ಮೈಗ್ರೇನ್, ಹೈಪರ್ ಥರ್ಮಿಯಾ, ವಾಂತಿ, ಸುಸ್ತು, ತಲೆ ಸುತ್ತುವಿಕೆಗೆ ಕಾರಣವಾಗುತ್ತದೆ. ಒಂದೇ ವಾರದಲ್ಲಿ ಸಾವಿಗೂ ದೂಡುತ್ತದೆ. ಒಂದೇ ವಾರದಲ್ಲಿ ದೇಹದ ರೋಗನಿರೋಧಕ ಶಕ್ತಿ ಕಸಿದುಕೊಂಡು ಸಾವನ್ನಪ್ಪುವಂತೆ ಮಾಡುತ್ತದೆ. "ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸಸ್" ಈ ಕುರಿತು ಹೊಸ ಅಧ್ಯಯನ ಪ್ರಕಟಿಸಿದ್ದು, ಈ ಸೂಕ್ಷ್ಮಜೀವಿ ತಾಪಮಾನ ಹೆಚ್ಚಿರುವ ಜಾಗಗಳಲ್ಲಿ ನೆಲೆಸುವುದಾಗಿ ತಿಳಿಸಿದೆ. ರೋಗದ ಕುರಿತು ಇನ್ನಷ್ಟು ಸ್ಪಷ್ಟ ಕಾರಣಗಳಿಗೆ ಶೋಧನೆ ನಡೆಯುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ, ಅಂದರೆ 2010 ರಿಂದ 2019ರವರೆಗೆ 34 ಪ್ರಕರಣಗಳು ಕಂಡುಬಂದಿವೆ. ಈ ರೋಗ ಪತ್ತೆಗೆ ಯಾವುದೇ ಪರೀಕ್ಷೆಗಳೂ ಲಭ್ಯವಿಲ್ಲ.

English summary
Brain eating amoeba is now spreading faster in us. Naegleria fowleri an amoeba cases increasing and spreading to northern america created anxiety
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X