ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮಣಿಸಲು ಬೂಸ್ಟರ್ ಡೋಸ್ ಅಗತ್ಯ ಖಂಡಿತ ಬರಲಿದೆ; ಆಂಥೋನಿ ಫೌಸಿ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 20: ಕೊರೊನಾ ಸೋಂಕಿನ ವಿರುದ್ಧ ಗರಿಷ್ಠ ರಕ್ಷಣೆ ಪಡೆಯಲು ಕೊರೊನಾ ಲಸಿಕೆಯ ಬೂಸ್ಟರ್ ಡೋಸ್‌ಗಳ ಅಗತ್ಯ ಶೀಘ್ರದಲ್ಲೇ ಕಂಡುಬರಬಹುದು ಎಂದು ಅಮೆರಿಕ ಅಗ್ರ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ.

ಆಹಾರ ಹಾಗೂ ಔಷಧ ಮಂಡಳಿ (FDA) 16 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಮೂರನೇ ಡೋಸ್ ಲಸಿಕೆಯ ವ್ಯಾಪಕ ಬಳಕೆಯನ್ನು ತಿರಸ್ಕರಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆ

ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ನೀಡಿದರೆ 60ಕ್ಕಿಂತ ಹೆಚ್ಚಿನ ವಯಸ್ಕರಲ್ಲಿ ಸೋಂಕು ಹಾಗೂ ತೀವ್ರ ಅನಾರೋಗ್ಯವನ್ನು ತಡೆಯಬಹುದಾಗಿದೆ ಎಂಬ ಅಂಶವನ್ನು ಈಚೆಗೆ ಇಸ್ರೇಲ್‌ನಲ್ಲಿ ನಡೆದ ಅಧ್ಯಯನ ಒಳಗೊಂಡಿದ್ದು, ಆ ಅಧ್ಯಯನ ಮಾಹಿತಿಯನ್ನೊಳಗೊಂಡಂತೆ ಫೈಜರ್ ಅಮೆರಿಕದ ಎಫ್‌ಡಿಎಗೆ 52 ಪುಟಗಳ ವರದಿಯನ್ನು ಸಲ್ಲಿಸಿದೆ. ಕೊರೊನಾ ಮೂರನೇ ಡೋಸ್ ಲಸಿಕೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಬೆಂಬಲಿಸಿದ್ದಾರೆ.

Booster Dose Necessary To Beat Covid-19 Says Anthony Fauci

65 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಫೈಜರ್ ಲಸಿಕೆಯ ಬೂಸ್ಟರ್ ಲಸಿಕೆ ನೀಡಲು ಸಮಿತಿ ಅನುಮೋದಿಸಿದೆ. 'ಫೈಜರ್‌ನಂಥ ಎಂಆರ್‌ಎನ್‌ಎ ಲಸಿಕೆಗಾಗಿ ಈ ಅನುಮೋದನೆ ನೀಡಬಹುದು. ಮೊದಲ ಎರಡು ಲಸಿಕೆಗಳನ್ನು ನೀಡಿದ ಹಲವು ತಿಂಗಳ ನಂತರ ಮೂರನೇ ಲಸಿಕೆ ನೀಡಬಹುದಾಗಿದೆ' ಎಂದು ಫೌಸಿ ಹೇಳಿದ್ದಾರೆ.

'ರೋಗನಿರೋಧಕ ಶಕ್ತಿಯ ಕ್ಷೀಣತೆಯ ಆಧಾರದ ಮೇಲೆ ಕೊರೊನಾ ಮೂರನೇ ಲಸಿಕೆ, ಅಂದರೆ ಬೂಸ್ಟರ್ ಡೋಸ್ ನೀಡಲು ಬೆಂಬಲಿಸುತ್ತೇನೆ. ಅಮೆರಿಕದ ಮಾಹಿತಿಗಳು ಹಾಗೂ ಇಸ್ರೇಲಿನಲ್ಲಿನ ಉದಾಹರಣೆಗಳನ್ನು ಗಮನಿಸಿ ಬೂಸ್ಟರ್ ಡೋಸ್‌ ನೀಡಬಹುದಾಗಿದೆ' ಎಂದು ಹೇಳಿದ್ದಾರೆ.

ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ 2-3 ತಿಂಗಳಲ್ಲಿ ಪ್ರತಿಕಾಯ ತಗ್ಗಲಿದೆ; ಅಧ್ಯಯನಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ 2-3 ತಿಂಗಳಲ್ಲಿ ಪ್ರತಿಕಾಯ ತಗ್ಗಲಿದೆ; ಅಧ್ಯಯನ

ಲಂಡನ್‌ನಲ್ಲಿ ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಅಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಶೀಘ್ರಗತಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಮತ್ತೊಮ್ಮೆ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Booster Dose Necessary To Beat Covid-19 Says Anthony Fauci

'ನ್ಯೂ ಇಂಗ್ಲೆಂಡ್ ಜರ್ನಲ್‌ ಆಫ್ ಮೆಡಿಸಿನ್‌'ನಲ್ಲಿ ಪ್ರಕಟವಾದ ಫೈಜರ್ ಸಂಬಂಧಿ ಅಧ್ಯಯನವು, ಬೂಸ್ಟರ್ ಡೋಸ್ ಪಡೆದ ಸುಮಾರು 12 ದಿನಗಳ ನಂತರ, ಸೋಂಕಿನ ಪ್ರಮಾಣ ಹನ್ನೊಂದು ಪಟ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ತೀವ್ರತರ ಸಮಸ್ಯೆಯು ಬೂಸ್ಟರ್ ಪಡೆಯದವರಿಗೆ ಹೋಲಿಸಿದರೆ, ಪಡೆದವರಲ್ಲಿ ಇಪ್ಪತ್ತು ಪಟ್ಟು ಕಡಿಮೆಯಾಗಿದೆ ಎಂದು ತೋರಿಸಿದೆ' ಎಂದಿದ್ದಾರೆ.

ಇಸ್ರೇಲ್, ಅರಬ್, ರಷ್ಯಾ, ಫ್ರಾನ್ಸ್‌, ಜರ್ಮನಿ ಹಾಗೂ ಇಟಲಿಯಂಥ ಹಲವು ದೇಶಗಳು ಈಗಾಗಲೇ ಬೂಸ್ಟರ್ ಡೋಸ್‌ಗಳನ್ನು ನೀಡುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ವಿಜ್ಞಾನಿಗಳು ಮೂರನೇ ಕೋವಿಡ್ ಶಾಟ್ ವಿರುದ್ಧ ಕರೆ ನೀಡಿದ್ದಾರೆ.

ಲ್ಯಾನ್ಸೆಟ್‌ನಲ್ಲಿ ಈಚೆಗೆ ಪ್ರಕಟವಾದ ವಿಮರ್ಶೆಯಲ್ಲಿ, ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮುದಾಯವು, ತೀವ್ರ ಕೊರೊನಾ ವಿರುದ್ಧ ಈಗಿರುವ ಲಸಿಕೆಗಳ ದಕ್ಷತೆ ಹೆಚ್ಚಾಗಿದೆ. ಡೆಲ್ಟಾ ರೂಪಾಂತರದ ವಿರುದ್ಧವೂ ಹೋರಾಡಬಲ್ಲದಾಗಿದೆ. ಇಂಥ ಸಮಯದಲ್ಲಿ ಸಾಮಾನ್ಯ ಜನರಿಗೆ ಈ ಬೂಸ್ಟರ್ ಡೋಸ್ ನೀಡುವುದು ಸೂಕ್ತವಲ್ಲ ಎಂದು ಹೇಳಿದೆ. ಆದರೆ ಕೆಲವು ದೇಶಗಳಲ್ಲಿ ಬೂಸ್ಟರ್ ಡೋಸ್‌ಗಳನ್ನು ನೀಡಲು ಆರಂಭಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್ ಅದನಾಂ ಫೆಬ್ರಿಯೋಸಿಸಿಸ್, ಈ ವರ್ಷದ ಕೊನೆಯವರೆಗಾದರೂ ಬೂಸ್ಟರ್‌ ಲಸಿಕೆಗಳಿಗೆ ತಡೆಹಿಡಿಯಬೇಕು. ಇದರಿಂದ ಬಡ ದೇಶಗಳು ಕೊರೊನಾ ಲಸಿಕೆಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ್ದರು. ಆದರೆ ಹಲವು ದೇಶಗಳು ಬೂಸ್ಟರ್ ಡೋಸ್‌ಗಳನ್ನು ನೀಡಲು ಮುಂದಾಗಿವೆ.

ಇದರೊಂದಿಗೆ, ಕೊರೊನಾ ಸೋಂಕಿನ ವಿರುದ್ಧ ಸಮರ್ಥ ಹೋರಾಟಕ್ಕೆ ನಾಲ್ಕನೇ ಡೋಸ್ ಲಸಿಕೆ ಅಗತ್ಯಬಿದ್ದರೆ ಸೂಕ್ತ ಲಸಿಕೆ ಪೂರೈಕೆ ಸಂಬಂಧ ಇಸ್ರೇಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

English summary
Booster shots of Covid-19 vaccines will soon become necessary for people to gain maximum protection against Covid-19, US top infectious disease expert Dr Anthony Fauci said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X