• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3ನೇ ಮಹಾಯುದ್ಧಕ್ಕೆ ಸಿದ್ಧವಾಯ್ತಾ ಅಮೆರಿಕ? ಸಮುದ್ರದಲ್ಲಿ ಭೀಕರ ಬಾಂಬ್ ಪರೀಕ್ಷೆ!

|
Google Oneindia Kannada News

ಕೊರೊನಾ ಎದುರಿಸಲಾಗದೇ ಪರದಾಡುತ್ತಿರುವ ಜಗತ್ತಿನಲ್ಲಿ, ಇದೀಗ 3ನೇ ಮಹಾಯುದ್ಧಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆಯಾ? ಎಂಬ ಅನುಮಾನವೂ ಕಾಡುತ್ತಿದೆ. ಏಕೆಂದರೆ ಜಗತ್ತಿಗೆ ತಾನೇ ದೊಡ್ಡಣ್ಣ ಅಂತಾ ಬಿಲ್ಡಪ್ ಕೊಡುವ ಅಮೆರಿಕ ಭಾರಿ ಗಾತ್ರದ ಬಾಂಬ್ ಪರೀಕ್ಷೆ ನಡೆಸಿದೆ. ಅಂದಹಾಗೆ ಅಮೆರಿಕ ಏನೇ ಮಾಡಿದ್ರೂ ಅಲ್ಲಿ ಒಂದು ತಂತ್ರ ಹಾಗೂ ಕುತಂತ್ರ ಎರಡೂ ಇರುತ್ತೆ. ಈಗಲೂ ಅಷ್ಟೇ, ಒಂದು ಕಡೆ ವೈರಿಗಳನ್ನು ಹೆದರಿಸೋದಕ್ಕೆ ತಂತ್ರ ಮಾಡಿದ್ರೆ, ಮತ್ತೊಂದ್ಕಡೆ ತನ್ನ ಬಗ್ಗೆ ಬೇರೆಯವರಿಗೆ ಭಯ ಇರಲಿ ಅನ್ನೋ ಕುತಂತ್ರವೂ ಇದೆ.

ಮುಖ್ಯ ವಿಚಾರಕ್ಕೆ ಬರೋದಾದ್ರೆ, ಅಮೆರಿಕ ಹೀಗೆ ಬಾಂಬ್ ಪರೀಕ್ಷೆ ನಡೆಸಿದ್ದರ ಹಿಂದೆ ದೊಡ್ಡ ಕಥೆಯೇ ಇದೆ. ಚೀನಾ ನೌಕಾ ಸೇನೆ ಇಡೀ ಜಗತ್ತಿನಲ್ಲಿ 'ನಂಬರ್-1' ಅಂತಾ ಗುರುತಿಸಿಕೊಂಡ ಬಳಿಕ ಅಮೆರಿಕ ಸುಮ್ಮನಾಗಿಲ್ಲ. ತನ್ನ ಸಾಮರ್ಥ್ಯ ತೋರಿಸಲು ಪದೇ ಪದೆ ಯತ್ನಿಸುತ್ತಿದೆ. ಈಗಲೂ ಅಷ್ಟೇ ಅಮೆರಿಕ ಬಳಿ ಇರುವ 'ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್' ಎಂಬ ನೌಕೆಯ ಸಾಮರ್ಥ್ಯವನ್ನ ಜಗತ್ತಿಗೇ ತೋರಿಸಿದೆ ಅಮೆರಿಕ.

ಸುಮಾರು 18 ಸಾವಿರ ಕಿಲೋ ಟನ್ ಶಕ್ತಿ ಬಿಡುಗಡೆ ಮಾಡಬಲ್ಲ ಅಂದ್ರೆ ನ್ಯೂಕ್ಲಿಯರ್ ಬಾಂಬ್‌ಗಿಂತ ಪ್ರಬಲವಾದ ಬಾಂಬ್‌ ಸ್ಫೋಟಿಸಿದೆ ಅಮೆರಿಕ. ಅದೂ 'ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್' ಯುದ್ಧ ನೌಕೆ ಪಕ್ಕದಲ್ಲೇ. ಹೀಗೆ ಯುದ್ಧ ನೌಕೆ ಪಕ್ಕದಲ್ಲೇ ಶಕ್ತಿಶಾಲಿ ಬಾಂಬ್ ಸ್ಫೋಟಿಸಿ, ನೌಕೆಯ ಶಕ್ತಿ ಎಷ್ಟಿದೆ ಅನ್ನೋದನ್ನ ಜಗತ್ತಿಗೆ ತಿಳಿಸಿದೆ. ಹಾಗೇ ನಮ್ಮ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ ಎಂಬ ಸಂದೇಶವನ್ನೂ ಗುಟ್ಟಾಗಿ ಶತ್ರುಗಳಿಗೆ ರವಾನಿಸಿದೆ ಅಮೆರಿಕ. ಅಮೆರಿಕದ ಫ್ಲೋರಿಡಾ ಕರಾವಳಿಯಲ್ಲಿ ನಡೆದ ಪ್ರಯೋಗ ಅಮೆರಿಕದ ಶತ್ರುಗಳ ಎದೆಯಲ್ಲಿ ನಡುಕ ತರಿಸಿದೆ.

ವಿಡಿಯೋ ನೋಡಿದ್ರೆ ಶಾಕ್ ಆಗುತ್ತೆ..!

ವಿಡಿಯೋ ನೋಡಿದ್ರೆ ಶಾಕ್ ಆಗುತ್ತೆ..!

ಅಮೆರಿಕ ತನ್ನ ಯುದ್ಧ ನೌಕೆ ‘ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್' ಪಕ್ಕದಲ್ಲೇ ಬಾಂಬ್ ಸ್ಫೋಟಿಸಿದೆ. ಹಾಗೇ ಪರೀಕ್ಷೆ ನಡೆಸಿದ್ದೀವಿ ಎಂಬುದಕ್ಕೆ ಸಾಕ್ಷಿ ತೋರಿಸಲು ವಿಡಿಯೋ ರಿಲೀಸ್ ಮಾಡಿದೆ. ವಿಡಿಯೋ ದೃಶ್ಯ ಎಂತಹವರನ್ನೂ ಬೆಚ್ಚಿ ಬೀಳಿತ್ತದೆ. ಕಿವಿ ಕಿತ್ತೋಗುವಂತೆ ಸದ್ದು ಮಾಡುವ ಬಾಂಬ್ ಸಮುದ್ರದ ಆಳದಲ್ಲಿ ಭಾರಿ ಸ್ಫೋಟದೊಂದಿಗೆ ನೀರನ್ನ ಚಿಮ್ಮಿಸಿದೆ. ಒಂದೇ ಬಾರಿಗೆ ಸಮುದ್ರದಲ್ಲಿ ಅಲೆಗಳು ಕೂಡ ಏಳುತ್ತವೆ. ಬಾಂಬ್ ಸ್ಫೋಟಿಸುವ ಸಂದರ್ಭದಲ್ಲಿ ಯುದ್ಧ ನೌಕೆ ‘ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್' ಪಕ್ಕದಲ್ಲೇ ಇರುತ್ತೆ. ಯುದ್ಧ ನೌಕೆ ಇರುವ ಜಾಗದಿಂದ ಕೆಲವೇ ಮೀಟರ್ ಅಂತರದಲ್ಲಿ ಈ ಸ್ಫೋಟ ಪರೀಕ್ಷೆ ನಡೆಸಿದೆ ಅಮೆರಿಕ.

ಸ್ಫೋಟದ ಬಳಿಕ ಕಂಪಿಸಿದ ಭೂಮಿ..!

ಸ್ಫೋಟದ ಬಳಿಕ ಕಂಪಿಸಿದ ಭೂಮಿ..!

ಮೊದಲೇ ಹೇಳಿದಂತೆ ಸುಮಾರು 18 ಸಾವಿರ ಕಿಲೋ ಟನ್ ಶಕ್ತಿ ಬಿಡುಗಡೆ ಮಾಡಬಲ್ಲ ಅಂದ್ರೆ ನ್ಯೂಕ್ಲಿಯರ್ ಬಾಂಬ್‌ಗಿಂತ ಪ್ರಬಲವಾದ ಬಾಂಬ್‌ ಸ್ಫೋಟಿಸಿದ್ರೆ ಅದರ ಪರಿಣಾಮ ಹೇಗಿರಬೇಡ? ಇಲ್ಲೂ ಅದೇ ಆಗಿದ್ದು, ಬಾಂಬ್ ಸ್ಫೋಟ ಸಂಭವಿಸಿದ ಸುಮಾರು 100 ಕಿ.ಮೀ ಅಂತರದವರೆಗೆ ಸ್ಫೋಟದ ತೀವ್ರತೆ ತಾಗಿದೆ. ಜೊತೆಗೆ ರಿಕ್ಟರ್ ಮಾಪಕದಲ್ಲಿ ಸುಮಾರು 3.9ರಷ್ಟು ತೀವ್ರತೆಯ ಭೂಕಂಪನ ಸುತ್ತಮುತ್ತಲ ಪ್ರದೇಶದಲ್ಲಿ ಸಂಭವಿಸಿದೆ. ಭೂಮಿ ಕಂಪಿಸಿರುವ ಬಗ್ಗೆ ಅಮೆರಿಕದ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ನೌಕೆಯ ಸಾಮರ್ಥ್ಯ ಪರಿಶೀಲನೆ ಮಾಡಲು ಈ ಪರೀಕ್ಷೆ ಅಗತ್ಯವಾಗಿತ್ತು ಅಂತಾ ಸಮಜಾಯಿಷಿ ನೀಡಿದ್ದಾರೆ.

ಚೀನಾ ಜೊತೆಗೆ ಪೈಪೋಟಿ..?

ಚೀನಾ ಜೊತೆಗೆ ಪೈಪೋಟಿ..?

ಚೀನಾ ಆರ್ಥಿಕವಾಗಿ ಮಾತ್ರವಲ್ಲ, ಸೇನಾ ಸಾಮರ್ಥ್ಯದಲ್ಲೂ ಜಗತ್ತಿನ ಬಲಿಷ್ಠ ರಾಷ್ಟ್ರವಾಗುವತ್ತ ಹೆಜ್ಜೆ ಇಟ್ಟಿದೆ. ಸಾವಿರ ಸಾವಿರ ಯುದ್ಧ ವಿಮಾನಗಳು, 360 ಯುದ್ಧ ನೌಕೆಗಳು, ಲಕ್ಷಾಂತರ ಸೈನಿಕರು. ಹೀಗೆ ಚೀನಾ ಇಡೀ ಜಗತ್ತಿನ ಬಲಿಷ್ಠ ನೌಕಾ ಸೇನೆ ಕಟ್ಟಿದೆ. ಈ ಮೂಲಕ ಇಷ್ಟು ದಿನ ಜಗತ್ತಿನ ಬಲಿಷ್ಠ ನೌಕಾ ಸೇನೆ ಹೊಂದಿರುವ ದೇಶ ಎಂಬ ಹೆಮ್ಮೆಗೆ ಪಾತ್ರವಾಗಿದ್ದ ಅಮೆರಿಕದ ಕಿರೀಟ ಕಳಚಿದೆ. ಅಟ್ ದಿ ಸೇಮ್ ಟೈಂ, ಚೀನಾದ ನೌಕಾ ಸೇನೆ ಸಾಮರ್ಥ್ಯ ಹೆಚ್ಚಳ ವಿಶ್ವದ ದೊಡ್ಡಣ್ಣನಿಗೆ ನಡುಕ ತಂದಿದೆ. 3ನೇ ಮಹಾಯುದ್ಧದ ಮಾತುಗಳು ಅಲ್ಲಲ್ಲಿ ಓಡಾಡುವಾಗಲೇ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಕೆಲವೇ ತಿಂಗಳ ಹಿಂದೆ ನಡೆದಿದ್ದ ಅಧ್ಯಯನ ವರದಿ, ನೌಕಾ ಸೇನೆಯಲ್ಲಿ ಚೀನಾಗೆ ನಂಬರ್-1 ಪಟ್ಟ ಕೊಟ್ಟಿತ್ತು. ಇದಾದ ಬಳಿಕ ಅಮೆರಿಕ ತನ್ನ ಸಾಮರ್ಥ್ಯ ಪರೀಕ್ಷೆಗೆ ಪದೇ ಪದೆ ಮುಂದಾಗುತ್ತಿದೆ.

 400 ಯುದ್ಧ ನೌಕೆಗಳ ಟಾರ್ಗೆಟ್..!

400 ಯುದ್ಧ ನೌಕೆಗಳ ಟಾರ್ಗೆಟ್..!

ಚೀನಾ ಸರ್ಕಾರ ನೌಕಾ ಬಲ ಹೆಚ್ಚಿಸಲು ಮತ್ತಷ್ಟು ಆದ್ಯತೆ ನೀಡುತ್ತಿದ್ದು, ಮುಂದಿನ 4 ವರ್ಷಗಳ ಅವಧಿಯಲ್ಲಿ ಈಗಿರುವ 360 ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ತನ್ನ ಜಲ ಗಡಿಯಲ್ಲಿನ ಭದ್ರತೆ ಹಾಗೂ ಶತ್ರು ಪಡೆಗಳಿಗೆ ದೊಡ್ಡ ಸಂದೇಶವಾಗಲಿದೆ ಎಂಬುದು ಚೀನಾ ಲೆಕ್ಕಾಚಾರ. ಈಗಾಗಲೇ ಭೂ ಸೇನೆ ಹಾಗೂ ವಾಯು ಸೇನೆಗಳಲ್ಲೂ ಬಲ ಪ್ರದರ್ಶನ ಮಾಡಿರುವ ಚೀನಿ ಸೇನೆ, ಸಮದ್ರದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುವ ಹಕ್ಕು ಸ್ವಾಮ್ಯ ಇದರಿಂದ ಮತ್ತಷ್ಟು ಗಟ್ಟಿಯಾಗಲಿದೆ.

English summary
US Navy released a video that powerful bomb explodes beside aircraft carrier in ocean.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X