ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನದಿಗೆ ನುಗ್ಗಿದ ಬೋಯಿಂಗ್ 737 ವಿಮಾನ: 136 ಪ್ರಯಾಣಿಕರ ಕತೆ ಏನಾಯ್ತು?

|
Google Oneindia Kannada News

ಫ್ಲೋರಿಡಾ, ಮೇ 04: 136 ಪ್ರಯಾಣಿಕರನ್ನು ಹೊತ್ತಿದ್ದ ಬೋಯಿಂಗ್ 737 ವಿಮಾನವೊಂದು ಲ್ಯಾಂಡ್ ಆದ ಸಮಯದಲ್ಲಿ ರನ್ ವೇಯಲ್ಲಿ ಸ್ಕಿಡ್ ಆಗಿ ಪಕ್ಕದಲ್ಲಿದ್ದ ನದಿಗೆ ನುಗ್ಗಿದ ಘಟನೆ ಶುಕ್ರವಾರ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.

ಫ್ಲೋರಿಡಾದ ಜಾಕ್ಸೋನ್ವಿಲ್ಲೆ ಎಂಬಲ್ಲಿ ಸೇಂಟ್ ಜಾನ್ಸ್ ನದಿಗೆ ವಿಮಾನ ನುಗ್ಗಿತ್ತು. ವಿಮಾನದಲ್ಲಿದ್ದ 136 ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜಾಕ್ಸೋನ್ವಿಲ್ಲೆಯ ನೌಕಾನೆಲೆಯ ವಕ್ತಾರರು ತಿಳಿಸಿದ್ದಾರೆ.

Boeing 737 carrying 136 passangers skids off into a river in America

149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ

ವಿಮಾನ ಸಂಪೂರ್ಣವಾಗಿ ನದಿಯಲ್ಲಿ ಮುಳುಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಈಗಾಗಲೇ ಎಲ್ಲ ಪ್ರಯಾಣಿಕರನ್ನೂ ರಕ್ಷಿಸಲಾಗಿದೆ ಎನ್ನಲಾಗಿದೆ.

ಅಪಹೃತ ಹಿಂದೂ ಬಾಲಕಿಯರನ್ನು ಕುಟುಂಬಕ್ಕೆ ಮರಳಿಸಿ: ಪಾಕ್‌ಗೆ ಸುಷ್ಮಾ ತಾಕೀತುಅಪಹೃತ ಹಿಂದೂ ಬಾಲಕಿಯರನ್ನು ಕುಟುಂಬಕ್ಕೆ ಮರಳಿಸಿ: ಪಾಕ್‌ಗೆ ಸುಷ್ಮಾ ತಾಕೀತು

ಕಳೆದ ವಾರವಷ್ಟೇ, ಮಹಾರಾಷ್ಟ್ರದ ಶಿರಡಿಯಲ್ಲಿ ಸ್ಪೈಸ್ ಜೆಟ್ ವಿಮಾನವೊಂದು ಲ್ಯಾಂಡ್ ಆಗುವ ಸಮಯದಲ್ಲಿ ರನ್ ವೇ ತಪ್ಪಿದ ಕಾರಣ ಸಂಚಾರ ವ್ಯತ್ಯಯವಾಗಿತ್ತು. ಆದರೆ ಅದೃಷ್ಟ ವಶಾತ್ ಪ್ರಯಾಣಿಕರೆಲ್ಲರೂ ಭಾರೀ ದುರಂತದಿಂದ ಪಾರಾಗಿದ್ದರು.

English summary
A Boeing 737 commercial jet carrying 136 passangers on board skids off into the st John's river, Florida, America
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X