ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಿಟ್ಟಾಕಿ, ಇನ್ನೂ ದೊಡ್ಡ ಗಂಡಾಂತರ ಕಾದಿದೆ: ಬಿಲ್ ಗೇಟ್ಸ್

|
Google Oneindia Kannada News

ಹಲವು ವರ್ಷಗಳ ಕಾಲ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಅಮೆರಿಕ ಮೂಲದ ಉದ್ಯಮಿ ಬಿಲ್ ಗೇಟ್ಸ್, ಕೊರೊನಾ ವಿಚಾರವಾಗಿ ಸ್ಫೋಟಕ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೇಟ್ಸ್, ನಾವು ಕೊರೊನಾ ಪರಿಸ್ಥಿತಿ ಎದುರಿಸುತ್ತೇವೆ. ಕೊರೊನಾ ವಿರುದ್ಧ ಹೋರಾಡಿ ಗೆಲ್ಲುವುದು ಖಚಿತ.

ಆದರೆ ಇದೆಲ್ಲಕ್ಕಿಂತಲೂ ದೊಡ್ಡಯುದ್ಧ ಮುಂದೆ ಕಾದಿದೆ ಎಂದು ಗೇಟ್ಸ್ ವಾರ್ನಿಂಗ್ ಕೊಟ್ಟಿದ್ದಾರೆ. ವಾತಾವರಣ ಬದಲಾವಣೆ ಹಾಗೂ ತಾಪಮಾನ ಏರಿಕೆ ನಮ್ಮೆಲ್ಲರಿಗೆ ದೊಡ್ಡ ಶತ್ರು. ಕೊರೊನಾ ಅಪ್ಪಳಿಸಿದ ಬಳಿಕ ನಾವೆಲ್ಲಾ ಸಾಕಷ್ಟು ವಿಚಾರ ಕಲಿತಿದ್ದೇವೆ. ಕೊರೊನಾ ಕಾರಣಕ್ಕೇ ಸಾಕಷ್ಟು ಏರಿಳಿತಗಳು ಉಂಟಾಗಿವೆ.

ಆದರೆ ಕೊರೊನಾ ವಿರುದ್ಧ ಹೋರಾಟ ತಾತ್ಕಾಲಿಕ. ಮುಂದೆ ಇದಕ್ಕಿಂತ ದೊಡ್ಡ ಯುದ್ಧಕ್ಕೆ ಅಣಿಯಾಗಬೇಕು. ಜಾಗತಿಕ ತಾಪಮಾನ ಏರಿಕೆ ನಿಯಂತ್ರಣಕ್ಕೆ ತಕ್ಷಣ ನಾವು ಪಣತೊಟ್ಟು ಹೋರಾಡಬೇಕು ಎಂದು ಬಿಲ್ ಗೇಟ್ಸ್ ಎಚ್ಚರಿಕೆ ನೀಡಿದ್ದಾರೆ. 'ಕ್ಲೈಮೆಟ್ ಚೇಂಜ್'ನಲ್ಲಿ ಅಮೆರಿಕದ ಪಾತ್ರ ಹಾಗೂ ಅದನ್ನು ನಿಭಾಯಿಸಲು ಅಮೆರಿಕ ಏನು ಮಾಡಬೇಕು ಎಂದು ಗೇಟ್ಸ್ ತಿಳಿಸಿದ್ದಾರೆ.

 ತಂತ್ರಜ್ಞಾನ ಸರಿಯಾಗಿ ಬಳಸುತ್ತಿಲ್ಲ

ತಂತ್ರಜ್ಞಾನ ಸರಿಯಾಗಿ ಬಳಸುತ್ತಿಲ್ಲ

ಜಾಗತಿಕ ತಾಪಮಾನ ಏರಿಳಿತ ಹಾಗೂ ನಿಯಂತ್ರಣದ ಬಗ್ಗೆ ಬಿಲ್ ಗೇಟ್ಸ್ ಪುಸ್ತಕ ಬರೆದಿದ್ದಾರೆ. 'ಹವಾಮಾನ ವಿಪತ್ತು ತಪ್ಪಿಸುವುದು ಹೇಗೆ' (How to Avoid a Climate Disaster) ಎಂಬುದು ಬಿಲ್ ಗೇಟ್ಸ್ ಪುಸ್ತಕದ ಶಿರ್ಷಿಕೆ. ಈ ಪುಸ್ತಕದಲ್ಲಿ ಬಿಲ್ ಗೇಟ್ಸ್ ಹಲವು ವೈಜ್ಞಾನಿಕ ಅಂಶಗಳನ್ನು ಮುಂದಿಟ್ಟು ಪರಿಸ್ಥಿತಿ ವಿವರಿಸಿದ್ದಾರೆ. ಪ್ರತಿವರ್ಷವೂ ಭೂ ವಾತಾವರಣಕ್ಕೆ 51 ಬಿಲಿಯನ್ ಟನ್ 'ಹಸಿರು ಮನೆ ಅನಿಲ' (Green House Gas) ಸೇರಿಸುತ್ತಿದ್ದೇವೆ. ಇದು ಬಹುದೊಡ್ಡ ಗಂಡಾಂತರ ಸೃಷ್ಟಿ ಮಾಡುತ್ತಿದೆ. 'ಹಸಿರು ಮನೆ ಅನಿಲ' ನಿಯಂತ್ರಣಕ್ಕೆ ನಾವು ಕೈಗೊಂಡ ಕ್ರಮಗಳು ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ತಕ್ಷಣ ನಾವು ಅಲರ್ಟ್ ಆಗಬೇಕು ಮತ್ತು ಪರಿಣಾಮಕಾರಿ ಯೋಜನೆಗಳ ಮೂಲಕ 'ಹಸಿರು ಮನೆ ಅನಿಲ'ಕ್ಕೆ ದೊಡ್ಡ ಬ್ರೇಕ್ ಹಾಕಬೇಕೆಂದು ಗೇಟ್ಸ್ ಸಲಹೆ ನೀಡಿದ್ದಾರೆ.

ಅಮೆರಿಕ ಅಲರ್ಟ್ ಆಗಬೇಕಿದೆ..!

ಅಮೆರಿಕ ಅಲರ್ಟ್ ಆಗಬೇಕಿದೆ..!

ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ನಮ್ಮ ಪಾತ್ರ ಬಹುಮುಖ್ಯ ಎಂದಿದ್ದಾರೆ ಬಿಲ್ ಗೇಟ್ಸ್. ಏಕೆಂದರೆ ಅಮೆರಿಕದಿಂದಲೂ ಭೂಮಿಯ ವಾತಾವರಣಕ್ಕೆ ಹಸಿರು ಮನೆ ಅನಿಲ ಹೆಚ್ಚಾಗಿ ಸೇರುತ್ತಿದೆ. ಅಮೆರಿಕದಲ್ಲಿನ ಉದ್ಯಮ, ತಯಾರಿಕಾ ಘಟಕಗಳಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಂಡರೆ ಪರಿಸ್ಥಿತಿ ನಿಭಾಯಿಬಹುದಾಗಿದೆ ಎನ್ನುತ್ತಾರೆ ಬಿಲ್ ಗೇಟ್ಸ್. ಭವಿಷ್ಯದ ದೃಷ್ಟಿಯಿಂದ ನಾವು ಇದನ್ನ ಮಾಡಲೇಬೇಕು. ಇಲ್ಲವಾದರೆ ಜಗತ್ತಿನ ಇತರ ರಾಷ್ಟ್ರಗಳ ಜೊತೆ ಅಮೆರಿಕ ಕೂಡ ಜಾಗತಿಕ ತಾಪಮಾನ ಬದಲಾವಣೆಯ ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ಗೇಟ್ಸ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಆಧುನಿಕ ಜಗತ್ತಿನ ಪಾಲಿಗೆ ‘ಕರ್ಣ’

ಆಧುನಿಕ ಜಗತ್ತಿನ ಪಾಲಿಗೆ ‘ಕರ್ಣ’

ಬಿಲ್ ಗೇಟ್ಸ್ ಈವರೆಗೂ ಎಷ್ಟು ದಾನ ಮಾಡಿರಬಹುದು ಹೇಳಿ..? ಹೂಂ.. ಹೂಂ.. ಬಹುಪಾಲು ಜನರಿಗೆ ಇದರ ಅಂದಾಜು ಕೂಡ ಸಿಗದು. ಏಕೆಂದರೆ ಬಿಲ್‌ ಗೇಟ್ಸ್ ದಾನ ಮಾಡಿರುವ ಮೊತ್ತ ದೊಡ್ಡ ಪ್ರಮಾಣದ್ದು. 1994ರಿಂದ ಇಲ್ಲಿಯವರೆಗೂ ಸುಮಾರು 50 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣವನ್ನು ದಾನ ಮಾಡಿದ್ದಾರೆ ಬಿಲ್ ಗೇಟ್ಸ್ ದಂಪತಿ. ಹೀಗೆ ಬಿಲ್ ಗೇಟ್ಸ್ ಆಧುನಿಕ ಜಗತ್ತಿನ ಪಾಲಿಗೆ ಕರ್ಣನಂತಾಗಿದ್ದಾರೆ. ಈ ಕಾರಣಕ್ಕೆ ಬಹುಪಾಲು ಬಡ ರಾಷ್ಟ್ರಗಳು ಬಿಲ್ ಗೇಟ್ಸ್ ಸಹಾಯ ನೆನೆಸಿಕೊಳ್ಳುತ್ತವೆ. ಅದರಲ್ಲೂ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ಗೇಟ್ಸ್ ಕೊಟ್ಟಿರುವ ಕೊಡುಗೆ ತುಂಬಾ ದೊಡ್ಡದು.

ಮಕ್ಕಳ ವಿಚಾರದಲ್ಲೂ ಮಾದರಿ..!

ಮಕ್ಕಳ ವಿಚಾರದಲ್ಲೂ ಮಾದರಿ..!

ಗೇಟ್ಸ್ ಮಕ್ಕಳನ್ನ ಬೆಳೆಸುವ ವಿಚಾರದಲ್ಲೂ ಜಗತ್ತಿಗೆ ಮಾದರಿಯಾದವರು. ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಮೇಲೆ ತಂತ್ರಜ್ಞಾನ ಹೇಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಹಲವು ಬಾರಿ ಎಚ್ಚರಿಸಿದ್ದರು. ಇದಕ್ಕೆ ತಮ್ಮ ಮಕ್ಕಳನ್ನ ಬೆಳೆಸಿದ್ದ ರೀತಿಯನ್ನೇ ಉದಾಹರಣೆಯಾಗಿ ನೀಡಿದ್ದರು ಗೇಟ್ಸ್. ಹೀಗೆ ಬಿಲ್ ಗೇಟ್ಸ್ ಕೇವಲ ಉದ್ಯಮಿ ಎನಿಸಿಕೊಳ್ಳುವುದಿಲ್ಲ. ಅಮೆರಿಕದ ಇತರ ಉದ್ಯಮಿಗಳಿಗಿಂತ ಗೇಟ್ಸ್ ಸಾಕಷ್ಟು ಭಿನ್ನರಾಗಿ ಕಾಣುತ್ತಾರೆ. ಮಕ್ಕಳು, ಬಡವರ ಬಗ್ಗೆ ಸಾಕಷ್ಟು ಆಳವಾದ ಆಲೋಚನೆಗಳನ್ನು ಅವರು ಹೊಂದಿದ್ದಾರೆ. ಉದ್ಯಮಕ್ಕಿಂತಲೂ ಹೆಚ್ಚಾಗಿ ಮೌಲ್ಯಗಳನ್ನೇ ನಿಂಬಿದ್ದಾರೆ ಬಿಲ್ ಗೇಟ್ಸ್. ಹೀಗಾಗಿ ಭೂ ವಾತಾವರಣ ಬದಲಾವಣೆ ಬಗ್ಗೆ ಗೇಟ್ಸ್ ನೀಡಿರುವ ಎಚ್ಚರಿಕೆಯನ್ನ ಪ್ರತಿಯೊಂದು ರಾಷ್ಟ್ರವೂ ಗಂಭೀರವಾಗಿ ಪರಿಗಣಿಸಬೇಕಿದೆ.

English summary
The Bill Gates warned about Climate Change & Global Warming effects. Bill Gates suggested some precautions to control the Climate Change.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X