• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತಿ ಶ್ರೀಮಂತ, ಮಹಾದಾನಿ ಬಿಲ್ ಗೇಟ್ಸ್ ದಾಂಪತ್ಯದಲ್ಲಿ ಬಿರುಕು

|

ವಾಷಿಂಗ್ಟನ್, ಮೇ 4: ವಿಶ್ವ ಕಂಡ ಶ್ರೇಷ್ಠ ಸಾಫ್ಟ್ ವೇರ್ ತಂತ್ರಜ್ಞ, ಉದ್ಯಮಿ, ಮಹಾದಾನಿ ಬಿಲ್ ಗೇಟ್ಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸುಮಾರು 27 ವರ್ಷಗಳ ಬಳಿಕ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮಿಲಿಂದಾ ಅವರು ವಿಚ್ಛೇದನ ಆಯ್ಕೆ ಮಾಡಿಕೊಂಡಿದ್ದಾರೆ.

ಪರಸ್ಪರ ಸಹಮತಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಲ್ ಗೇಟ್ಸ್ ಅವರು ಟ್ವೀಟ್ ಮಾಡಿದ್ದಾರೆ. ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮಿಲಿಂದಾ ಸೇರಿ ಸ್ಥಾಪಿಸಿರುವ ಫೌಂಡೇಷನ್ ಮೂಲಕ ವಿಶ್ವದೆಲ್ಲೆಡೆ ಸಾಮಾಜಿಕ ಕಳಕಳಿ ಕಾರ್ಯ ನಡೆಸಲಾಗುತ್ತಿದೆ. ಆರೋಗ್ಯ ವ್ಯವಸ್ಥೆ ಸುಧಾರಣೆಗೂ ಅಪಾರ ಮೊತ್ತದ ದಾನ ನೀಡಿದ್ದಾರೆ.

67 ವರ್ಷ ವಯಸ್ಸಿನ ಬಿಲ್ ಹಾಗೂ 56 ವರ್ಷ ವಯಸ್ಸಿನ ಮಿಲಿಂದಾ ನ್ಯೂಯಾರ್ಕ್ ಟ್ರೇಡ್ ಶೋನಲ್ಲಿ ಮೊದಲಿಗೆ ಭೇಟಿಯಾಗಿದ್ದರು. 1987ರ ವೇಳೆಗೆ ಮಿಲಿಂದಾ-ಬಿಲ್ ಡೇಟಿಂಗ್‌ನಲ್ಲಿದ್ದರು ನಂತರ ಹವಾಯಿಯಲ್ಲಿ 1994ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.

   Corona ಕಡಿಮೆಯಾಗಿದೆ ಎಂದು ವರದಿಯಾಗಲು ಇದೇ ಕಾರಣ | Oneindia Kannada

   20219ರ ಜುಲೈ ತಿಂಗಳಲ್ಲಿ ಜೆಫ್ ಬೆಜೋಸ್ ಹಾಗೂ ಮೆಕ್ ಕೆಂಜಿ ಸ್ಕಾಟ್ ದಂಪತಿ ವಿಚ್ಛೇದನ ಪಡೆದುಕೊಂಡು ಅಚ್ಚರಿ ಮೂಡಿಸಿದ್ದರು. 25 ವರ್ಷಗಳ ನಂತರ ಈ ದಂಪತಿ ವಿಚ್ಛೇದನ ಹಾಗೂ ಬೆಜೋಸ್ ತಮ್ಮ ಪತ್ನಿಗೆ ನೀಡಿದ ವಿಚ್ಛೇದನ ಮೊತ್ತ ಇನ್ನೂ ಚರ್ಚೆಯಲ್ಲಿದೆ.

   English summary
   Bill and Melinda Gates have decided to end their 27 years of marriage, saying ‘we no longer believe we can grow together as a couple’.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X