ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನ

|
Google Oneindia Kannada News

ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮಗಳು ನಡೆಯಬಹುದು ಎಂಬ ಆತಂಕವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಹೊರಹಾಗಿದ್ದಾರೆ. ಅಂದಹಾಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನ ಬಹುದೊಡ್ಡ ಬೆದರಿಕೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡುವುದರಿಂದ ನಕಲಿ ಮತದಾನಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಆತಂಕ ಮನೆಮಾಡಿರುವಾಗಲೇ ಚುನಾವಣೆ ಕೂಡ ಎದುರಾಗಿದೆ. ಆದರೆ ಇಂತಹ ಸಂದಿಗ್ಧ ಸಂದರ್ಭದಲ್ಲಿ ಮೊದಲಿನಂತೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸುರಕ್ಷಿತ ಮತದಾನಕ್ಕೆ ಅಮೆರಿಕ ಮುಂದಾಗಿದೆ. ಇದೇ ಕಾರಣಕ್ಕೆ ಅಂಚೆ ಮತದಾನಕ್ಕೆ ತೀರ್ಮಾನಿಸಲಾಗಿದೆ. ಆದರೆ ಇದಕ್ಕೆ ಸ್ವತಃ ಅಮೆರಿಕ ಅಧ್ಯಕ್ಷರಿಂದಲೇ ಆಕ್ಷೇಪ ವ್ಯಕ್ತವಾಗುತ್ತಿದೆ.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ವಿಪಕ್ಷ ಡೆಮಾಕ್ರಟಿಕ್ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರು ಅಂಚೆ ಮತದಾನ ಮಾಡುವುದನ್ನು ಉತ್ತೇಜಿಸುತ್ತಿದ್ದಾರೆ. ಕೊರೊನಾ ಹರಡುತ್ತಿರುವ ಕಾಲದಲ್ಲಿ ಅಂಚೆ ಮತದಾನ ಆದ್ಯತೆಯಾಗಿರಬೇಕು ಎಂದು ಹೇಳುತ್ತಿದ್ದಾರೆ. ಆದರೆ ಹೀಗೆ ಹೇಳುವವರು ಮತಪತ್ರಗಳನ್ನೇ ನಿಯಂತ್ರಿಸುತ್ತಾರೆ. ಇದು ಅಧ್ಯಕ್ಷೀಯ ಚುನಾವಣೆಗೆ ಎದುರಾಗಿರುವ ಬಹುದೊಡ್ಡ ಆತಂಕ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.

 ಯಾರದ್ದೋ ವೋಟ್ ಯಾರೋ ಹಾಕ್ತಾರೆ

ಯಾರದ್ದೋ ವೋಟ್ ಯಾರೋ ಹಾಕ್ತಾರೆ

ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ಕೂಡ ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನವಾಗಿದೆ. ಇಷ್ಟೆಲ್ಲದರ ಮಧ್ಯೆ ವಾದ ಮುಂದುವರಿಸಿರುವ ಡೆಮಾಕ್ರಟಿಕ್ ಪಕ್ಷದ ನಾಯಕರು, ಅಂಚೆ ಮತದಾನ ಪ್ರಕ್ರಿಯೆ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ. ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭದಲ್ಲಿ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿರಬೇಕು ಎನ್ನುತ್ತಿದ್ದಾರೆ.

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಟ್ರಂಪ್ ಈ ರೀತಿ ಮತದಾನ ಪ್ರಕ್ರಿಯೆ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಅನ್ನೋದು ಡೆಮಾಕ್ರಟಿಕ್ ಪಕ್ಷದವರ ಆರೋಪ. ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಜೊತೆಗೆ ಕೊರೊನಾ ಸಂಕಷ್ಟ ಹಾಗೂ ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

 ಕಮಲಾ ಆಯ್ಕೆ ದೊಡ್ಡ ತಿರುವು

ಕಮಲಾ ಆಯ್ಕೆ ದೊಡ್ಡ ತಿರುವು

ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಆಯ್ಕೆ ಬಿಡೆನ್‌ಗೆ ದೊಡ್ಡ ತಿರುವು ಕೊಟ್ಟಿದೆ. ಏಕೆಂದರೆ ಕಮಲಾ ಅವರಿಗೆ ಭಾರತೀಯರು ಸೇರಿದಂತೆ ಆಫ್ರಿಕನ್-ಅಮೆರಿಕನ್ ಮತದಾರರು ಕೂಡ ಬೆಂಬಲ ಸೂಚಿಸುತ್ತಿದ್ದಾರೆ. ಈಗಾಗಲೇ ಕಮಲಾ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿರುವ ಟ್ರಂಪ್, ಕಮಲಾ ಆಯ್ಕೆಯಿಂದ ವಿಚಲಿತರಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

ಭಾರತೀಯ ಮತದಾರರೇ ನಿರ್ಣಾಯಕ

ಭಾರತೀಯ ಮತದಾರರೇ ನಿರ್ಣಾಯಕ

ಏಕೆಂದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಭಾರತೀಯ ಮತದಾರರೇ ನಿರ್ಣಾಯಕ. ಹೀಗಾಗಿ ಭಾರತೀಯರ ಮತ ಪಡೆಯುವಲ್ಲಿ ಕಮಲಾ ಯಶಸ್ವಿಯಾದರೆ ಅದು ಟ್ರಂಪ್ ಸೋಲಿಗೆ ಮುನ್ನುಡಿ ಬರೆಯಲಿದ್ದು, ಈಗ ಇದೇ ಆಗುತ್ತಿದೆ. ದಿನದಿಂದ ದಿನಕ್ಕೆ ಅಮೆರಿಕನ್ನರ ವಿಶ್ವಾಸ ಗಳಿಸುತ್ತಿರುವ ಕಮಲಾ, ಭಾರತೀಯರ ಮತಗಳನ್ನು ಡೆಮಾಕ್ರಟಿಕ್ ಪಕ್ಷದ ಪರವಾಗಿ ಒಗ್ಗೂಡಿಸುತ್ತಿದ್ದಾರೆ.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

English summary
According to the President Trump, biggest threat to the president election is Governors from opposing parties who controlling the ballots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X