• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ದಯವಿಟ್ಟು ಮಾಸ್ಕ್ ಹಾಕಿ’ ಅಮೆರಿಕನ್ನರಿಗೆ ಬೈಡನ್ ಮನವಿ

|

ನಾನು ಅಧಿಕಾರಕ್ಕೆ ಬರುತ್ತಿದ್ದಂತೆ ಅಮೆರಿಕ ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ತೊಡುವುದನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸುತ್ತೇನೆ ಎಂದು ನೂತನ ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರಜೆಗಳಿಗೂ ಮಾಸ್ಕ್ ಮಹತ್ವದ ಕುರಿತು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಬೈಡನ್ ತಿಳಿದ್ದಾರೆ. ಅಮೆರಿಕದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕೋಟ್ಯಂತರ ಜನರಿಗೆ ಸೋಂಕು ವಕ್ಕರಿಸಿದೆ. ಆದರೆ ಈ ಹೊತ್ತಲ್ಲೂ ಬಹುಪಾಲು ಅಮೆರಿಕನ್ನರು ಮಾಸ್ಕ್ ತೊಡದೆ ಬೇಜವಾಬ್ದಾರಿ ವರ್ತನೆ ತೋರಿದ್ದು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೂ ಕಾರಣವಾಗಿತ್ತು.

ಹೀಗೆ ಅಮೆರಿಕನ್ನರು ಮಾಸ್ಕ್ ತೊಡಲು ಹಠ ಮಾಡಿದ್ದರ ಹಿಂದೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತ್ರ ದೊಡ್ಡದಿದೆ. ಟ್ರಂಪ್ ಹಾಗೂ ಬೈಡನ್ ಮಧ್ಯೆ ಮಾಸ್ಕ್ ಬಗ್ಗೆ ದೊಡ್ಡ ಕಿತ್ತಾಟ ನಡೆದಿತ್ತು. ಚುನಾವಣೆಯಲ್ಲೂ ಟ್ರಂಪ್ ಮಾಸ್ಕ್ ವಿಚಾರವನ್ನೇ ದೊಡ್ಡದು ಮಾಡಿದ್ದರು. ಎಲ್ಲಾ ಬೆಳವಣಿಗೆಗಳು ಅಮೆರಿಕನ್ನರನ್ನ ವಿಭಜನೆ ಮಾಡಿತ್ತು.

ಜೋ ಬೈಡನ್-ಗುಟೆರಸ್ ಮಹತ್ವದ ಮಾತುಕತೆ

ಅತ್ತ ಮಾಸ್ಕ್ ತೊಡದವರು ಟ್ರಂಪ್‌ ಪರವಾಗಿ ನಿಂತರೆ ಮಾಸ್ಕ್ ತೊಟ್ಟು ಕೊರೊನಾ ಓಡಿಸೋಣ ಎಂದು ಬೈಡನ್ ಬೆಂಬಲಿಗರು ಘೋಷಣೆ ಹೊರಡಿಸಿದ್ದರು. ಹೀಗೆ ಸಣ್ಣ ವಿಚಾರ ದೊಡ್ಡದು ಮಾಡಿದ ಟ್ರಂಪ್ ವರ್ತನೆಯಿಂದ ಕೊರೊನಾ ತೀವ್ರವಾಗಿ ಹರಡಿದೆ ಎಂದು ತಜ್ಞರು ಆರೋಪಿಸುತ್ತಿದ್ದಾರೆ. ಬೈಡನ್ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಸ್ಕ್ ಕಡ್ಡಾಯ ಮಾಡುವ ಭರವಸೆ ನೀಡಿದ್ದಾರೆ.

ಪ್ರಜೆಗಳಿಗೆ ಆಜ್ಞೆ ಹೊರಡಿಸುವಂತಿಲ್ಲ

ಪ್ರಜೆಗಳಿಗೆ ಆಜ್ಞೆ ಹೊರಡಿಸುವಂತಿಲ್ಲ

ಅಮೆರಿಕದ ಕಾನೂನಿನಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಯಾವುದೇ ಕಾನೂನು ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಈ ಬಗ್ಗೆ ಸೂಚನೆ ನೀಡಬಹುದಷ್ಟೇ. ಆದರೆ ಅಮೆರಿಕದ ಪ್ರಜೆಗಳಿಗೆ ಆಜ್ಞೆಯ ಮೂಲಕ ಅಧ್ಯಕ್ಷರು ಮಾಸ್ಕ್ ಹಾಕಿ ಎಂದು ಸೂಚಿಸುವ ಅಧಿಕಾರ ಇಲ್ಲ. ಇದಕ್ಕೆ ಮತ್ತೊಂದು ಕಾರಣ ಅಮೆರಿಕದಲ್ಲಿ ರಾಜ್ಯಗಳಿಗೆ ಇರುವ ಸಾರ್ವಭೌಮತ್ವ. ಅಮೆರಿಕದಲ್ಲಿ ರಾಜ್ಯಗಳು ಕೇಂದ್ರದ ಅಂದರೆ ಅಧ್ಯಕ್ಷರ ಮಾತನ್ನು ಪಾಲಿಸಲೇಬೇಕು ಎಂಬ ನಿಯಮವಿಲ್ಲ. ಏಕೆಂದರೆ ಅಲ್ಲಿ ಪ್ರತಿಯೊಂದು ರಾಜ್ಯಕ್ಕೂ ಸಾರ್ವಭೌಮತ್ವ ಇರುತ್ತದೆ. ಈ ಅಧಿಕಾರ ಬಳಸಿ ಕೇಂದ್ರದ ನಿಯಮ ವಿರೋಧಿಸಬಹುದು ತನ್ನ ರಾಜ್ಯದಲ್ಲಿ ಜಾರಿಯಾಗದಂತೆ ತಡೆಯಬಹುದು. ಇದೆಲ್ಲವನ್ನೂ ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಬೈಡನ್, ಅಧ್ಯಕ್ಷರಾಗಿ ಪ್ರಜೆಗಳ ಮನವೊಲಿಸುವ ಮೂಲಕ ಮಾಸ್ಕ್ ತೊಡುವ ಹಾಗೆ ಮಾಡಲು ಮುಂದಾಗಿದ್ದಾರೆ.

‘ನಾನು, ಕಮಲಾ ಮಾಸ್ಕ್ ಹಾಕ್ತೀವಿ’

‘ನಾನು, ಕಮಲಾ ಮಾಸ್ಕ್ ಹಾಕ್ತೀವಿ’

ಅಮೆರಿಕದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಬೈಡನ್, ಮಾಸ್ಕ್ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಕನಿಷ್ಠ 100 ದಿನ ಮಾಸ್ಕ್ ಹಾಕುವಂತೆ ಜನರಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ. ಜನರು ಜೀವನಪೂರ್ತಿ ಮಾಸ್ಕ್ ಹಾಕುವುದು ಬೇಡ, ಕನಿಷ್ಠ 100 ದಿನ ಮಾಸ್ಕ್ ಹಾಕಿದರೆ ಸಾಕು. ಅದರಿಂದ ಕೊರೊನಾ ಹಿಡಿತಕ್ಕೆ ಸಿಗುತ್ತದೆ ಎಂಬುದು ಬೈಡನ್ ಲೆಕ್ಕಾಚಾರವಾಗಿದೆ. ಹೀಗೆ ಜನರನ್ನ ಮಾಸ್ಕ್ ಹಾಕುವಂತೆ ಉತ್ತೇಜಿಸುವುದಕ್ಕೆ ಸ್ವತಃ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಕಡ್ಡಾಯವಾಗಿ ಮಾಸ್ಕ್ ಹಾಕುವುದಕ್ಕೂ ನಿರ್ಧರಿಸಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಅಮೆರಿಕದಲ್ಲಿ ಮಾಸ್ಕ್ ಕಡ್ಡಾಯ ಮಾಡದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುತ್ತದೆ. ಈಗಾಗಲೇ ಸುಮಾರು ಒಂದೂವರೆ ಕೋಟಿ ಅಮೆರಿಕನ್ನರಿಗೆ ಕೊರೊನಾ ವಕ್ಕರಿಸಿದ್ದು, ಸಾವಿನ ಸಂಖ್ಯೆ 3 ಲಕ್ಷ ತಲುಪುವ ಆತಂಕ ಇದೆ.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿತ್ತು. ಟ್ರಂಪ್ ಹಾಗೂ ಬೆಂಬಲಿಗರು ಮಾಸ್ಕ್ ವಿರೋಧಿಸುತ್ತಾ ಬಂದಿದ್ದರು. ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದರು. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು.

  Chahal Jadeja ಅದಲು ಬದಲು ಸರಿ ಇಲ್ಲ ಎಂದ Henriques | Oneindia Kannada
  ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ

  ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ

  ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸ ವೈಟ್‌ಹೌಸ್‌ನಲ್ಲಿ ಟ್ರಂಪ್ ನಡೆಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಘಟನೆಯ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ದೈಹಿಕ ಅಂತರ ಕಾಪಾಡದ ಅಮೆರಿಕದ ನಾಯಕರ ವಿರುದ್ಧ ವಿಶ್ವವೇ ಗರಂ ಆಗಿದೆ.

  English summary
  The new president of America Joe Biden has promised that he will mandate masks in US government offices after he takes the power.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X