ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 15 ರಂದು ಜೋ ಬೈಡನ್ ಜತೆ ಕ್ಸಿ ಜಿನ್‌ಪಿಂಗ್ ವರ್ಚ್ಯುವಲ್ ಸಭೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 13: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನವೆಂಬರ್ 15ರಂದು ವರ್ಚ್ಯುವಲ್ ಸಭೆ ನಡೆಸಲಿದ್ದಾರೆ.

ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಪೈಪೋಟಿಯನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಹಾಗೂ ಉಭಯ ರಾಷ್ಟ್ರಗಳ ಹಿತಾಸಕ್ತಿಗಳು ಹೊಂದಾಣಿಕೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಬಂಧ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.

ಬೈಡನ್- ಜಿನ್ ಪಿಂಗ್ ನಡುವೆ ವರ್ಷಾಂತ್ಯದಲ್ಲಿ ವರ್ಚ್ಯುಯಲ್ ಮಾತುಕತೆ ಏರ್ಪಡಿಸುವ ಸಂಬಂಧ ಕಳೆದ ತಿಂಗಳೇ ಒಮ್ಮತಕ್ಕೆ ಬಂದಿದ್ದರ ಬಗ್ಗೆ ಅಮೆರಿಕ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅಮೆರಿಕ-ಚೀನಾದ ನಡುವೆ ದ್ವಿಪಕ್ಷೀಯ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಹದಗೆಟ್ಟಿತ್ತು. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

Biden To Hold Virtual Summit With Chinas Xi Jinping On November 15

ಸದ್ಯಕ್ಕೆ ಅಮೆರಿಕ-ಚೀನಾದ್ದು ಜಗತ್ತಿನ ಅತಿ ಸಂಕೀರ್ಣ ದ್ವಿಪಕ್ಷೀಯ ಸಂಬಂಧವಾಗಿದೆ. ಇದಕ್ಕೂ ಮುನ್ನ ಸೆ.09 ರಂದು ಇಬ್ಬರೂ ನಾಯಕರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು.

ಅಮೆರಿಕದಲ್ಲಿರುವ ಚೀನಾದ ರಾಯಭಾರಿ ಕ್ವಿನ್ ಗ್ಯಾಂಗ್ ಅವರು ವಾಷಿಂಗ್ಟನ್‌ನಲ್ಲಿ ನಡೆದ ಅಮೆರಿಕ-ಚೀನಾ ಸಂಬಂಧಗಳ ರಾಷ್ಟ್ರೀಯ ಸಮಿತಿಯ ಭೋಜನಕೂಟದಲ್ಲಿ ಚೀನಾ ಅಧ್ಯಕ್ಷರ ಸಂದೇಶ ಪ್ರಸ್ತುತಪಡಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಅಮೆರಿಕದೊಂದಿಗೆ ಸಹಕರಿಸಲು ಚೀನಾ ಸಿದ್ಧವಾಗಿದೆ.

ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ವದಂತಿಗಳು ಅಂತಾರಾಷ್ಟ್ರೀಯಮಟ್ಟದಲ್ಲಿ ಹರಿದಾಡಿದ್ದವು. ಆದರೆ ಇದಕ್ಕೆಲ್ಲ ಉತ್ತರ ಎಂಬಂತೆ ಕಮ್ಯೂನಿಸ್ಟ್ ಪಾರ್ಟಿ ಸಭೆಯಲ್ಲಿ ಒಂದು ತೀರ್ಮಾನ ಹೊರಗೆ ಬಂದಿದೆ.

ಗುರುವಾರ ಮಹತ್ವದ ಸಭೆ ನಡೆಸಿದೆ. ಕ್ಸಿ ಜಿನ್‌ಪಿಂಗ್ ಅವರನ್ನು ಅತ್ಯುನ್ನತ ನಾಯಕ ಎಂದು ಸರ್ವಾನುಮತದಿಂದ ತೀರ್ಮಾನ ಮಾಡಿದೆ. ಈ ಮೂಲಕ ಮುಂದಿನ ಅವಧಿಗೂ ಜಿನ್ ಪಿಂಗ್ ಅಧ್ಯಕ್ಷರಾಗುವುದು ಖಚಿತವಾಗಿದೆ.

ಕಮ್ಯೂನಿಷ್ಟ್ ಪಾರ್ಟಿ ನಿರ್ಣಯವನ್ನು ಪಾಸ್ ಮಾಡಿದೆ. ಈ ಹಿಂದೆ ಸಹ ಆಧುನಿಕ ಚೀನಾದ ನಿರ್ಮಾತೃ ಮಾವೋ ಝೆಡಾಂಗ್, ಚೀನಾ ಆರ್ಥಿಕತೆಯ ಹರಿಕಾರ ಡೆಂಗ್ ಕ್ಸಿಯಾಪಿಂಗ್ ಅವರಿಗೂ ಕಮ್ಯೂನಿಸ್ಟ್ ಪಾರ್ಟಿ ಇಂಥದ್ದೇ ಗೌರವ ನೀಡಿತ್ತು.

ಪಾಕ್ ಬತ್ತಳಿಕೆ ಸೇರಿದ ಚೀನಾದ ಅಸ್ತ್ರ: ನೂರು ವರ್ಷಗಳ ಸಾಧನೆಗೆ ಸಂಬಂಧಿಸಿ ಚೀನಾ ಕಮ್ಯುನಿಸ್ಟ್ ಪಾರ್ಟಿ (CPC)ಉನ್ನತ ಮಟ್ಟದ ಸಭೆ ನಡೆಸಿತು. ಈ ಸಭೆಯಲ್ಲಿ ಜಿನ್ ಪಿಂಗ್ ಅವರೇ ನಮ್ಮ ನಾಯಕರು ಎಂಬ ಪ್ರತಿಧ್ವನಿ ಕೇಳಿಬಂತು. ಕಮ್ಯೂನಿಸ್ಟ್ ಪಕ್ಷದ 348 ಪ್ರಮುಖ ನಾಯಕರು ಪ್ರತಿ ಐದು ವರ್ಷಗಳಿಗೊಮ್ಮೆ ತನ್ನ ಹೊಸ ನಾಯಕರನ್ನು ಆಯ್ಕೆ ಮಾಡುತ್ತಾರೆ. ಬೀಜಿಂಗ್‌ನಲ್ಲಿ ನಾಯಕರ ನಡುವೆ ಮಹತ್ವದ ಸಭೆ ನಡೆದಿತ್ತು.

ಇದು ಮೂರನೇ ಸಾರಿ; ಇದೆ ಬಗೆಯ ನಿರ್ಣಯವನ್ನು ಈ ಹಿಂದೆ ಎರಡು ಸಾರಿ ತೆಗೆದುಕೊಳ್ಳಲಾಗಿತ್ತು. 1945 ರಲ್ಲಿ ಮಾವೋ ಮತ್ತು 1981 ರಲ್ಲಿ ಡೆಂಗ್ ಅಧಿಕಾರದಲ್ಲಿ ಇದ್ದಾಗ ಪಕ್ಷ ಅವರನ್ನು ಮುಂದಿನ ಅವಧಿಗೆ ನಾಯಕರು ಎಂದು ಹೇಳಿತ್ತು.

ಎರಡು ಸಾರಿ ಅಧ್ಯಕ್ಷರಾದವರು ತಮ್ಮ ಹತ್ತು ವರ್ಷದ ಅವಧಿ ಮುಗಿಸಿದ ನಂತರ ನಿವೃತ್ತಿಯ ಕಡೆಗೆ ಹೆಜ್ಜೆ ಇಡುವ ವಾಡಿಕೆ ನಡೆದುಕೊಂಡು ಬಂದಿತ್ತು. ಆದರೆ ಇದೀಗ ಜಿನ್ ಪಿಂಗ್ ಮೂರನೇ ಅವಧಿಗೂ ಅಧ್ಯಕ್ಷರಾಗುವ ಕಾಲ ಬಂದಿದೆ. 68 ವರ್ಷದ ಜಿನ್ ಪಿಂಗ್ 2013 ರಿಂದ ಚೀನಾ ಆಡಳಿತದ ಮುಖ್ಯಸ್ಥರಾಗಿದ್ದಾರೆ.

ಶಾಶ್ವತ ಅಧ್ಯಕ್ಷ; ಇದರ ಜತೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇನ್ನು ಮುಂದೆ ಶಾಶ್ವತ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎನ್ನುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಚೀನಾದ ಗ್ರೇಟ್ ಹಾಲ್'ನಲ್ಲಿ ನಡೆದ ವಾರ್ಷಿಕ ಸಭೆ(2018 )ಯಲ್ಲಿ ಸಂವಿಧಾನ ತಿದ್ದುಪಡಿಗಾಗಿ 3000 ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಗಳು ಸಭೆ ಸೇರಿದ್ದರು.

ಇದರಲ್ಲಿ ಕ್ಸಿ ಪರವಾಗಿ 2964 ಪ್ರತಿನಿಧಿಗಳು ಮತ ಚಲಾಯಿಸಿದರೆ, ವಿರುದ್ಧವಾಗಿ ಇಬ್ಬರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು. ಮೂವರು ಮತ ಚಲಾವಣೆಯನ್ನು ನಿರಾಕರಿಸಿದ್ದರು. ಆದರೆ ಈ ಸಭೆಯ ನಂತರ ಯಾವುದೇ ಅಧಿಕೃತ ನಿರ್ಣಯ ಹೊರಗೆ ಬಂದಿರಲಿಲ್ಲ.

ಕೊರೊನಾ ಕಾಲ; ಇಡೀ ಪ್ರಪಂಚಕ್ಕೆ ಕೊರೊನಾ ಎಂಬ ಮಹಾಮಾರಿಯನ್ನು ಹರಿಯಬಿಟ್ಟ ಚೀನಾದ ಜತೆ ಅನೇಕ ದೇಶಗಳು ಸಂಬಂಧ ಮುರಿದುಕೊಂಡಿವೆ. ಒಂದು ಕಡೆ ಏಷ್ಯಾ ಖಂಡದ ಮೇಲೆ ಪ್ರಭುತ್ವ ಸಾಧಿಸಲು ಚೀನಾ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಚೀನಾ ಮತ್ತು ಅಮೆರಿಕದ ನಡುವೆ ಶೀತಲ ಸಮರ ಶುರುವಾಗಿರುವುದು ಯಾರಿಗೂ ಗೊತ್ತಿಲ್ಲದ ಸುದ್ದಿ ಏನಲ್ಲ.

ಚೀನಾದಲ್ಲಿ ಆರ್ಥಿಕ ಪರಿಸ್ಥಿತಿಯೂ ಹಳಿ ತಪ್ಪಿದ್ದು ಯುವ ಜನತೆಯ ಕೊರತೆಯೂ ಕಾಡುತ್ತಿದೆ. ಚೀನಾದಲ್ಲಿ ಎಲ್ಲವೂ ಸರಿ ಇಲ್ಲದ ಕಾಲದಲ್ಲಿ ಅಧಿಕಾರಕ್ಕೆ ಸಂಬಂಧಿಸಿ ಇಂಥದ್ದೊಂತು ತೀರ್ಮಾನ ಬಂದಿದೆ.

English summary
US President Joe Biden and his Chinese counterpart Xi Jinping will hold a virtual summit on Monday to discuss ways to "responsibly manage" the competition between the two countries, as well as ways to work together where their interests align, the White House announced on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X