ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಯೋಜನೆ: 2025ರ ವೇಳೆಗೆ 14 ಲಕ್ಷ ಉದ್ಯೋಗ ನಷ್ಟ

|
Google Oneindia Kannada News

ವಾಷಿಂಗ್ಟನ್,ಫೆಬ್ರವರಿ 09: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಪ್ರಸ್ತಾಪ ಮಾಡಿರುವ ಕನಿಷ್ಠ ವೇತನ ಯೋಜನೆಯಿಂದಾಗಿ 2025ರ ವೇಳೆಗೆ 14 ಲಕ್ಷ ಉದ್ಯೋಗ ನಷ್ಟವಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕದಲ್ಲಿ ಈಗ ಗಂಟೆಗೆ 7.25 ಡಾಲರ್ ಕನಿಷ್ಠ ವೇತನ ನಿಗದಿಯಾಗಿದೆ. ಇದನ್ನು 2025ರ ವೇಳೆಗೆ 15 ಡಾಲರ್‌ಗಳಿಗೆ ಹೆಚ್ಚಿಸುವ ಬಗ್ಗೆ ಬೈಡನ್ ಮಾತನಾಡಿದ್ದಾರೆ.

ಭಾರತ ಮೂಲದ ವಿಜಯಶಂಕರ್ ನಾಮನಿರ್ದೇಶನ ಹಿಂಪಡೆದ ಜೋ ಬೈಡನ್ಭಾರತ ಮೂಲದ ವಿಜಯಶಂಕರ್ ನಾಮನಿರ್ದೇಶನ ಹಿಂಪಡೆದ ಜೋ ಬೈಡನ್

ಅಮೆರಿಕದಲ್ಲಿ ಸುಧಾರಣೆ ಜತೆಗೆ, ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಸುಧಾರಿಸಲು ತನ್ನ ಆಡಳಿತ ಒತ್ತು ನೀಡಲಿದೆ ಎಂದು ಬೈಡನ್ ಹೇಳಿದ್ದರು. ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಜತೆಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

 Bidens Minimum Wage Plan Would Cut 1.4 Mn Jobs In 2025: Study

ಈ ವೇಳೆ, ಕೊರೊನಾ ಸೋಂಕು, ಆರ್ಥಿಕತೆ, ಹವಾಮಾನ ಬದಲಾವಣೆ ವಿಚಾರದಲ್ಲಿ ಜತೆಯಾಗಿ ಕೆಲಸ ಮಾಡುವುದು,ದ್ವಿಪಕ್ಷೀಯ ಬಾಂಧವ್ಯ ವೃದ್ಧಿ,ಏಷ್ಯಾ ಪೆಸಿಫಿಕ್ ಪ್ರದೇಶ ಹಾಗೂ ಅದರಾಚೆಗೆ ಶಾಂತಿ ಸ್ಥಾಪನೆ ಮಾಡುವ ವಿಚಾರದಲ್ಲಿ ಇಬ್ಬರೂ ನಾಯಕರು ಬದ್ಧತೆ ಪ್ರದರ್ಶಿಸಿದ್ದಾರೆ.

ಅಮೆರಿಕ ಕಾಂಗ್ರೆಸ್‌ನ ಬಜೆಟ್ ಕಚೇರಿ ಈ ವರದಿ ಸಿದ್ಧಪಡಿಸಿದ್ದು, ಬೈಡನ್ ಪ್ರಸ್ತಾವದಿಂದ ಇನ್ನೂ 27 ಲಕ್ಷ ಉದ್ಯೋಗಿಗಳ ವೇತನ ಹೆಚ್ಚಾಗಲಿದೆ, ಒಟ್ಟಾರೆ ಗಳಿಕೆಯ ಪ್ರಮಾಣ ಹೆಚ್ಚಲಿದೆ.

ಈ ಹೆಚ್ಚಳವು ಯೋಜಿತ ಉದ್ಯೋಗ ಕಡಿತದ ಮೂಲಕ ಕೆಲಸ ಕಳೆದುಕೊಂಡವರಿಗಿಂತಲೂ ಹೆಚ್ಚಿರಲಿದೆ ಎಂದು ಹೇಳಿದ್ದಾರೆ.

2025ರ ವೇಳೆಗೆ 14 ಲಕ್ಷ ಉದ್ಯೋಗ ಕಡಿತವಾಗಲಿದೆ, 9 ಲಕ್ಷ ಮಂದಿ ಬಡತನದಿಂದ ಹೊರಬರಲಿದ್ದಾರೆ ಎಂದು ಅಧ್ಯಯನವರದಿ ಹೇಳಿದೆ.

English summary
US President Joe Biden's proposed minimum wage increase would cut 1.4 million jobs but lift 900,000 people out of poverty, according to a study released Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X