ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಮೊದಲ ಕಪ್ಪು ವರ್ಣೀಯ ಮುಸ್ಲಿಂ ಮಹಿಳೆ ನೇಮಕ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 31: ಅಮೆರಿಕ ಫೆಡರಲ್ ಕೋರ್ಟ್‌ಗೆ 11 ನೂತನ ನ್ಯಾಯಮೂರ್ತಿಗಳ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಕಪ್ಪು ವರ್ಣೀಯ ಮುಸ್ಲಿಂ ಮಹಿಳೆಗೆ ಅವಕಾಶ ನೀಡಲಾಗಿದೆ.

ಜೋ ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಫೆಡರಲ್ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ನಡೆದಿದೆ.

ಮುಸ್ಲಿಮರ ಮೇಲೆ ಚೀನಾ ಕ್ರಮವನ್ನು ಹತ್ಯಾಕಾಂಡ ಎಂದು ಕರೆದ ಬೈಡನ್ಮುಸ್ಲಿಮರ ಮೇಲೆ ಚೀನಾ ಕ್ರಮವನ್ನು ಹತ್ಯಾಕಾಂಡ ಎಂದು ಕರೆದ ಬೈಡನ್

ಜೋ ಬೈಡನ್ ಸರ್ಕಾರವು ಇಂದು ಗೋಷಿಸಿರುವ 11 ಹೆಸರುಗಳ ಪೈಕಿ ಕೇವಲ ಇಬ್ಬರು ಮಾತ್ರ ಪುರುಷರಾಗಿದ್ದು, 9 ಮಂದಿ ಮಹಿಳೆಯರನ್ನೇ ಫೆಡರಲ್ ಕೋರ್ಟ್‌ಗೆ ನೇಮಿಸಿದ್ದು ವಿಶೇಷವಾಗಿದೆ.

 Biden Nominates First Muslim US Federal Judge

ಈ ಹಿಂದೆ ಟ್ರಂಪ್ ಅವಧಿಯ ನಾಲ್ಕು ವರ್ಷಗಳಲ್ಲಿ ಹೆಚ್ಚಾಗಿ ಪುರುಷರನ್ನೇ ಆಯ್ಕೆ ಮಾಡಲಾಗಿದ್ದು ಅದರಲ್ಲಿ ಎಲ್ಲರೂ ಬಿಳಿಯರೇ ಆಗಿದ್ದರು. ಆದರೆ ಇದೇ ಮೊದಲ ಬಾರಿಗೆ ಅಮೆರಿಕ ಸಾಮಾಜಿಕ ವ್ಯವಸ್ಥೆ ಎಲ್ಲರಿಗೂ ಕೋರ್ಟ್‌ನಲ್ಲೂ ಅವಕಾಶ ಮಾಡಿಕೊಡಲಾಗುವುದು ಎಂದು ಚುನಾವಣಾ ಪ್ರಚಾರದಲ್ಲಿ ಜೋ ಬೈಡನ್ ಹೇಳಿದ್ದರು.

ಈಗ ಅದರಂತೆಯೇ ಅಮೆರಿಕ ಕೋರ್ಟ್‌ಗೆ ಅಮೆರಿಕದಲ್ಲಿರುವ ವಿವಿಧ ಸಮಾಜಗಳನ್ನು ಪ್ರತಿನಿಧಿಸುವ ವ್ಯಕ್ತಿಗಳನ್ನು ಫೆಡರಲ್ ಕೋರ್ಟ್‌ಗೆ ನೇಮಿಸಲು ಬೈಡನ್ ಮುಂದಾಗಿದ್ದಾರೆ.

ಇವತ್ತಿನ ವರೆಗೆ ಅಮೆರಿಕದ ಹೈಕೋರ್ಟ್‌ನಲ್ಲೂ ಕೂಡ ಯಾವುದೇ ಕಪ್ಪು ವರ್ಣೀಯ ಮಹಿಳೆಯರು ಕೆಲಸ ಮಾಡಿಲ್ಲ. ಈಗ ಬೈಡನ್ ನಾಮನಿರ್ದೇಶನ ಮಾಡಿರುವವರಲ್ಲಿ ಇಬ್ಬರು ಆಫ್ರಿಕನ್ ಅಮೆರಿಕನ್ ಮಹಿಳೆಯರು, ಇಬ್ಬರು ಏಷ್ಯನ್ ಅಮೆರಿಕನ್ ಮಹಿಳೆಯರಿದ್ದಾರೆ.

ಇದೇ ಮೊದಲ ಫೆಡರಲ್ ಕೋರ್ಟ್‌ಗೆ ನೇಮಕಗೊಂಡಿರುವ ಮಹಿಳೆ ಜಾಹೀದ್ ಖರೇಷಿ ಆಗಿದ್ದು, ಅವರು ಪಾಕಿಸ್ತಾನ ಮೂಲದವರಾಗಿದ್ದಾರೆ. ಈ ನೇಮಕಕ್ಕೆ ಅಮೆರಿಕ ಸೆನೆಟ್‌ನಿಂದ ಅನುಮತಿಯ ಅಗತ್ಯವಿದೆ.

English summary
President Joe Biden nominated the first Muslim federal judge in the country's history to a US District Court on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X