• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೊನಾಲ್ಡ್ ಟ್ರಂಪ್ ಮನೆಗೆ.. ಜೋ ಬಿಡೆನ್ ವೈಟ್ ಹೌಸ್‌ಗೆ..?

|

ಜಿದ್ದಾಜಿದ್ದಿನ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಬಿಡೆನ್ ಗೆದ್ದುಬೀಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ವರದಿ ನೀಡಿವೆ. ಮತದಾರನ ಮನಗೆಲ್ಲಲು ಟ್ರಂಪ್-ಬಿಡೆನ್ ಕಾದಾಡುವಾಗಲೇ ಟ್ರಂಪ್ ಪಡೆಗೆ ಇದು ಶಾಕ್ ನೀಡಿದೆ. ಅಮೆರಿಕ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ನವೆಂಬರ್ 3ರಂದು ಹೈವೋಲ್ಟೇಜ್ ವೋಟಿಂಗ್ ನಡೆಯಲಿದೆ.

ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಈಗಾಗಲೇ ಕೆಲ ರಾಜ್ಯಗಳಲ್ಲಿ ಅವಧಿ ಪೂರ್ವ ಮತದಾನ ಆರಂಭವಾಗಿದ್ದು ಸುಮಾರು 5 ಮಿಲಿಯನ್ ಅಮೆರಿಕನ್ ಮತದಾರರು ವೋಟ್ ಮಾಡಿದ್ದಾರೆ. ಈ ಹೊತ್ತಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ಟ್ರಂಪ್ ಹಾಗೂ ಬಿಡೆನ್ ಭವಿಷ್ಯ ನುಡಿದಿವೆ. ಬಿಡೆನ್ ಈ ಬಾರಿ ಟ್ರಂಪ್ ವಿರುದ್ಧ ಭರ್ಜರಿ ಜಯಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಸಮೀಕ್ಷಾ ವರದಿ ಪ್ರಕಾರ 207 ಸ್ಥಾನಗಳನ್ನ ಬಿಡೆನ್ ಪಡೆಯುವುದು ಪಕ್ಕಾ ಆಗಿದ್ದರೆ, ಇನ್ನೂ 72 ಸ್ಥಾನಗಳಲ್ಲಿ ಬಿಡೆನ್ ಪರವಾಗಿ ಒಲವು ಮೂಡಿದೆ. ಹೀಗೆ ಸದ್ಯದ ಅಂಕಿ-ಅಂಶಗಳ ಪ್ರಕಾರ 279 ಸ್ಥಾನಗಳಲ್ಲಿ ಬಿಡೆನ್ ವಿಕ್ಟರಿ ಪಕ್ಕಾ ಆಗಿದೆ. ಅಮೆರಿಕ ಅಧ್ಯಕ್ಷರಾಗಲು 270 ಸ್ಥಾನಗಳ ಮ್ಯಾಜಿಕ್ ನಂಬರ್ ಬೇಕಿದೆ. ಹೀಗೆ ನೋಡುವುದಾದರೆ ಬಿಡೆನ್ ಈಗಾಗಲೇ ಜಯದ ಕಡೆಗೆ ಮುಖಮಾಡಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು.

ಟ್ರಂಪ್ ಪರ ಅಲೆ ಹೇಗಿದೆ..?

ಟ್ರಂಪ್ ಪರ ಅಲೆ ಹೇಗಿದೆ..?

ಬಿಡೆನ್‌ಗೆ ಹೋಲಿಕೆ ಮಾಡಿದರೆ ಟ್ರಂಪ್‌ಗೆ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಭಾರಿ ಹಿನ್ನಡೆ ಉಂಟಾಗಿದೆ. ಸಮೀಕ್ಷೆಗಳ ವರದಿ ಪ್ರಕಾರ 207 ಸ್ಥಾನಗಳನ್ನು ಬಿಡೆನ್ ಪಡೆಯುವುದು ಪಕ್ಕಾ ಆಗುತ್ತಿದ್ದರೆ, ಇನ್ನುಳಿದ 72 ಸ್ಥಾನಗಳಲ್ಲಿ ಬಿಡೆನ್ ಪರ ಒಲವು ಮೂಡಿದೆ. ಆದರೆ ಟ್ರಂಪ್‌ ವಿಚಾರದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದ್ದು, 83 ಸ್ಥಾನಗಳಲ್ಲಿ ಮಾತ್ರ ಟ್ರಂಪ್ ಗೆಲುವು ಗಟ್ಟಿಯಾಗಿದೆ. ಇಷ್ಟೆಲ್ಲದರ ಮಧ್ಯೆ 42 ಸ್ಥಾನಗಳಲ್ಲಿ ಟ್ರಂಪ್ ಪರವಾದ ಅಲೆ ಇರುವುದರಿಂದ ಸದ್ಯದ ಸ್ಥಿತಿಯಲ್ಲಿ ಟ್ರಂಪ್ 125 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಹೀಗೆ ಬಿಡೆನ್‌ ಮತ್ತು ಟ್ರಂಪ್ ನಡುವೆ ಅಜಗಜಾಂತರ ವ್ಯತ್ಯಾಸ ಮೂಡುತ್ತಿದೆ...

ಟ್ರಂಪ್‌ಗೆ ಸೋಲಿನ ಭೀತಿ ಕಾಡುತ್ತಿದೆಯಾ..?

ಟ್ರಂಪ್‌ಗೆ ಸೋಲಿನ ಭೀತಿ ಕಾಡುತ್ತಿದೆಯಾ..?

15 ದಿನಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣಾ ಕಣ ಕಾವೇರಿದೆ, ಟ್ರಂಪ್ ಮತ್ತು ಬಿಡೆನ್ ಗೆಲುವಿಗಾಗಿ ಕಾದಾಡುತ್ತಿದ್ದಾರೆ. ಆದರೆ ಈ ಹೊತ್ತಲ್ಲೇ ಟ್ರಂಪ್ ಸೋತರೆ ಕತೆ ಏನು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೀಗೆ ಟ್ರಂಪ್ ಸೋಲಬಹುದು ಎಂಬ ಊಹೆಗೆ ಹಲವು ಘಟನೆಗಳು ಬಲ ನೀಡುತ್ತಿವೆ. ಕೊರೊನಾ ಕಂಟಕ, ಜನಾಂಗೀಯ ಸಂಘರ್ಷ, ಇದರ ಜೊತೆಗೆ ಅಮೆರಿಕದ ಆರ್ಥಿಕತೆಯ ಅಧಃಪತನ. ಇವಿಷ್ಟೂ ಕಾರಣಗಳು ಸಾಕಾಗಿಲ್ಲ ಎಂಬಂತೆ ಟ್ರಂಪ್ ವಿರುದ್ಧ ಕೇಳಿಬಂದಿರುವ ಗಂಭೀರವಾದ ಆರೋಪಗಳು, ಕ್ರಿಮಿನಲ್ ಪ್ರಕರಣಗಳು ಮೆಲ್ಲಗೆ ಟ್ರಂಪ್‌ಗೂ ಭಯದ ವಾಸನೆ ಸೋಕಿಸುತ್ತಿವೆ. ಹೀಗಾಗಿಯೇ ಟ್ರಂಪ್, ಬಿಡೆನ್ ಗೆದ್ದರೆ ತಾನು ದೇಶ ಬಿಡಬೇಕಾದ ಸಂದರ್ಭ ಬರಬಹುದು ಎಂದಿರಬಹುದು.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಕೆಲ ದಿನಗಳ ಹಿಂದೆ ಟ್ರಂಪ್ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿ ಮಾಡಿತ್ತು. ನವೆಂಬರ್ ಚುನಾವಣೆಯಲ್ಲಿ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಗ್ಯಾರಂಟಿ ಕೊಡಲ್ಲ ಎಂದಿದ್ದ ಟ್ರಂಪ್ ವಿರುದ್ಧ ಅಮೆರಿಕದ ರಾಜಕೀಯ ನಾಯಕರು ಪಕ್ಷಾತೀತವಾಗಿ ತಿರುಗಿಬಿದ್ದಿದ್ದರು. ನೇರವಾಗಿ ಅಂಚೆ ಮತದಾನವನ್ನೇ ಟಾರ್ಗೆಟ್ ಮಾಡಿದ್ದ ಟ್ರಂಪ್ ಹೀಗೆ ಹೇಳಿಕೆ ನೀಡಿದ್ದರು. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಯಬಹುದು ಎಂದಿದ್ದ ಅವರು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನವೇ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಊಹಿಸಿದ್ದರು.

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

ಟ್ರಂಪ್ ಹೇಳುವ ಪ್ರಕಾರ ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಇಷ್ಟೆಲ್ಲದರ ನಡುವೆಯೂ ಡೆಮಾಕ್ರಟಿಕ್ ಲೀಡರ್ಸ್ ಅಂಚೆ ಮತದಾನದ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ. ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿದೆ ಎನ್ನುತ್ತಿದ್ದಾರೆ. ಆದರೆ ಟ್ರಂಪ್‌ಗೆ ಮಾತ್ರ ಅಂಚೆ ಮತದಾನ ಬಿಲ್‌ಕುಲ್ ಇಷ್ಟವಿಲ್ಲ, ಹೀಗಾಗಿ ನಾನು ಸೋತರೆ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇನೆ ಎಂಬ ಸಂದೇಶವನ್ನು ಚುನಾವಣೆಗೂ ಮೊದಲೇ ರವಾನಿಸಿದ್ದಾರೆ.

ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ?

English summary
Biden is likely to win 279 seats, according to election polls. This is a big shock to president Donald Trump & 270 seats needed to become the US president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X