ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಗೆ ಟಾಟಾ, ಬಿಡೆನ್ ಆಡಿದ್ದೇ ಆಟ: ಅಮೆರಿಕಾ ಚುನಾವಣಾ ಭವಿಷ್ಯ!

|
Google Oneindia Kannada News

ವಾಶಿಂಗ್ಟನ್, ನವೆಂಬರ್.01: ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಕಣ ರಂಗೇರಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಶ್ಚಿಮದ ಮಧ್ಯರಾಜ್ಯಗಳಾದ ವಿಸ್ಕೊಂಸಿನ್ ಮತ್ತು ಮಿಚಿಗಾನ್ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

ಉತ್ತರ ಕ್ಯಾರೋಲಿನಾ ಮತ್ತು ಅರಿಜೋನಾ ರಾಜ್ಯಗಳಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ನಡುವೆ ಕಠಿಣ ಪೈಪೋಟಿಯಿದೆ ಎಂದು ಸಿಎಎನ್ ನಡೆಸಿದ ಎಸ್ಎಸ್ಆರ್ಎಸ್ ಚುನಾವಣಾ ಸಮೀಕ್ಷೆಯು ತಿಳಿಸಿದೆ.

ಕೊರೊನಾ ಹೆಣದ ಮೇಲೆ ವೈದ್ಯರು ದುಡ್ಡು ಮಾಡ್ತಿದ್ದಾರೆ: ಟ್ರಂಪ್ ಆರೋಪಕೊರೊನಾ ಹೆಣದ ಮೇಲೆ ವೈದ್ಯರು ದುಡ್ಡು ಮಾಡ್ತಿದ್ದಾರೆ: ಟ್ರಂಪ್ ಆರೋಪ

ಕಳೆದ 2016ರಲ್ಲಿ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಈ ನಾಲ್ಕೂ ಕ್ಷೇತ್ರಗಳಲ್ಲಿ ಭರ್ಜರಿ ಬೆಂಬಲ ಪಡೆದುಕೊಂಡಿದ್ದರು. ಪ್ರಚಾರ ಮುಗಿಯುತ್ತಿದ್ದಂತೆ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕಳೆದ ಬಾರಿ ಸಿಎನ್ಎನ್ ನಡೆಸಿದ ಸಮೀಕ್ಷೆಗಳಿಗೆ ಹೋಲಿಕೆ ಮಾಡಿ ನೋಡಿದಾಗ ಕೊಂಚ ಏರಿಳಿತ ಕಂಡು ಬಂದಿದೆ. ಡೊನಾಲ್ಡ್ ಟ್ರಂಪ್ ಗೆಲುವಿನ ಹಾದಿ ಮತ್ತಷ್ಟು ಕಷ್ಟಕರವಾಗಿದೆ ಎನ್ನುವುದು ಗೊತ್ತಾಗುತ್ತದೆ.

ಮತದಾನ ಮಾಡಿದವರು ಮತ್ತು ಮತ ಹಾಕದವರ ಅಂತರ

ಮತದಾನ ಮಾಡಿದವರು ಮತ್ತು ಮತ ಹಾಕದವರ ಅಂತರ

ಈಗಾಗಲೇ ಮೇಲ್ ಮೂಲಕ ಮತದಾನ ಮಾಡಿದವರ ಅಂಕಿ-ಸಂಖ್ಯೆಗಳನ್ನು ಗಮನಿಸಿದಾಗ ಜೋ ಬಿಡೆನ್ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಆದರೆ ಮತದಾನ ಮಾಡದ ವ್ಯಕ್ತಿಗಳಿಂದ ಡೊನೊಲ್ಡ್ ಟ್ರಂಪ್ ರಿಗೆ ಹೆಚ್ಚು ಬೆಂಬಲ ಸಿಗುವ ನಿರೀಕ್ಷೆಗಳಿವೆ. ಮತದಾರರ ಬಣದ ಗಾತ್ರವನ್ನು ನೋಡಿಕೊಂಡು ಅಂತಿಮ ಫಲಿತಾಂಶವನ್ನು ಹೇಳಲಾಗುತ್ತದೆ.

ವಿಸ್ಕೊಂಸಿನ್ ಮತ್ತು ಅರಿಜೋನಾ ನಡುವಿನ ಲೆಕ್ಕಾಚಾರ

ವಿಸ್ಕೊಂಸಿನ್ ಮತ್ತು ಅರಿಜೋನಾ ನಡುವಿನ ಲೆಕ್ಕಾಚಾರ

ಅಮೆರಿಕಾದ ವಿಸ್ಕೊಂಸಿನ್ ಮತ್ತು ಅರಿಜೋನಾ ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ಸಾರ್ವಜನಿಕ ಗುಣಮಟ್ಟದ ಮತದಾನದ ಸರಿಸುಮಾರು ಅಂಕಿ-ಅಂಶಗಳನ್ನು ಒಂದು ಅಂದಾಜಿನ ಮೂಲಕ ಹೇಳಲಾಗಿದೆ. ಅರಿಜೋನಾದಲ್ಲಿ ಜೋ ಬಿಡೆನ್ ಮತ್ತು ಟ್ರಂಪ್ ನಡುವೆ ಮುಖಾಮುಖಿ ಪೈಪೋಟಿಯಿದೆ. ಬಿಡೆನ್ ಶೇ.50ರಷ್ಟು ಬೆಂಬಲ ಪಡೆದುಕೊಂಡಿದ್ದರೆ, ಟ್ರಂಪ್ 46ರಷ್ಟು ಮತದಾರರ ಬೆಂಬಲ ಪಡೆದಿದ್ದಾರೆ. ವಿಸ್ಕೊಂಸಿನ್ ನಲ್ಲಿ ಶೇ.52ರಷ್ಟು ಜನರು ಜೋ ಬಿಡೆನ್ ರನ್ನು ಬೆಂಬಲಿಸಿದ್ದು, ಇಲ್ಲಿ ಶೇ.44ರಷ್ಟು ಬೆಂಬಲ ಪಡೆದ ಟ್ರಂಪ್ ಹಿಂದೆ ಉಳಿದುಕೊಂಡಿದ್ದಾರೆ.

ಉತ್ತರ ಕ್ಯಾರೊಲಿನ್ ನಲ್ಲೂ ಹಿಂದುಳಿದ ಟ್ರಂಪ್

ಉತ್ತರ ಕ್ಯಾರೊಲಿನ್ ನಲ್ಲೂ ಹಿಂದುಳಿದ ಟ್ರಂಪ್

ಉತ್ತರ ಕ್ಯಾರೊಲಿನ್ ನಲ್ಲಿ ಜೋ ಬಿಡೆನ್ ಅವರು ಡೊನಾಲ್ಡ್ ಟ್ರಂಪ್ ಗಿಂತ ಮುಂದಿದ್ದಾರೆ. ಜೋ ಬಿಡೆನ್ ರಿಗೆ ಶೇ.51ರಷ್ಟು ಬೆಂಬಲ ವ್ಯಕ್ತವಾಗಿದ್ದರೆ, ಟ್ರಂಪ್ ರಿಗೆ ಶೇ.45ರಷ್ಟು ಬೆಂಬಲ ವ್ಯಕ್ತವಾಗಿದೆ. ಉತ್ತರ ಕ್ಯಾರೊಲಿನ್ ನಲ್ಲಿ ನಡೆದ ಸಾರ್ವಜನಿಕ ಮತದಾನದ ಸರಾಸರಿಯು ಹೊಸ ಮತದಾನಕ್ಕೂ ಹೋಲಿಸಿ ನೋಡಿದ್ದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಠಿಣ ಪೈಪೋಟಿ ಇರುವುದು ಗೊತ್ತಾಗುತ್ತದೆ. ಆದರೂ ಈ ವಾರ ಕ್ಯಾರೊಲಿನ್ ನಲ್ಲಿ ನಡೆದ ಎನ್‌ಬಿಸಿ ನ್ಯೂಸ್ / ಮಾರಿಸ್ಟ್ ಕಾಲೇಜ್ ಸಮೀಕ್ಷೆಯಲ್ಲಿ ಬಿಡೆನ್ ಕೊಂಚ ಮುಂದಿರುವ ಲಕ್ಷಣಗಳು ಕಂಡು ಬಂದಿವೆ. ಅಮೆರಿಕಾದ ಮಿಚಿಗಾನ್ ನಲ್ಲಿ ಫಲಿತಾಂಶ ಮತ್ತು ಸಾರ್ವಜನಿಕ ಮತದಾನದ ಒಟ್ಟು ಅಂಕಿ-ಅಂಶಗಳನ್ನು ನೋಡಿದಾಗ ಡೊನೊಲ್ಡ್ ಟ್ರಂಪ್ ರಿಗೆ ಶಾಕ್ ಕಾದಿರುವಂತೆ ತೋರುತ್ತಿದೆ. ಏಕೆಂದರೆ ಜೋ ಬಿಡೆನ್ ಶೇ.53ರಷ್ಟು ಮುಂದಿದ್ದರೆ, ಟ್ರಂಪ್ ಶೇ.41ರಷ್ಟು ಬೆಂಬಲ ಪಡೆದು ಹಿಂದೆ ಉಳಿದುಕೊಂಡಿದ್ದಾರೆ.

ಜೋ ಬಿಡೆನ್ ರಿಗೆ ಬಿಳಿವರ್ಣೀಯರ ಬೆಂಬಲ

ಜೋ ಬಿಡೆನ್ ರಿಗೆ ಬಿಳಿವರ್ಣೀಯರ ಬೆಂಬಲ

ಅರಿಜೋನಾ ಮತ್ತು ಕ್ಯಾರೊಲಿನ್ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ಮಿಚಿಗಾನ್ ಮತ್ತು ವಿಸ್ಕೊಂಸಿನ್ ನಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಬಿಳಿವರ್ಣೀಯರೇ ಬಹುಸಂಖ್ಯಾತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೋ ಬಿಡೆನ್ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಿಚಿಗಾನ್ ಮತ್ತು ವಿಸ್ಕೊಂಸಿನ್ ನಲ್ಲಿ ಶೇ.61ರಷ್ಟು ಪದವೀಧರರಾದ ಬಿಳಿ ವರ್ಣೀಯರು ಜೋ ಬಿಡೆನ್ ರಿಗೆ ಬೆಂಬಲ ನೀಡುತ್ತಿದ್ದಾರೆ. ಅರಿಜೋನಾದಲ್ಲಿ ಶೇ.50ರಷ್ಟು ಮತ್ತು ಉತ್ತರ ಕ್ಯಾರೊಲಿನ್ ನಲ್ಲಿ ಶೇ.51ರಷ್ಟು ಬಿಳಿ ವರ್ಣೀಯರು ಬಿಡೆನ್ ರಿಗೆ ಬೆಂಬಲಿಸುತ್ತಿದ್ದಾರೆ. ಪದವೀಧರರು ಅಲ್ಲದ ಬಿಳಿ ವರ್ಣೀಯರಲ್ಲಿ ಬಹುಪಾಲು ಜನರು ಡೊನಾಲ್ಡ್ ಟ್ರಂಪ್ ಪರವಾಗಿದ್ದಾರೆ. ಉತ್ತರ ಕ್ಯಾರೊಲಿನ್ ನಲ್ಲಿ ಪದವೀಧರರಲ್ಲದೇ ಶೇ.64ರಷ್ಟು ಬಿಳಿ ವರ್ಣೀಯರು ಡೊನೊಲ್ಡ್ ಟ್ರಂಪ್ ರಿಗೆ ಬೆಂಬಲಿಸಿದ್ದಾರೆ.

ಜೋ ಬಿಡೆನ್ ರಿಗೆ ಶೇ.55ರಷ್ಟು ಮಹಿಳೆಯರ ಬೆಂಬಲ

ಜೋ ಬಿಡೆನ್ ರಿಗೆ ಶೇ.55ರಷ್ಟು ಮಹಿಳೆಯರ ಬೆಂಬಲ

ನಾಲ್ಕೂ ರಾಜ್ಯಗಳಲ್ಲಿ ಮಹಿಳೆಯರು ಮತ್ತು ಪುರುಷರ ಮತದಾನದ ಬಗ್ಗೆ ಲೆಕ್ಕಾಚಾರ ಹಾಕಲಾಗಿದೆ. ಎಲ್ಲಾ ರಾಜ್ಯಗಳಲ್ಲಿ ಶೇ.55ರಷ್ಟು ಮಹಿಳೆಯರು ಜೋ ಬಿಡೆನ್ ರನ್ನು ಬೆಂಬಲಿಸಿದ್ದಾರೆ. ಉತ್ತರ ಕ್ಯಾರೊಲಿನ್ ಮತ್ತು ಅರಿಜೋನಾ ರಾಜ್ಯಗಳಲ್ಲಿ ಪುರುಷರು ಟ್ರಂಪ್ ರಿಗೆ ಬೆಂಬಲ ನೀಡುವುದನ್ನು ಬಿಟ್ಟಿದ್ದಾರೆ. ಉಳಿದಂತೆ ಮಿಚಿಗಾನ್ ಮತ್ತು ವಿಸ್ಕೊಂಸಿನ್ ನಲ್ಲಿ ಬಿಡೆನ್ ಮತ್ತು ಟ್ರಂಪ್ ನಡುವೆ ಪುರುಷರ ಮತಗಳು ಸಮನಾಗಿ ಹಂಚಿಕೆ ಆಗಿವೆ ಎಂದು ತಿಳಿದು ಬಂದಿದೆ.

ಚುನಾವಣೆಯಲ್ಲಿ ಕೊರೊನಾವೈರಸ್ ಮತ್ತು ಆರ್ಥಿಕತೆ ಚರ್ಚೆ

ಚುನಾವಣೆಯಲ್ಲಿ ಕೊರೊನಾವೈರಸ್ ಮತ್ತು ಆರ್ಥಿಕತೆ ಚರ್ಚೆ

2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಆರ್ಥಿಕತೆ ಮತ್ತು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಎಂಬ ಎರಡು ಅಂಶಗಳು ಮುಖ್ಯವಾಗಿ ಚರ್ಚೆ ಆಗುತ್ತಿವೆ. ದೇಶದ ಆರ್ಥಿಕತೆ ಮತ್ತು ಕೊರೊನಾವೈರಸ್ ನಿರ್ವಹಣೆಯಲ್ಲಿ ಯಾರು ಸಮರ್ಥರು ಎನ್ನುವುದರ ಬಗ್ಗೆ ಮತದಾರರು ಕೂಡಾ ಗೊಂದಲಕ್ಕೀಡಾಗಿದ್ದಾರೆ. ನಾಲ್ಕೂ ರಾಜ್ಯಗಳಲ್ಲಿ ಈ ಅಂಶಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಅರಿಜೋನಾ ಮತ್ತು ಉತ್ತರ ಕ್ಯಾರೊಲಿನ್ ಜನರು ಆರ್ಥಿಕತೆಯನ್ನು ಟ್ರಂಪ್ ಕೈಯಲ್ಲಿರಿಸಲು ಬಯಸುತ್ತಾರೆ.

ಆರ್ಥಿಕತೆ ನಿರ್ವಹಿಸುವಲ್ಲಿ ಟ್ರಂಪ್ ಬೆಸ್ಟ್:

ರಾಜ್ಯ - ಡೊನಾಲ್ಡ್ ಟ್ರಂಪ್ - ಬಿಡೆನ್

ಅರಿಜೋನಾ - ಶೇ.54 - ಶೇ.43

ಉತ್ತರ ಕ್ಯಾರೊಲಿನ್ - ಶೇ.51 - ಶೇ.46

ಮಿಚಿಗಾನ್ - ಶೇ.49 - ಶೇ.48

ವಿಸ್ಕೊಂಸಿನ್ - ಶೇ.49 - ಶೇ.48

ಬಿಡೆನ್ ಮತ್ತು ಟ್ರಂಪ್ ನಡುವೆ ಪರ-ವಿರೋಧ ಮತ

ಬಿಡೆನ್ ಮತ್ತು ಟ್ರಂಪ್ ನಡುವೆ ಪರ-ವಿರೋಧ ಮತ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕವಾಗಿ ಎಲ್ಲ ನಾಲ್ಕೂ ರಾಜ್ಯಗಳಲ್ಲಿರುವ ಬಹುತೇಕ ಬೆಂಬಲಿಗರು ಟ್ರಂಪ್ ಪರವಾಗಿ ಮತ್ತು ಜೋ ಬಿಡೆನ್ ವಿರುದ್ಧವಾಗಿ ಮತದಾನ ಮಾಡಿದ್ದಾರೆ. 10ರಲ್ಲಿ 7 ಜನ ಟ್ರಂಪ್ ಬೆಂಬಲಿಗರು ಎಲ್ಲ ಪ್ರಕ್ರಿಯೆಗಳಲ್ಲೂ ಟ್ರಂಪ್ ಪರ ಮತ್ತು ಬಿಡೆನ್ ವಿರುದ್ಧ ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಸ್ಕೊಂಸಿನ್ ನಲ್ಲಿ 79, ಅರಿಜೋನಾ ಮತ್ತು ಮಿಚಿಗಾನ್ ನಲ್ಲಿ ಶೇ.77 ಹಾಗೂ ಉತ್ತರ ಕ್ಯಾರೊಲಿನ್ ನಲ್ಲಿ ಶೇ.71ರಷ್ಟು ಬೆಂಬಲಿಗರು ಟ್ರಂಪ್ ಪರವಾಗಿ ಮತ ಚಲಾಯಿಸಿದ್ದಾರೆ. ಜೋ ಬಿಡೆನ್ ಬೆಂಬಲಿಗರು ಕೂಡಾ ಟ್ರಂಪ್ ವಿರುದ್ಧವಾಗಿ ಬಿಡೆನ್ ಪರವಾಗಿ ಮತ ಚಲಾಯಿಸಿದ್ದಾರೆ. ಯಾವ ರಾಜ್ಯಗಳಲ್ಲಿ ಯಾರಿಗೆಷ್ಟು ಬೆಂಬಲ ನೀಡಿದ್ದಾರೆ ಎನ್ನುವುದರ ಕುರಿತು ಒಂದು ಪಟ್ಟಿ ಇಲ್ಲಿದೆ ನೋಡಿ.

ಬಿಡೆನ್ ಬೆಂಬಲಿಗರ ಮತದಾನದ ಪ್ರಮಾಣ:

ರಾಜ್ಯ - ಡೊನಾಲ್ಡ್ ಟ್ರಂಪ್ - ಬಿಡೆನ್

ವಿಸ್ಕೊಂಸಿನ್ - ಶೇ.43 - ಶೇ.52

ಅರಿಜೋನಾ - ಶೇ.48 - ಶೇ.45

ಮಿಚಿಗಾನ್ - ಶೇ.43 - ಶೇ.47

ಉತ್ತರ ಕ್ಯಾರೊಲಿನ್ - ಶೇ.43 - ಶೇ.45

ಟ್ರಂಪ್ ಗಿಂತ ಬಿಡೆನ್ ಪರವಾಗಿ ಹೆಚ್ಚಿನ ಒಲವು

ಟ್ರಂಪ್ ಗಿಂತ ಬಿಡೆನ್ ಪರವಾಗಿ ಹೆಚ್ಚಿನ ಒಲವು

ಅಮೆರಿಕಾದ ಈ ನಾಲ್ಕು ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆ ಸಂದರ್ಭದಲ್ಲಿ ಬಹುತೇಕ ಜನರು ಟ್ರಂಪ್ ಗಿಂತ ಬಿಡೆನ್ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಸಮಸ್ಯೆಯನ್ನು ಟ್ರಂಪ್ ಗಿಂತ ಬಿಡೆನ್ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಿಚಿಗಾನ್, ಉತ್ತರ ಕ್ಯಾರೊಲಿನ್ ಮತ್ತು ವಿಸ್ಕೊಂಸಿನ್ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರಿಜೋನಾ ಜನರು ಈ ವಿಚಾರದಲ್ಲಿ ಗೊಂದಲಕ್ಕೆ ಈಡಾಗಿದ್ದಾರೆ. ಅಮೆರಿಕಾದ ಪ್ರಜೆಗಳನ್ನು ಅಪಾಯದಿಂದ ಕಾಪಾಡುವ ಮತ್ತು ಸುರಕ್ಷಿತವಾಗಿರಿಸುವ ಸಾಮರ್ಥ್ಯ ಹಾಗೂ ತಂತ್ರಗಾರಿಕೆ ಯಾರಲ್ಲಿ ಹೆಚ್ಚಾಗಿದೆ ಎನ್ನುವ ಪ್ರಶ್ನೆಗೂ ನಾಲ್ಕು ರಾಜ್ಯಗಳಲ್ಲಿ ಜನರಿಗೆ ಸ್ಪಷ್ಟವಾದ ಒಂದು ತೀರ್ಮಾನವಿಲ್ಲ. ಆರ್ಧದಷ್ಟು ಜನರು ಬಿಡೆನ್ ಹೆಸರು ಸೂಚಿಸಿದರೆ, ಇನ್ನು ಅರ್ಧದಷ್ಟು ಜನರು ಟ್ರಂಪ್ ಹೆಸರನ್ನು ಹೇಳುತ್ತಿದ್ದಾರೆ.

ಸಿಎನ್ಎನ್ ಸಮೀಕ್ಷಾ ವಿಧಾನ ಮತ್ತು ಮಾದರಿ?

ಸಿಎನ್ಎನ್ ಸಮೀಕ್ಷಾ ವಿಧಾನ ಮತ್ತು ಮಾದರಿ?

ಅಮೆರಿಕಾದ ಅರಿಜೋನಾ, ಮಿಚಿಗಾನ್, ಉತ್ತರ ಕ್ಯಾರೊಲಿನ್ ಮತ್ತು ವಿಸ್ಕೊಂಸಿನ್ ರಾಜ್ಯಗಳಲ್ಲಿ ಸಿಎನ್ಎನ್ ಸಮೀಕ್ಷೆ ನಡೆಸಲಾಗಿತ್ತು. ಅಕ್ಟೋಬರ್.23ರಿಂದ ಅಕ್ಟೋಬರ್.30ರವರೆಗೆ ಫೋನ್ ಮೂಲಕ ಸಮೀಕ್ಷೆ ಕಾರ್ಯವನ್ನು ನಡೆಸಲಾಗಿತ್ತು. ಪ್ರತಿಯೊಂದು ರಾಜ್ಯಗಳಲ್ಲಿ 1000 ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಪೈಕಿ ಅರಿಜೋನಾದ 865 ಮಂದಿ, ಮಿಚಿಗಾನ್ 907 ಜನ, ಉತ್ತರ ಕ್ಯಾರೊಲಿನ್ 901 ಹಾಗೂ ವಿಸ್ಕೊಂಸಿನ್ 873 ಜನರನ್ನು ಸಮೀಕ್ಷೆಯಲ್ಲಿ ಪ್ರಶ್ನೆ ಮಾಡಲಾಗಿತ್ತು.

English summary
Biden Leads In Michigan And Wisconsin, Tight Fight Between Two Candidates In Arizona And North Carolina: CNN Polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X