ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

|
Google Oneindia Kannada News

2ನೇ ಬಾರಿಗೆ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪದೇ ಪದೇ ನಿರಾಸೆ ಎದುರಾಗುತ್ತಿದೆ. ಒಂದಾದ ನಂತರ ಒಂದು ಸಮೀಕ್ಷೆಗಳು ಟ್ರಂಪ್ ಈ ಬಾರಿ ಸೋಲಲಿದ್ದಾರೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ. ಇದೀಗ ವಾಷಿಂಗ್ಟನ್ ಪೋಸ್ಟ್ ಹಾಗೂ ಎಬಿಸಿ ನ್ಯೂಸ್‌ನ ಸಮೀಕ್ಷೆ ಕೂಡ ಟ್ರಂಪ್ ಸೋಲನ್ನೇ ಪ್ರತಿಪಾದಿಸಿದೆ.

Recommended Video

ISIS ಉಗ್ರರಿಗೆ ಸಹಾಯ ಮಾಡುತ್ತಿದ್ದ ಬೆಂಗಳೂರು ಮೂಲದ Abdur Rahman ಭಂದನ | Oneindia Kannada

ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಜೋಡಿ, ಹಾಲಿ ಅಧ್ಯಕ್ಷ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್‌ಗಿಂತ ಜನಪ್ರಿಯತೆಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆಂದು ಸಮೀಕ್ಷೆ ತಿಳಿಸಿದೆ. ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶ ಆರಂಭವಾದ ಹಿನ್ನೆಲೆ ನೋಂದಾಯಿತ ಮತದಾರರಲ್ಲಿ ಬಿಡೆನ್ ಮತ್ತು ಕಮಲಾ ಜೋಡಿ ಶೇಕಡ 53 ಮತ ಪಡೆದರೆ, ಟ್ರಂಪ್ ಮತ್ತು ಪೆನ್ಸ್ ಜೋಡಿ ಶೇಕಡ 41 ವೋಟ್ ಪಡೆದಿದೆ.

 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..? ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

ಇದು ಟ್ರಂಪ್ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿರುವ ಮುನ್ಸೂಚನೆ ನೀಡಿದೆ. ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸೋಲಿನ ಸುಳಿವನ್ನೂ ನೀಡುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಟ್ರಂಪ್ ಅವರನ್ನ ಮತ್ತಷ್ಟು ಕೆರಳಿ ಕೆಂಡವಾಗುವಂತೆ ಮಾಡಿದೆ.

ಆಫ್ರಿಕನ್-ಅಮೆರಿಕನ್ ವೋಟ್ಸ್ ಬಿಡೆನ್ ಪರ..!

ಆಫ್ರಿಕನ್-ಅಮೆರಿಕನ್ ವೋಟ್ಸ್ ಬಿಡೆನ್ ಪರ..!

ಅಮೆರಿದಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್ ಅವರಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡುತ್ತಿದೆ. ಸದ್ಯದ ಸಮೀಕ್ಷೆ ಪ್ರಕಾರ ಪ್ರತಿ 10 ಆಫ್ರಿಕನ್ ಅಮೆರಿಕನ್ ಮತದಾರರಲ್ಲಿ ಕನಿಷ್ಠ 8 ಮಂದಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಬೆಂಬಲ ಸೂಚಿಸಿದ್ದಾರೆ. ಇದು ಈ ಬಾರಿ ಆಫ್ರಿಕನ್ ಅಮೆರಿಕನ್ ವೋಟ್‌ಗಳನ್ನು ಡೆಮ್ರಾಕ್ರಟಿಕ್ ಪಕ್ಷ ಕೊಳ್ಳೆ ಹೊಡೆಯುವ ಮುನ್ಸೂಚನೆಯನ್ನು ನೀಡಿದೆ.

ಟ್ರಂಪ್‌ಗೆ ಪದೇ ಪದೆ ಹಿನ್ನಡೆ..!

ಟ್ರಂಪ್‌ಗೆ ಪದೇ ಪದೆ ಹಿನ್ನಡೆ..!

ಅಷ್ಟಕ್ಕೂ ಟ್ರಂಪ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ನಡೆದಿದ್ದ ಬೃಹತ್ ಸಮೀಕ್ಷೆಯೊಂದರಲ್ಲೂ ಟ್ರಂಪ್ ಇದೇ ರೀತಿ ಬಿಡೆನ್ ಎದುರು ಸೋತಿದ್ದರು. ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅರಿಜೋನಾ, ಫ್ಲೋರಿಡಾ ಹಾಗೂ ಮಿಚಿಗನ್‌ ರಾಜ್ಯಗಳಲ್ಲಿ ಅಧ್ಯಕ್ಷ ಟ್ರಂಪ್ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮತದಾರರ ಪೈಕಿ ಫ್ಲೋರಿಡಾ ರಾಜ್ಯದಲ್ಲಿ ಬಿಡೆನ್‌ಗೆ 51% ಜನಬೆಂಬಲ ಸಿಕ್ಕಿದ್ದರೆ, ಟ್ರಂಪ್‌ಗೆ 46% ಸಪೋರ್ಟ್ ಸಿಕ್ಕಿದೆ. ಅರಿಜೋನಾ ಸ್ಟೇಟ್‌ನಲ್ಲಿ ಬಿಡೆನ್ ಪರ 49% ಸಪೋರ್ಟ್ ಇದ್ದರೆ, ಟ್ರಂಪ್‌ಗೆ 45%ರಷ್ಟು ಜನಬೆಂಬಲ ಬಂದಿದೆ. ಇನ್ನು ಮಿಚಿಗನ್‌ ರಾಜ್ಯದಲ್ಲೂ ಬಿಡೆನ್ ಮುಂದಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 52% ದಷ್ಟು ಮತದಾರರ ಒಲವು ಗಳಿಸಿದ್ದರು. ಈಗ ಮತ್ತೊಮ್ಮೆ ಸಮೀಕ್ಷೆಗಳು ಟ್ರಂಪ್‌ಗೆ ಉಲ್ಟಾ ಹೊಡೆದಿವೆ. ಇದು ಹಾಲಿ ಅಧ್ಯಕ್ಷರನ್ನ ಕಂಗಾಲಾಗಿಸಿದೆ.

ಭಾರತೀಯರ ಮತ ಸೆಳೆಯಲು ಟ್ರಂಪ್ ಮಾಸ್ಟರ್ ಪ್ಲ್ಯಾನ್..!ಭಾರತೀಯರ ಮತ ಸೆಳೆಯಲು ಟ್ರಂಪ್ ಮಾಸ್ಟರ್ ಪ್ಲ್ಯಾನ್..!

ಕಮಲಾ ಆಯ್ಕೆ ದೊಡ್ಡ ತಿರುವು

ಕಮಲಾ ಆಯ್ಕೆ ದೊಡ್ಡ ತಿರುವು

ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರ ಆಯ್ಕೆ ದೊಡ್ಡ ತಿರುವು ಕೊಟ್ಟಿದೆ. ಏಕೆಂದರೆ ಕಮಲಾ ಅವರಿಗೆ ಭಾರತೀಯರು ಸೇರಿದಂತೆ ಆಫ್ರಿಕನ್-ಅಮೆರಿಕನ್ ಮತದಾರರು ಕೂಡ ಬೆಂಬಲ ಸೂಚಿಸುತ್ತಿದ್ದಾರೆ. ಈಗಾಗಲೇ ಕಮಲಾ ಹ್ಯಾರಿಸ್ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿರುವ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಆಯ್ಕೆಯಿಂದ ವಿಚಲಿತರಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಏಕೆಂದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಭಾರತೀಯ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಭಾರತೀಯರ ಮತಗಳನ್ನು ಪಡೆಯುವಲ್ಲಿ ಕಮಲಾ ಯಶಸ್ವಿಯಾದರೆ ಅದು ಟ್ರಂಪ್ ಸೋಲಿಗೆ ಮುನ್ನುಡಿ ಬರೆಯಲಿದೆ. ಈಗ ಇದೇ ಆಗುತ್ತಿದೆ. ದಿನೇ ದಿನೆ ಅಮೆರಿಕನ್ನರ ವಿಶ್ವಾಸ ಗಳಿಸುತ್ತಿರುವ ಕಮಲಾ ಹ್ಯಾರಿಸ್, ಭಾರತೀಯರ ಮಗಳನ್ನು ಡೆಮಾಕ್ರಟಿಕ್ ಪಕ್ಷದ ಪರವಾಗಿ ಒಗ್ಗೂಡಿಸುತ್ತಿದ್ದಾರೆ.

ಟ್ರಂಪ್‌ಗೆ ‘ಕೊರೊನಾ’ ಏಟು..?

ಟ್ರಂಪ್‌ಗೆ ‘ಕೊರೊನಾ’ ಏಟು..?

ಕಮಲಾ ಅವರ ರೀತಿಯಲ್ಲೇ ಅಧ್ಯಕ್ಷೀಯ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬಿಡೆನ್ ಕೂಡ ಭಾರಿ ಸಪೋರ್ಟ್ ಗಿಟ್ಟಿಸಿದ್ದಾರೆ. ಬಿಡೆನ್ ಈ ಹಿಂದೆ ಒಬಾಮಾ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಹೀಗಾಗಿ ಟ್ರಂಪ್‌ರ ತಪ್ಪುಗಳನ್ನು ಜನರ ಮುಂದೆ ಬಿಚ್ಚಿಡುವಲ್ಲಿ ಬಿಡೆನ್ ಯಶಸ್ವಿಯಾಗುತ್ತಿದ್ದಾರೆ. ಅದರಲ್ಲೂ ಕೊರೊನಾ ನಿಯಂತ್ರಿಸುವಲ್ಲಿ ಟ್ರಂಪ್ ಎಡವುತ್ತಿರುವುದನ್ನೂ ಬಿಡೆನ್ ಅಮೆರಿಕನ್ನರಿಗೆ ಮನದಟ್ಟು ಮಾಡುತ್ತಿದ್ದಾರೆ. ಈಗಾಗಲೇ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 2 ಲಕ್ಷದತ್ತ ದಾಪುಗಾಲು ಇಡುತ್ತಿದೆ. 50 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರಿಗೆ ಸೋಂಕು ವಕ್ಕರಿಸಿದೆ. ಇದು ಸಹಜವಾಗಿಯೇ ಟ್ರಂಪ್ ವಿರುದ್ಧ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಹೀಗಾಗಿ ಸಮೀಕ್ಷೆಗಳಲ್ಲಿ ಟ್ರಂಪ್ ಭಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ.

ಜನಾಂಗೀಯ ಸಂಘರ್ಷವೂ ಮುಳುವಾಗುತ್ತಾ..?

ಜನಾಂಗೀಯ ಸಂಘರ್ಷವೂ ಮುಳುವಾಗುತ್ತಾ..?

ತಣ್ಣಗಿದ್ದ ಅಮೆರಿಕದಲ್ಲಿ ಜನಾಂಗೀಯ ಸಂಘರ್ಷದ ಬಿರುಗಾಳಿ ಎಬ್ಬಿಸಿದ್ದು ಜಾರ್ಜ್ ಫ್ಲಾಯ್ಡ್ ಹತ್ಯೆ. ಮೇ ತಿಂಗಳಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯನ್ನ ಹತ್ಯೆಗೈದಿದ್ದ. ಹೀಗೆ ಆಫ್ರಿಕಾ ಮೂಲದ ಅಮೆರಿಕನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಇಡೀ ಅಮೆರಿಕದಲ್ಲಿ ಬೆಂಕಿ ಹೊತ್ತಿಸಿತ್ತು. ವರ್ಣಬೇಧ ನೀತಿ ವಿರೋಧಿಸಿ ಕರಿಯರು, ಬಿಳಿಯರು ಒಟ್ಟಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಡಿಬರಹದಲ್ಲಿ ಈ ಹೋರಾಟ ಇನ್ನೂ ನಡೆಯುತ್ತಿದೆ. ಇದು ಅಮೆರಿಕದ ಇತಿಹಾಸದಲ್ಲೇ ಬಹುದೊಡ್ಡ ಹೋರಾಟವಾಗಿದೆ. ಆದರೆ ಪರಿಸ್ಥಿತಿ ನಿಯಂತ್ರಿಸಬೇಕಿದ್ದ ಟ್ರಂಪ್ ಜನಾಂಗೀಯ ಜಗಳ ನಡೆಯುವ ಸಮಯದಲ್ಲೇ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ಪ್ರತಿಭಟನಾಕಾರರು ಮತ್ತಷ್ಟು ರೊಚ್ಚಿಗೇಳುವಂತೆ ಹೇಳಿಕೆಗಳನ್ನ ನೀಡಿದ್ದರು. ಇದು ಕೂಡ ಚುನಾವಣೆಯಲ್ಲಿ ಟ್ರಂಪ್‌ಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ದಟ್ಟವಾಗಿದೆ.

ನಿರುದ್ಯೋಗದ ಕೂಪದಲ್ಲಿ ಅಮೆರಿಕನ್ನರು

ನಿರುದ್ಯೋಗದ ಕೂಪದಲ್ಲಿ ಅಮೆರಿಕನ್ನರು

ನಿರುದ್ಯೋಗ ಕೇವಲ ಬಡ ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ಶ್ರೀಮಂತ ರಾಷ್ಟ್ರ ಅಮೆರಿಕದಲ್ಲೂ ಉದ್ಯೋಗ ಸಿಗದೆ ಕೋಟ್ಯಂತರ ಜನರು ಪರದಾಡುತ್ತಿದ್ದಾರೆ. ಇದನ್ನು ಟ್ರಂಪ್ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂಬ ಆರೋಪಗಳಿವೆ. ಕೊರೊನಾ ಅಪ್ಪಳಿಸುವುದಕ್ಕೂ ಮೊದಲೇ ಅಮೆರಿಕದಲ್ಲಿ ನಿರುದ್ಯೋಗ ತಾಂಡವವಾಡುತ್ತಿತ್ತು. ಇನ್ನು ಕೊರೊನಾ ವಕ್ಕರಿಸಿದ ನಂತರ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ, ಕೋಟ್ಯಂತರ ಜನ ಉದ್ಯೋಗ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಇದೆಲ್ಲಾ ಅಮೆರಿಕದ ನಾಗರಿಕರನ್ನ ರೊಚ್ಚಿಗೆಬ್ಬಿಸಿದೆ. ಆದರೂ ಟ್ರಂಪ್ ಸಾಕಷ್ಟು ಜನಬೆಂಬಲ ಹೊಂದಿದ್ದಾರೆ. ಕಡೇ ಕ್ಷಣದಲ್ಲಿ ಮತದಾರರು ಟ್ರಂಪ್ ಪರ ವಾಲಿದರೂ ಅಚ್ಚರಿ ಇಲ್ಲ. ಹೀಗಾಗಿ ಎಲ್ಲಾ ಕುತೂಹಲಗಳಿಗೆ ಉತ್ತರ ಪಡೆಯಲು ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆವರೆಗೂ ಕಾಯಲೇಬೇಕು.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ವಾಷಿಂಗ್ಟನ್ ಪೋಸ್ಟ್ - ಎಬಿಸಿ ಸಮೀಕ್ಷಾ ಫಲಿತಾಂಶಅಮೆರಿಕ ಅಧ್ಯಕ್ಷೀಯ ಚುನಾವಣೆ: ವಾಷಿಂಗ್ಟನ್ ಪೋಸ್ಟ್ - ಎಬಿಸಿ ಸಮೀಕ್ಷಾ ಫಲಿತಾಂಶ

English summary
Once Again Huge disgrace to Trump. Post-ABC poll shows Biden, Harris hold double-digit lead over Trump and Pence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X