• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಗಾಳಿ ಹೊಲಸು ಎಂದ ಟ್ರಂಪ್‌ಗೆ ಭಾರತೀಯರಿಂದ ತಕ್ಕ ಪಾಠ..?

|

ನಿಮಗೆ ಸ್ನೇಹಿತರ ಜೊತೆ ಹೇಗೆ ಇರಬೇಕು ಎಂಬುದು ಕೂಡ ಗೊತ್ತಿಲ್ಲವಾ ಎಂದು ಡೊನಾಲ್ಡ್ ಟ್ರಂಪ್ ಬಗ್ಗೆ ಜೋ ಬಿಡೆನ್ ಆಕ್ರೋಶ ಹೊರಹಾಕಿದ್ದಾರೆ. ಭಾರತದ ಬಗ್ಗೆ ಅಸಹನೀಯ ಪದ ಬಳಕೆ ಮಾಡಿದ ಟ್ರಂಪ್‌ಗೆ ಈ ಮೂಲಕ ಜೋ ಬಿಡೆನ್ ತಿರುಗೇಟು ನೀಡಿದ್ದು, ಸ್ನೇಹಿತರ ಜೊತೆ ವರ್ತಿಸುವುದನ್ನ ಕಲಿಯಿರಿ ಎಂದಿದ್ದಾರೆ. ಭಾರತದ ಗಾಳಿ ಹೊಲಸಾಗಿದೆ, ಭಾರತ, ರಷ್ಯಾ ತನ್ನ ದೇಶದ ಗಾಳಿ ಬಗ್ಗೆ ಕೇರ್ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಭಾರತ ಹಾಗೂ ರಷ್ಯಾದಲ್ಲಿ ಗಾಳಿ ಹೊಲಸೆದ್ದಿದೆ ಎಂದಿದ್ದ ಟ್ರಂಪ್‌ಗೆ ನಡುಕ ಶುರುವಾಗಿದೆ.

ಅಕ್ಟೋಬರ್ 22ರ ಗುರುವಾರದಂದು ನಡೆದಿದ್ದ ಅಮೆರಿಕ ಎಲೆಕ್ಷನ್ ಡಿಬೆಟ್ ವೇಳೆ ಟ್ರಂಪ್ ಇಂತಹ ಅಸಹನೀಯ ಪದಗಳನ್ನು ಬಳಕೆ ಮಾಡಿದ್ದರು. ಇದು ಭಾರತ, ರಷ್ಯಾ, ಚೀನಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿತ್ತು. ಆದರೆ ಅಧಿಕೃತವಾಗಿ ಯಾವುದೇ ದೇಶ ತಮ್ಮ ಆಕ್ರೋಶ ಹೊರಹಾಕದಿದ್ದರೂ, ಪ್ರಜೆಗಳು ತಮ್ಮ ತಮ್ಮ ದೇಶಗಳ ಬಗ್ಗೆ ಅಮೆರಿಕ ಅಧ್ಯಕ್ಷರು ಆಡಿದ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಜೋ ಬಿಡೆನ್ ಸರದಿ. ಡಿಬೆಟ್ ನಡೆದು 2 ದಿನಗಳ ನಂತರ ಬಿಡೆನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತದ ಬಗ್ಗೆ ಹಾಗೆ ಮಾತನಾಡಿದ್ದು ತಪ್ಪು ಎಂದು ಟ್ರಂಪ್‌ಗೆ ಬುದ್ಧಿ ಹೇಳಿದ್ದಾರೆ.

ಇಂಡಿಯನ್-ಅಮೆರಿಕನ್ಸ್ ಆಕ್ರೋಶ..!

ಇಂಡಿಯನ್-ಅಮೆರಿಕನ್ಸ್ ಆಕ್ರೋಶ..!

ಟ್ರಂಪ್ ವಿರುದ್ಧ ಈಗಾಗಲೇ ಭಾರತ ಮೂಲದ ಅಮೆರಿಕನ್ನರು ಮುನಿಸಿಕೊಂಡಿದ್ದಾರೆ. ಅದರಲ್ಲೂ H1B ವೀಸಾ ವಿಚಾರದಲ್ಲಿ ಟ್ರಂಪ್ ತಳೆದಿರುವ ನಿಲುವು, ಭಾರತೀಯರಿಗೆ ಸಾಕಷ್ಟು ನಷ್ಟು ಉಂಟುಮಾಡಿದೆ. ಈ ಬೆನ್ನಲ್ಲೇ ಭಾರತದ ಗಾಳಿ ಹೊಲಸು ಎಂದಿರುವ ಡೊನಾಲ್ಡ್ ಟ್ರಂಪ್ ಬಗ್ಗೆ ಭಾರತ ಮೂಲದ ಅಮೆರಿಕನ್ ಮತದಾರರು ಆಕ್ರೋಶಗೊಂಡಿದ್ದಾರೆ. ಟ್ರಂಪ್ ಈ ರೀತಿ ವರ್ತಿಸುವುದು ಸರಿಯಲ್ಲ, ನಮಗೂ ಗೊತ್ತಿದೆ ಈ ಜಗತ್ತಿನಲ್ಲಿ ಭಾರತೀಯರಿಗೆ ಮಿತ್ರರು ಯಾರು ಹಾಗೂ ಶತ್ರುಗಳು ಯಾರು ಎಂಬುದು ಎನ್ನುವ ಮೂಲಕ ಟ್ರಂಪ್‌ಗೆ ಶಾಕ್ ಕೊಟ್ಟಿದ್ದಾರೆ. ಇಷ್ಟುದಿನ ಭಾರತೀಯರ ಮತ ಪಡೆಯಲು ಒದ್ದಾಡಿದ್ದ ಟ್ರಂಪ್ ತಮ್ಮ ಒಂದೇ ಒಂದು ಹೇಳಿಕೆ ಮೂಲಕ ಅದಕ್ಕೆಲ್ಲಾ ಕಲ್ಲು ಹಾಕಿದ್ದಾರೆ. ತಮ್ಮ ವಿರುದ್ಧ ಭಾರತೀಯರು ಆಕ್ರೋಶಗೊಳ್ಳುವಂತೆ ಮಾತನಾಡಿದ್ದಾರೆ. ಇದು ಚುನಾವಣೆಯಲ್ಲಿ ಒಳಪೆಟ್ಟು ಕೊಡುವುದರಲ್ಲಿ ಅನುಮಾನವೇ ಇಲ್ಲ.

ಒಬಾಮಾ ಕಾಲದಲ್ಲಿ ಸಂಬಂಧ ವೃದ್ಧಿ

ಒಬಾಮಾ ಕಾಲದಲ್ಲಿ ಸಂಬಂಧ ವೃದ್ಧಿ

ಭಾರತ ಹಾಗೂ ಅಮೆರಿಕ ಸಂಬಂಧದ ಬಗ್ಗೆ ಮಾತನಾಡಿರುವ ಬಿಡೆನ್, ಒಬಾಮಾ ಅಧ್ಯಕ್ಷ ಸ್ಥಾನದಲ್ಲಿದ್ದ ಸಂದರ್ಭದಲ್ಲಿ ನಾನು ಉಪಾಧ್ಯಕ್ಷನಾಗಿದ್ದೆ. ಆಗ ಭಾರತ ಮತ್ತು ಅಮೆರಿಕ ಸಂಬಂಧ ವೃದ್ಧಿಸಲು ಸಾಕಷ್ಟು ಪ್ರಯತ್ನಪಟ್ಟೆವು. ಈಗ ಟ್ರಂಪ್ ಅದನ್ನೆಲ್ಲಾ ಹಾಳು ಮಾಡುತ್ತಿದ್ದಾರೆ. ಅಮೆರಿಕದ ಮಿತ್ರ ರಾಷ್ಟ್ರಗಳ ಬಗ್ಗೆ ಟ್ರಂಪ್ ಆಡುವ ಮಾತುಗಳ ಮೇಲೆ ಹಿಡಿತ ಇಲ್ಲ ಎಂದಿದ್ದಾರೆ ಬಿಡೆನ್. ಅಲ್ಲದೆ ನಾನು ಮತ್ತು ಕಮಲಾ ಹ್ಯಾರಿಸ್ ಆಯ್ಕೆಯಾಗಿ ಬಂದರೆ ಭಾರತದ ಜೊತೆಗಿನ ಸಂಬಂಧ ವೃದ್ಧಿಗೆ ವಿಶೇಷ ಗಮನ ನೀಡಲಿದ್ದೇವೆ. ಭಾರತ ನಮ್ಮ ಮಿತ್ರ ರಾಷ್ಟ್ರ ಎಂದು ಬಿಡೆನ್ ಪ್ರತಿಪಾದಿಸಿದ್ದಾರೆ. ಈ ಮೂಲಕ ಚೀನಾಗೆ ಬಿಸಿ ಮುಟ್ಟಿಸಿ, ಭಾರತೀಯರ ಮತ ಸೆಳೆಯಲು ಬಿಡೆನ್ ಯತ್ನಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ

ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ

ಇಡೀ ಜಗತ್ತಿನಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ಹಾಗೂ ನಾವು ಒಗ್ಗಟ್ಟಿನಿಂದ ಹೋರಾಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲೂ ಟೆರರಿಸಂ ವಿರುದ್ಧ ಇದೇ ರೀತಿಯ ಹೋರಾಟ ಸಂಘಟಿಸಲಿದ್ದೇವೆ ಎಂದು ಬಿಡೆನ್ ಆಶ್ವಾಸನೆ ನೀಡಿದ್ದಾರೆ. ಅಮೆರಿಕದಲ್ಲಿನ ಭಾರತೀಯರು ಕೂಡ ಜೋ ಬಿಡೆನ್ ಪರ ಒಲವು ತೋರುತ್ತಿದ್ದಾರೆ ಎಂಬುದನ್ನು ಹಲವು ಸಮೀಕ್ಷೆಗಳು ಖಚಿತಪಡಿಸಿವೆ. ಅಲ್ಲದೆ ಈ ಬಾರಿ ಶೇಕಡ 70ರಷ್ಟು ಭಾರತೀಯರ ಮತ ಬಿಡೆನ್ ಹಾಗೂ ಕಮಲಾ ಜೋಡಿಗೆ ಬೀಳಲಿದೆ ಎಂದು ಭವಿಷ್ಯ ನುಡಿದಿವೆ ಸಮೀಕ್ಷೆಗಳು. ಇಷ್ಟೆಲ್ಲದರ ಮಧ್ಯೆ ಟ್ರಂಪ್ ಡಿಬೆಟ್ ವೇಳೆ ಭಾರತದ ಬಗ್ಗೆ ನೀಡಿರುವ ಹೇಳಿಕೆ ಸ್ವತಃ ಅಮೆರಿಕದ ನಾಯಕರನ್ನೇ ರೊಚ್ಚಿಗೆಬ್ಬಿಸಿದೆ.

H1B Visa ಹಿಂದಿನ ಸ್ಥಿತಿಗೆ ಮರಳಲಿದೆ..!

H1B Visa ಹಿಂದಿನ ಸ್ಥಿತಿಗೆ ಮರಳಲಿದೆ..!

ಟ್ರಂಪ್ ತಮ್ಮ ಆಡಳಿತಾವಧಿಯಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು H1B Visa ಮೇಲಿನ ನಿರ್ಬಂಧ ಹಾಗೂ ವೀಸಾ ವಿತರಣೆಯಲ್ಲಿ ಕೈಗೊಂಡ ಬದಲಾವಣೆಗಳಿಂದ. ಆದರೆ ಇದೀಗ ಜೋ ಬಿಡೆನ್ ಇದೇ ಜುಟ್ಟು ಹಿಡಿದು ಟ್ರಂಪ್‌ಗೆ ಟಾಂಗ್ ಕೊಡುತ್ತಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ಹುಡುಕುವವರು ಹಾಗೂ ನೆಲೆ ಕಂಡಕೊಳ್ಳುವ ಪ್ರತಿಭಾವಂತರಲ್ಲಿ ಭಾರತೀಯರದ್ದೇ ಮೇಲುಗೈ. H1B Visa ಬಳಸಿಕೊಂಡು ಭಾರತದ ಪ್ರತಿಭಾವಂತರು ಆ ದೇಶಕ್ಕೆ ವಲಸೆ ಹೋಗುತ್ತಾರೆ. ಆದರೆ ಟ್ರಂಪ್ ತಂದ ಬದಲಾವಣೆಯಿಂದ ಭಾರತೀಯರ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಇದೇ ಕಾರಣಕ್ಕೆ ಕಳೆದ ತಿಂಗಳು ಭಾರತ ಮೂಲದ ಅಮೆರಿಕನ್ನರ ಜೊತೆ ನಡೆದಿದ್ದ ವರ್ಚುವಲ್ ಪ್ರಚಾರ ಸಭೆಯಲ್ಲಿ ಬಿಡೆನ್ ಭರವಸೆಯೊಂದನ್ನ ನೀಡಿದ್ದರು. ನಾನು ಅಧ್ಯಕ್ಷನಾದರೆ H1B Visa ನಿಯಮವನ್ನು ಈ ಹಿಂದಿನ ಸ್ಥಿತಿಗೆ ಮರಳಿಸುತ್ತೇನೆ ಎಂದಿದ್ದರು ಬಿಡೆನ್. ಈ ಮೂಲಕ ಭಾರತ ಮೂಲದವರಿಗೆ ಸಹಾಯಕವಾಗುವ ವೀಸಾ ನಿಯಮ ತರುತ್ತೇನೆ ಎಂಬ ಸುಳಿವನ್ನು ಬಿಡೆನ್ ನೀಡಿದ್ದರು.

ಟ್ರಂಪ್ ಮಾಡಿದ ಡ್ಯಾಮೇಜ್ ಸರಿ ಮಾಡುವೆ

ಟ್ರಂಪ್ ಮಾಡಿದ ಡ್ಯಾಮೇಜ್ ಸರಿ ಮಾಡುವೆ

ಕಳೆದ ತಿಂಗಳು ನಡೆದಿದ್ದ ಇದೇ ವರ್ಚುವಲ್ ಪ್ರಚಾರ ಸಭೆಯಲ್ಲಿ ಟ್ರಂಪ್‌ಗೆ ಮತ್ತೊಂದು ಶಾಕ್ ಕೊಟ್ಟಿದ್ದ ಬಿಡೆನ್, ತಮ್ಮ ಭಾಷಣದ ಉದ್ದಕ್ಕೂ ಹಾಲಿ ಅಧ್ಯಕ್ಷ ಟ್ರಂಪ್ ಮಾಡಿರುವ ಎಡವಟ್ಟುಗಳನ್ನೇ ಪ್ರಸ್ತಾಪಿಸಿದ್ದರು. ಪ್ರತಿಸ್ಪರ್ಧಿಯ ವೀಕ್ನೆಸ್ ಬಗ್ಗೆ ಸರಿಯಾಗೇ ಅರಿತಿರುವ ಬಿಡೆನ್, ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ಭಾರತ ಮೂಲದ ಅಮೆರಿಕನ್ ಪ್ರಜೆಗಳ ಮನ ಗೆದ್ದಿದ್ದರು. ಟ್ರಂಪ್ ಅಮೆರಿಕದ ಸ್ನೇಹಿತ ರಾಷ್ಟ್ರಗಳ ಜೊತೆ ಮಾಡಿರುವ ಡ್ಯಾಮೇಜ್ ಹಾಗೂ ಅಮೆರಿಕದ ಬಗ್ಗೆ ಮೂಡಿಸಿರುವ ದ್ವಂಧ್ವ ಅಭಿಪ್ರಾಯ ಸರಿಮಾಡುವೆ ಎಂಬ ಭರವಸೆಯನ್ನೂ ಅಂದು ಜೋ ಬಿಡೆನ್ ನೀಡಿದ್ದರು.

ನಂಬಿಕೆ ಕಳೆದುಕೊಳ್ಳುತ್ತಿರುವ ಟ್ರಂಪ್..?

ನಂಬಿಕೆ ಕಳೆದುಕೊಳ್ಳುತ್ತಿರುವ ಟ್ರಂಪ್..?

ಕೊರೊನಾ ವೈರಸ್ ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಟ್ರಂಪ್ ಫ್ಲಾಪ್ ಆಗಿದ್ದಾರೆ ಅಂತಾ ಸಮೀಕ್ಷೆಗಳು ಹೇಳುತ್ತಿವೆ. ಅಮೆರಿಕ ಮಿತ್ರ ರಾಷ್ಟ್ರಗಳಲ್ಲಿ ನಡೆಸಿರುವ ಸಮೀಕ್ಷೆ ಆಧರಿಸಿ ಈ ವರದಿ ನೀಡಲಾಗಿತ್ತು. ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ಗಿಂತ ಟ್ರಂಪ್ ಹಿಂದುಳಿದಿದ್ದಾರೆ. ಈ ವಿಚಾರದಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಮೇಲೆ ನಂಬಿಕೆ ಇಲ್ಲವಾಗಿದೆ ಎಂಬ ವರದಿ ಟ್ರಂಪ್ ವಿರುದ್ಧದ ಅಸಮಾಧಾನ ಬಿಂಬಿಸುವಂತಿತ್ತು. ಇದರ ನಡುವೆ ಬಿಡೆನ್ ಕೂಡ ಟ್ರಂಪ್ ವೋಟ್‌ ಬ್ಯಾಂಕ್‌ಗೆ ಲಗ್ಗೆ ಹಾಕುತ್ತಿದ್ದಾರೆ. ಅದರಲ್ಲೂ ಬಿಡೆನ್ ಭಾರತೀಯರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿರುವುದು ಟ್ರಂಪ್‌ಗೆ ಮತ್ತಷ್ಟು ಹಿನ್ನಡೆ ಉಂಟುಮಾಡುತ್ತಿರುವುದು ಸುಳ್ಳಲ್ಲ. ಆದರೆ ಅಮೆರಿಕದ ಮತದಾರ ಪ್ರಭು ಚುನಾವಣೆಯ ಕೊನೆ ಕ್ಷಣದಲ್ಲಿ ಯಾರ ಕಡೆ ವಾಲುತ್ತಾನೋ ಕಾದು ನೋಡಬೇಕಿದೆ.

English summary
Biden angered on Trump’s statement about Indian air. And also, Biden gave a suggestion to Trump about to learn how to behave with the friends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X