ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಲಕ್ಷ ಭಾರತೀಯರಿಗೆ ಶುಭ ಸುದ್ದಿ ನೀಡಲಿರುವ ಜೋ ಬೈಡನ್

|
Google Oneindia Kannada News

ವಾಷಿಂಗ್ಟನ್, ನ. 8: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ವಲಸೆ ಹಾಗೂ ಅಮೆರಿಕಾಲ್ಲಿದಾಖಲೆಗಳಿಲ್ಲದೆ ನೆಲೆಸಿರುವ ಇತರೆ ದೇಶದವರ ಬಗ್ಗೆ ಮುಂದಿನ ಸರ್ಕಾರ ಹೇಗೆ ಕ್ರಮ ತೆಗೆದುಕೊಳ್ಳಲಿದೆ ಎಂಬುದು ಪ್ರಮಖ ವಿಷಯವಾಗಿತ್ತು. ಅದರಂತೆ ಬೈಡನ್ ಆಡಳಿತವು ವಲಸೆ ನೀತಿಯನ್ನು ಸರಳಗೊಳಿಸಲಿದ್ದು, ಸೂಕ್ತ ದಾಖಲೆಗಳಿಲ್ಲದವರಿಗೂ ಅಮೆರಿಕದಲ್ಲಿ ನೆಲೆಸಲು ಅವಕಾಶ ನೀಡಲಿದೆ.

ಅಮೆರಿಕದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸುಮಾರು 1 ಕೋಟಿ 10 ಲಕ್ಷ ವಲಸಿಗರು ನೆಲಿಸಿದ್ದಾರೆ. ಈ ಪೈಕಿ 5 ಲಕ್ಷ ಭಾರತೀಯರಿದ್ದಾರೆ. ಎಲ್ಲರಿಗೂ ಅಮೆರಿಕದ ಪೌರತ್ವ ನೀಡಲು ನೂತನ ಅಧ್ಯಕ್ಷ ಜೋಸೆಫ್ ಬೈಡನ್ ಮುಂದಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಧ್ಯಕ್ಷ ಹೋರಾಟದಲ್ಲಿ ಗೆದ್ದ ಬೈಡನ್ ಭಾವುಕ ಮಾತುಅಧ್ಯಕ್ಷ ಹೋರಾಟದಲ್ಲಿ ಗೆದ್ದ ಬೈಡನ್ ಭಾವುಕ ಮಾತು

ಪ್ರತಿ ವರ್ಷ ಕನಿಷ್ಠ 95 ಸಾವಿರ ವಲಸಿಗರು ಅಮೆರಿಕವನ್ನು ಪ್ರವೇಶಿಸುತ್ತಿದ್ದು ಈ ಬಗ್ಗೆ ಕೂಡಾ ಹೊಸ ನೀತಿ ರೂಪಿಸಲು ಬೈಡನ್ ಸರ್ಕಾರ ಮುಂದಾಗಲಿದೆ.

Biden administration likely to provide US citizenship to over 5 lakh Indians

ಕುಟುಂಬ ಜೊತೆಗೆ ಜೀವಿಸುರುವುದಕ್ಕೆ ಆದ್ಯತೆ ನೀಡಲು ಬೈಡನ್ ಮುಂದಾಗಿದ್ದು, ವಲಸೆ ಸುಧಾರಣಾ ನೀತಿ ಕುರಿತು ಶಾಸನ ರೂಪಿಸಲಿದ್ದಾರೆ. ಕುಟುಂಬ ಆಧಾರಿತ ವಲಸೆಗೆ ಬೈಡನ್‌ ಆಡಳಿತ ಬೆಂಬಲ ನೀಡಲಿದೆ. ಅವಿಭಕ್ತ ಕುಟುಂಬದ ಹಿತಾಸಕ್ತಿ ಕಾಪಾಡುವುದು ಅಮೆರಿಕದ ಪ್ರಮುಖ ನೀತಿಯಾಗಿರಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ದೇಶಕ್ಕೆ ಇಷ್ಟು ವೀಸಾ ಎಂಬ ನೀತಿಯನ್ನು ಅಳಿಸ ಹಾಕಲು ಬೈಡನ್ ಮುಂದಾಗಿದ್ದಾರೆ.

ಉದ್ಯೋಗಿ ಆಧಾರಿತ ವೀಸಾ ಅಥವಾ ಗ್ರೀನ್ ಕಾರ್ಡ್ ನಿಯಮದಲ್ಲೂ ಬದಲಾವಣೆ ತರಲಿದ್ದು, ಕೌಶಲ್ಯ ಆಧಾರಿತ ಉದ್ಯೋಗನಿರತ ವಲಸಿಗರಿಗೆ ಅನುಕೂಲವಾಗಲಿದೆ.

ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರುಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

ಟ್ರಂಪ್ ಆಡಳಿತವೂ ಮುಸ್ಲಿಂ ನಿಷೇಧ ಎಂಬ ಅಂಶವನ್ನು ಮುಂದಿಟ್ಟುಕೊಂಡು ಅನೇಕ ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಪರ್ಕ, ಸಂಬಂಧ ಕಡಿತಕ್ಕೆ ಮುಂದಾಗಿತ್ತು. ಇರಾನ್ ಹಾಗೂ ಸಿರಿಯಾ ಇದರಲ್ಲಿ ಪ್ರಮುಖವಾಗಿವೆ. ಬೈಡನ್ ಸರ್ಕಾರವು ಈ ಮುಸ್ಲಿಂ ನಿಷೇಧ ನೀತಿಯನ್ನು ಅವಲೋಕಿಸಿ. ಅಮೆರಿಕದ ಹಿತಕ್ಕೆ ತಕ್ಕಂತೆ ನಿಷೇಧ ತೆರವುಗೊಳಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

Recommended Video

BJP ಸಿಬಿಐ ನಾ miss use ಮಾಡ್ತಿದಾರೆ!! | Oneindia Kannada

English summary
US President-elect Joe Biden will work towards providing a roadmap to American citizenship for nearly 11 million undocumented immigrants, including over 500,000 from India, and will also establish a minimum admission number of 95,000 refugees annually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X