ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ಮೇಲೆ ಚೀನಾ ಕ್ರಮವನ್ನು ಹತ್ಯಾಕಾಂಡ ಎಂದು ಕರೆದ ಬೈಡನ್

|
Google Oneindia Kannada News

ಮುಸ್ಲಿಮರ ವಿರುದ್ಧ ಚೀನಾ ನಡೆಸುತ್ತಿರುವ ಕ್ರಮವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜನಾಂಗೀಯ ಹತ್ಯಾಕಾಂಡ ಎಂದು ವ್ಯಾಖ್ಯಾನಿಸಿದ್ದಾರೆ.

ತನ್ನ ದೇಶದ ಪ್ರಜೆಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಚೀನಾ ಅದಕ್ಕೆ ತಕ್ಕ ಬೆಲೆ ತೆರಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ಮೊದಲ ಬಾರಿಗೆ ಮೈಕೆಲ್ ಪಾಂಪಿಯೋ ಕ್ಸಿನ್‌ಜಿಯಾಂಗ್‌ನಲ್ಲಿ ಹತ್ಯಾಕಾಂಡ ಎಂದು ಅಧಿಕೃತವಾಗಿ ಘೋಷಿಸಿದರು.

ಪೊಲೀಸರಿಂದ ಹತ್ಯೆಗೆ ಒಳಗಾದವರ ಕುರಿತು ಅಧಿಕಾರಿಗಳು ತನಿಖೆಗೆ ಘೋಷಿಸಿದರು ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ವಿಶ್ವ ನಾಯಕನಾಗಲು ಹಾತೊರೆಯುತ್ತಿರುವ ಚೀನಾವು ಎಲ್ಲಾ ರಾಷ್ಟ್ರಗಳ ಬೆಂಬಲವನ್ನು ಪಡೆಯಲೇಬೇಕು, ಜತೆಗೆ ಚೀನಾದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಿ ಕಿರುಕುಳಕ್ಕೆ ಸಿಲುಕಿರುವ ಸಮುದಾಯಗಳ ರಕ್ಷಣೆಗಾಗಿ ಚೀನಾದ ಮೇಲೆ ಒತ್ತಡ ತರಲು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

Biden Administration Declares Chinese Actions In Xinjiang As Genocide

ಚೀನಾದ ಕ್ಸಿಂಜಿಯಾಂಗ್‌ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಉಯ್ಘಾರ್ ಸಮುದಾಯವನ್ನು ಕ್ಯಾಂಪ್‌ಗಳಲ್ಲಿ ಕೂಡಿ ಹಾಕಿರುವ ಹಾಗೂ ಅವರಿಗೆ ಮಾನವ ಹಕ್ಕುಗಳನ್ನು ನಿರಾಕರಿಸುತ್ತಿರುವ ಬಗ್ಗೆ ಪ್ರಶ್ನೆ ಮಾಡಿದರು.

ಮಾನವ ಹಕ್ಕುಗಳ ಉಲ್ಲಂಘನೆ ಎಸಗುವ ರಾಷ್ಟ್ರಗಳ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

English summary
Amid escalating tensions with Beijing, the Biden administration on Tuesday (local time) declared Chinese actions against the Muslim Uyghurs and other ethnic and religious minority groups in Xinjiang as 'genocide'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X