ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

WHOನಿಂದ ಪೂರ್ವ ಅರ್ಹತೆ ಪಡೆದ ಭಾರತ್ ಬಯೋಟೆಕ್‌ನ 2 ಲಸಿಕೆ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 02: ಅತಿಸಾರ ಬೇಧಿಯನ್ನು ತಡೆಗಟ್ಟಲು ಭಾರತ್ ಬಯೋಟೆಕ್ ತಯಾರಿಸಿರುವ 2 ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವ ಅರ್ಹತೆ ಪಡೆದಿದೆ.

ಅತಿಸಾರ ಬೇಧಿಯನ್ನು ತಡೆಗಟ್ಟಲು ತಾನು ತಯಾರಿಸಿರುವ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ 5ಡಿ ವಿಶ್ವ ಆರೋಗ್ಯ ಸಂಸ್ಥೆ ಪೂರ್ವ ಅರ್ಹತೆಯವನ್ನು ಪಡೆದಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಸೋಮವಾರ ಪ್ರಕಟಿಸಿದೆ.

ಸೋಂಕಿತರ ಕಣ್ಣೀರು ಕೂಡ ಕೊರೊನಾ ಸೋಂಕು ಹರಡಬಹುದುಸೋಂಕಿತರ ಕಣ್ಣೀರು ಕೂಡ ಕೊರೊನಾ ಸೋಂಕು ಹರಡಬಹುದು

ರೋಟಾವ್ಯಾಕ್ ಮತ್ತು ರೋಟಾವ್ಯಾಕ್ 5 ಡಿಯನ್ನು ಭಾರತೀಯ ಮತ್ತು ಜಾಗತಿಕ ಪಾಲುದಾರರ ಸಹಯೋಗದೊಂದಿಗೆ ಭಾರತದಲ್ಲಿ ಆವಿಷ್ಕರಿಸಲಾಗಿದೆ.

Bharat Biotech’s Rotavac 5D Gets WHO Pre-Qualification

ಇಂದಿನ ಘೋಷಣೆಯು ನಿರ್ಲಕ್ಷಿತ ರೋಗಗಳನ್ನು ಪರಿಹರಿಸಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಪಂಚದಲ್ಲಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸೋಂಕುಗಳನ್ನು ತಡೆಗಟ್ಟಲು ಭಾರತ್ ಬಯೋಟೆಕ್‌ನ ದೃಷ್ಟಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ಪೂರೈಸಲು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತ್ ಬಯೋಟೆಕ್ ಮೊದಲ ತಲೆಮಾರಿನ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ ನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರದ ಜೈವಿಕ ತಂತ್ರಜ್ಞಾನ ಇಲಾಖೆ, 16 ಇತರ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಅಭಿವೃದ್ಧಿಪಡಿಸಿದೆ, ಇದು ಸಾರ್ವಜನಿಕ ಆರೋಗ್ಯಕ್ಕಾಗಿ ಇದುವರೆಗಿನ ಅತಿದೊಡ್ಡ ಸಾಮಾಜಿಕ ನಾವೀನ್ಯತೆಯ ಯೋಜನೆಯಾಗಿದೆ.

ಈ ಲಸಿಕೆಯನ್ನು ರೋಟಾವೈರಸ್ ಸೋಂಕು ತಡೆಯಲು ಬಳಸಲಾಗುತ್ತದೆ. ಇದು ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಕಂಡುಬರುತ್ತದೆ. ಡಬ್ಲ್ಯುಎಚ್‌ಒ ಪೂರ್ವ ಅರ್ಹತೆಯಿಂದ ಯುನೆಸೆಪ್ ಮತ್ತು ಪ್ಯಾನ್ ಅಮೆರಿಕನ್ ಹೆಲ್ತ್ ಅರ್ಗನೈಷನ್ ನಂತಹ ಏಜೆನ್ಸಿಗಳಿಂದ ರೋಟಾವ್ಯಾಕ್ 5 ಡಿ ಖರೀದಿ ಸಾಧ್ಯವಾಗಲಿದ್ದು, ಈ ಜೀವ ರಕ್ಷಕ ಲಸಿಕೆ ತ್ವರಿತಗತಿಯಲ್ಲಿ ಜಾಗತಿಕವಾಗಿ ದೊರೆಯುವಂತಾಗಲಿದೆ ಎಂದು ಭಾರತ್ ಬಯೋಟೆಕ್ ಜಂಟಿ ಮ್ಯಾನೇಜಿಂಗ್ ಡೈರೆಕ್ಟರ್ ಸುಚಿತಾ ಎಲಾ ತಿಳಿಸಿದ್ದಾರೆ.

ರೋಟಾವ್ಯಾಕ್ ನ ಹೊಸ ರೂಪಾಂತರವಾದ ರೋಟವ್ಯಾಕ್ 5 ಡಿ, ಒಂದು ಅನನ್ಯ ರೋಟಾವೈರಸ್ ಲಸಿಕೆ ಸೂತ್ರೀಕರಣವಾಗಿದ್ದು, ಇದನ್ನು ಬಫರ್ ಇಲ್ಲದೆ ನಿರ್ವಹಿಸಬಹುದು ಮತ್ತು ಅದರ ಕಡಿಮೆ ಡೋಸ್ ಪರಿಮಾಣ (0.5 ಎಂಎಲ್) ಸುಲಭ ಲಸಿಕೆ ಲಾಜಿಸ್ಟಿಕ್, ಕೋಲ್ಡ್ ಚೈನ್ ನಿರ್ವಹಣೆ ಮತ್ತು ಲಸಿಕೆ ನೀಡಿಕೆ ನಂತರ ಕಡಿಮೆ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಯಾಗುತ್ತದೆ ಎಂದು ಕಂಪನಿ ಹೇಳಿದೆ.

ಡೆಲ್ಟಾ ಪ್ಲಸ್ ಕೊರೊನಾ ಸೋಂಕಿನ ವಿರುದ್ಧ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪರಿಣಾಮಕಾರಿ ಎಂಬ ವಿಚಾರ ತಿಳಿದುಬಂದಿದೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ, ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ವಿರುದ್ಧ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಇತ್ತೀಚಿನ ಅಧ್ಯಯನ ತಿಳಿಸಿದೆ.

ಕೊವ್ಯಾಕ್ಸಿನ್ ಲಸಿಕೆಯನ್ನು ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಕೋವಿಡ್-19 ವೈರಸ್ ವಿರುದ್ಧ ಶೇ.77.8ರಷ್ಟು ಮತ್ತು ಡೆಲ್ಟಾ ವೈರಾಣು ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿತ್ತು.

ಆದರೆ ಕೊವೀಡ್-19 ರೂಪಾಂತರಿ ತಳಿಯಾದ, ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿರುವ ಡೆಲ್ಟಾ ಪ್ಲಸ್ ವೈರಾಣು ವಿರುದ್ಧವೂ ಇದು ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಐಸಿಎಂಆರ್‍ ನ ಸದ್ಯದ ಅಧ್ಯಯನದಿಂದ ತಿಳಿದುಬಂದಿದೆ.

ಕೊವ್ಯಾಕ್ಸಿನ್ ಮೂರು ಹಂತದ ಕ್ಲಿನಿಕಲ್ ಪ್ರಯೋಗ ಆಗದಿದ್ದರೂ ಭಾರತದಲ್ಲಿ ತುರ್ತು ಬಳಕೆಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಾರತ್ ಬಯೋಟೆಕ್ ಸಂಸ್ಥೆ, ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶ ಘೋಷಿಸಿತ್ತು.

ಅದರ ಅನ್ವಯ ಈ ಲಸಿಕೆ ಲಕ್ಷಣ ಸಹಿತ ಕೊವೀಡ್-19 ಸೋಂಕಿನ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು. ಇದೀಗ ಡೆಲ್ಟಾ ಪ್ಲಸ್ ವಿರುದ್ಧವು ಪರಿಣಾಮಕಾರಿ ಎಂದು ವರದಿಯಾಗಿದೆ.

English summary
The World Health Organisation (WHO) has awarded prequalification to Bharat Biotech’s rotavirus vaccine, Rotavac 5D.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X