ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಒಬಾಮ ಓರ್ವ 'ಅಸಮರ್ಥ ಅಧ್ಯಕ್ಷ' ಎಂದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 18: ಬರಾಕ್ ಒಬಾಮ ಓರ್ವ ಅಸಮರ್ಥ ಅಧ್ಯಕ್ಷರಾಗಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕಿಡಿಕಾರಿದ್ದಾರೆ.

ಇದಕ್ಕೂ ಮುನ್ನ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಫಲವಾಗಿದ್ದಾರೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಟೀಕೆ ಮಾಡಿದ್ದರು.

ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್

ಇದಕ್ಕೀಗ ಉತ್ತರ ನೀಡಿರುವ ಡೊನಾಲ್ಡ್ ಟ್ರಂಪ್, ಬರಾಕ್ ಒಬಾಮ ತೀವ್ರ ಅಸಮರ್ಥ ಅಧ್ಯಕ್ಷರಾಗಿದ್ದರು ಎಂದು ಆರೋಪಿಸಿದ್ದಾರೆ.'ಬರಾಕ್ ಒಬಾಮ ಅಸಮರ್ಥ ಅಧ್ಯಕ್ಷರಾಗಿದ್ದರು. ತೀವ್ರ ಅಸಮರ್ಥ ನಾಯಕರಾಗಿದ್ದರು. ಅಷ್ಟೇ ನಾನು ಹೇಳಬಲ್ಲೆ' ಎಂದು ಶ್ವೇತ ಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಬಾಮ ಟ್ರಂಪ್ ಹೆಸರು ಪ್ರಸ್ತಾಪಿಸಿರಲಿಲ್ಲ

ಒಬಾಮ ಟ್ರಂಪ್ ಹೆಸರು ಪ್ರಸ್ತಾಪಿಸಿರಲಿಲ್ಲ

ಅಮೆರಿಕದ ವಿವಿಧೆಡೆ ಇರುವ 74 ಐತಿಹಾಸಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಒಬಾಮ, ಆಡಳಿತದ ಚುಕ್ಕಾಣಿ ಹಿಡಿದವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದರು ಆದರೆ ಟ್ರಂಪ್ ಹೆಸರು ಪ್ರಸ್ತಾಪಿಸಿರಲಿಲ್ಲ.

ಕೊರೊನಾ ವೈರಸ್ ರೋಗ ತಡೆಗಟ್ಟಲು ಟ್ರಂಪ್ ವಿಫಲ

ಕೊರೊನಾ ವೈರಸ್ ರೋಗ ತಡೆಗಟ್ಟಲು ಟ್ರಂಪ್ ವಿಫಲ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಡೊನಾಲ್ಡ್ ಟ್ರಂಪ್ ವಿಫಲವಾಗಿದ್ದಾರೆ ಎಂಬ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲೂ ವಿಫಲವಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಏರಿಕೆಯಾಗಿದೆ ಎಂಬುದನ್ನು ವಿರೋಧಿಗಳು ಆರೋಪಿಸಿದ್ದರು.

ಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆ

ಅಧ್ಯಕ್ಷರು ಹಾಕಿಕೊಂಡಿದ್ದ ಪರದೆಯನ್ನು ಕೊರೊನಾ ಹರಿದು ಹಾಕಿದೆ

ಅಧ್ಯಕ್ಷರು ಹಾಕಿಕೊಂಡಿದ್ದ ಪರದೆಯನ್ನು ಕೊರೊನಾ ಹರಿದು ಹಾಕಿದೆ

ನಮ್ಮ ಆಡಳಿತ ಚುಕ್ಕಾಣಿ ಹಿಡಿದವರು ಹಾಕಿಕೊಂಡಿದ್ದ ಪರದೆಯನ್ನು ಈ ಪಿಡುಗು ಹರಿದುಹಾಕಿದೆ. ಪರದೆಯ ಹಿಂದಿರುವ ಅನೇಕರು ಕನಿಷ್ಠ ಪಕ್ಷ ಕಾರ್ಯನಿರ್ವಹಿಸುತ್ತಿರುವುದಾಗಿ ತೋರಿಸಿಕೊಳ್ಳುತ್ತಲೂ ಇಲ್ಲ ಎಂದು ಒಬಾಮ ಹೇಳಿದ್ದರು.

ಕೊರೊನಾಗೆ ಅಮೆರಿಕದಲ್ಲಿ ಹೆಚ್ಚು ಸಾವು

ಕೊರೊನಾಗೆ ಅಮೆರಿಕದಲ್ಲಿ ಹೆಚ್ಚು ಸಾವು

ಬರಾಕ್ ಒಬಾಮ ತಮ್ಮ ಹೇಳಿಕೆಯಲ್ಲಿ ಜನರನ್ನು ಒಗ್ಗೂಡಿಸುವ ಪ್ರಮಾಣಿಕರ ನಾಯಕರನ್ನು ಹೊಂದಿರಬೇಕು ಎಂದು ಹೇಳಿದ್ದರು.ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಅಮೆರಿಕದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ. ಸೋಂಕಿತರ ಸಂಖ್ಯೆ 15 ಲಕ್ಷದ ಗಡಿ ಸಮೀಪದಲ್ಲಿದ್ದು, 89 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೆ ಶರಣಾಗಿದ್ದಾರೆ.

English summary
President Donald Trump on Sunday called his predecessor Barack Obama a "grossly incompetent President" in response to the latter's criticism of United States' COVID-19 pandemic response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X