• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋ ಬಿಡೆನ್, ಕಮಲಾ ಹ್ಯಾರಿಸ್ ಪರ ಬರಾಕ್ ಒಬಾಮಾ ಪ್ರಚಾರ

|

ವಾಷಿಂಗ್ಟನ್, ಅಕ್ಟೋಬರ್ 17: ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಪರ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮುಂದಿನ ವಾರ ಪೆನ್ಸಿಲ್‌ವೇನಿಯಾದಲ್ಲಿ ಪ್ರಚಾರ ನಡೆಸಲಿದ್ದಾರೆ.

ಬರುವ ಬುಧವಾರ ಒಬಾಮಾ ಫಿಲಡೆಲ್ಫಿಯಾ,ಪೆನ್ಸಿಲ್ ವೇನಿಯಾಕ್ಕೆ ತೆರಳಲಿದ್ದು, ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಬಿಡೆನ್ ಪರ ಪ್ರಚಾರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೆರಿಕ ಚುನಾವಣೆ: ಟ್ರಂಪ್ ಹಿಂದಿಕ್ಕಲು ಬಿಡನ್ ಗೆ ನೆರವಾದ ದೇಣಿಗೆ ಸಂಗ್ರಹಣೆ

ಅಧ್ಯಕ್ಷ ಸ್ಥಾನ ತೊರೆದು ನಾಲ್ಕು ವರ್ಷಗಳಾದರೂ ಒಬಾಮಾ ಅವರ ಭಾಷಣ ಕೌಶಲ ಪ್ರತಿಪಕ್ಷ ಡೆಮಾಕ್ರಟಿಕ್ ನತ್ತ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ.

77 ವರ್ಷದ ಬಿಡೆನ್ ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬಿಡೆನ್ ಹಾಗೂ ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಪರ ಆನ್ ಲೌನ್ ಪ್ರಚಾರ ನಡೆಸಲು ಒಬಮಾ ಅನುಮತಿ ನೀಡಿದ್ದಾರೆ.ವೈಯುಕ್ತಿಕವಾಗಿ ಇದೇ ಮೊದಲ ಬಾರಿಗೆ ಮಾಜಿ ಅಧ್ಯಕ್ಷರು ಪ್ರಚಾರ ನಡೆಸಲಿದ್ದಾರೆ.

2016ರಲ್ಲಿ ಅವರು ಕೆಟ್ಟ ಕೆಲಸ ಮಾಡಿದ್ದರಿಂದ ನಾನೀಗ ಅಧ್ಯಕ್ಷನಾಗಿದ್ದೇನೆ, ಅವರ ಪ್ರಚಾರ ಯಾರ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ 3 ರಂದು ಚುನಾವಣೆ ನಡೆಯಲಿದೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬಿಡೆನ್ ಭಾರೀ ಪ್ರಮಾಣದ ದೇಣಿಗೆಯನ್ನು ಸಂಗ್ರಹಿಸಿದ್ದಾರೆ. ಇದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಲು ನೆರವಾಗುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಸೆಪ್ಟಂಬರ್ ಒಂದು ತಿಂಗಳಲ್ಲೇ ಬಿಡೆನ್ 383ದಶಲಕ್ಷ ಡಾಲರ್ ಸಂಗ್ರಹಿಸಿದ್ದಾರೆ. ಒಂದು ತಿಂಗಳಲ್ಲಿ ಈ ಮೊತ್ತ ಭಾರೀ ಪ್ರಮಾಣದಲ್ಲಿ ಹರಿದು ಬಂದ ದೇಣಿಗೆ ಎಂದು ಅಭಿಪ್ರಾಯ ಪಡಲಾಗುತ್ತಿದೆ. ಆದರೆ, ಇವರ ಎದುರಾಳಿ ರಿಪಬ್ಲಿಕನ್ ಪಕ್ಷದ ಕಳೆದ ತಿಂಗಳ ದೇಣಿಗೆ ಮೊತ್ತ ಎಷ್ಟು ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

English summary
Former US president Barack Obama will campaign for Democratic party presidential candidate Joe Biden in Pennsylvania next week, the Biden campaign has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X