ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಗೂ ಇತ್ತು ಕೊರೊನಾ ವೈರಸ್ ಸೋಂಕು.!

|
Google Oneindia Kannada News

ವಾಷಿಂಗ್ಟನ್, ಜೂನ್ 4: ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಕಾಲಡಿಗೆ ಸಿಲುಕಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನರಳಿ ನರಳಿ ಪ್ರಾಣ ಬಿಟ್ಟಿದ್ದರು. 46 ವರ್ಷ ವಯಸ್ಸಿನ ಬ್ಲಾಕ್ ಮ್ಯಾನ್ ಜಾರ್ಜ್ ಫ್ಲಾಯ್ಡ್ ಅವರ ಸಾವನ್ನು 'ನರಹತ್ಯೆ' ಎಂದು ವೈದ್ಯಕೀಯ ಪರೀಕ್ಷಕರು ವರ್ಗೀಕರಿಸಿದ್ದರು.

ಇದೀಗ ಜಾರ್ಜ್ ಫ್ಲಾಯ್ಡ್ ಅವರ ಶವಪರೀಕ್ಷೆಯ ವರದಿ ಬಹಿರಂಗವಾಗಿದ್ದು, ಅದರಲ್ಲಿ ಜಾರ್ಜ್ ಫ್ಲಾಯ್ಡ್ ಅವರಿಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು ಎಂಬ ಅಂಶ ಉಲ್ಲೇಖಿಸಲಾಗಿದೆ.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

ಹೆನ್ನೇಪಿನ್ ಕೌಂಟಿ ಮೆಡಿಕಲ್ ಎಕ್ಸಾಮಿನರ್ಸ್ ಕಛೇರಿಯಿಂದ 20 ಪುಟಗಳ ಜಾರ್ಜ್ ಫ್ಲಾಯ್ಡ್ ಅಟಾಪ್ಸಿ ವರದಿ ಬಿಡುಗಡೆ ಆಗಿದೆ. ಅಟಾಪ್ಸಿ ವರದಿಯಲ್ಲಿ ಏಪ್ರಿಲ್ 3 ರಂದು ಜಾರ್ಜ್ ಫ್ಲಾಯ್ಡ್ ಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು ಎಂದು ಸ್ಪಷ್ಟಪಡಿಸಲಾಗಿದೆ.

ರೋಗದ ಲಕ್ಷಣ ಇರಲಿಲ್ಲ.!

ರೋಗದ ಲಕ್ಷಣ ಇರಲಿಲ್ಲ.!

ಕೋವಿಡ್-19 ಪಾಸಿಟಿವ್ ಇದ್ದರೂ, ಜಾರ್ಜ್ ಫ್ಲಾಯ್ಡ್ ಗೆ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ. ಜಾರ್ಜ್ ಫ್ಲಾಯ್ಡ್ ಶ್ವಾಸಕೋಶ ಆರೋಗ್ಯಕರವಾಗಿ ಕಾಣಿಸಿಕೊಂಡಿತ್ತು. ಆದರೆ ಹೃದಯದಲ್ಲಿ ಅಪಧಮನಿಗಳು ಮಾತ್ರ ಕೊಂಚ ಕಿರಿದಾಗಿತ್ತು ಎಂಬ ಅಂಶ ಅಟಾಪ್ಸಿ ವರದಿಯಲ್ಲಿದೆ.

ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವೇನು.?

ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವೇನು.?

ಕುತ್ತಿಗೆ ಮೇಲೆ 'ವೈಟ್' ಪೊಲೀಸ್ ಡೆರೆಕ್ ಚೌವಿನ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದಾಗ, ಕಾರ್ಡಿಯೋಪಲ್ಮನರಿ ಅರೆಸ್ಟ್ ನಿಂದ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.?ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.?

ಸೆಕೆಂಡ್ ಡಿಗ್ರಿ ಮರ್ಡರ್ ಪ್ರಕರಣ

ಸೆಕೆಂಡ್ ಡಿಗ್ರಿ ಮರ್ಡರ್ ಪ್ರಕರಣ

ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಕಾರಣವಾದ ಡೆರೆಕ್ ಚೌವಿನ್ ವಿರುದ್ಧ ಮೊದಲು ಥರ್ಡ್ ಡಿಗ್ರಿ ಮರ್ಡರ್ ಪ್ರಕರಣ ದಾಖಲಾಗಿತ್ತು. ಇದೀಗ ಅದನ್ನ ಸೆಕೆಂಡ್ ಡಿಗ್ರಿ ಮರ್ಡರ್ ಪ್ರಕರಣಕ್ಕೆ ಅಪ್ ಗ್ರೇಡ್ ಮಾಡಲಾಗಿದೆ. ಡೆರೆಕ್ ಚೌವಿನ್ ಜೊತೆಗಿದ್ದ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಮೊದಲು ಪ್ರಕರಣ ದಾಖಲಾಗಿರಲಿಲ್ಲ. ಆದ್ರೀಗ, ಆ ಮೂವರ ವಿರುದ್ಧವೂ ಕೇಸ್ ಫೈಲ್ ಮಾಡಲಾಗಿದೆ. ಡೆರೆಕ್ ಚೌವಿನ್ ಮತ್ತು ಇತರೆ ಮೂವರು ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

{ಚಿತ್ರಕೃಪೆ: ಎಪಿ}

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

English summary
Autopsy report says George Floyd had tested Covid-19 positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X