ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳ್ಗಿಚ್ಚಿಗೆ ದೇಣಿಗೆ ಸಂಗ್ರಹ: ಹೆಚ್ಚು ಹಣ ಕೊಟ್ಟವರಿಗೆ ಯುವತಿಯಿಂದ ಬೆತ್ತಲೆ ಚಿತ್ರದ 'ಗಿಫ್ಟ್'

|
Google Oneindia Kannada News

ವಾಷಿಂಗ್ಟನ್, ಜನವರಿ 6: ಆಸ್ಟ್ರೇಲಿಯಾದಲ್ಲಿ ನಾಲ್ಕೈದು ತಿಂಗಳಿನಿಂದ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚು ಅಪಾರ ಸಂಪತ್ತು, ಜನ, ಪ್ರಾಣಿ ಪಕ್ಷಗಳ ಜೀವನಷ್ಟಕ್ಕೆ ಕಾರಣವಾಗಿದೆ. ಸತತ ಪ್ರಯತ್ನದ ನಡುವೆಯೂ ಬೆಂಕಿಯ ಜ್ವಾಲೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಬೇಸಿಗೆ ಹಾಗೂ ಗಾಳಿ ತೀವ್ರವಾಗುವ ಸೂಚನೆ ಇರುವುದರಿಂದ ಇನ್ನೂ ಭೀಕರ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಎದುರಾಗಿದೆ. ಈ ಬೆಂಕಿಯಿಂದ ಆಗುತ್ತಿರುವ ಹಾನಿಗೆ ಪರಿಹಾರದ ನೆರವು ನೀಡುವ ಸಲುವಾಗಿ ಯುವತಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ನಗ್ನ ಚಿತ್ರ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಅಮೆರಿಕ ಮೂಲದ ಕೇಯ್ಲನ್ ವಾರ್ಡ್ ಎಂಬ 20 ವರ್ಷದ ಯುವತಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆ ದೇಣಿಗೆ ಸಂಗ್ರಹಿಸಲು ನಗ್ನ ಚಿತ್ರಗಳನ್ನು ಕಳಿಸಿದ್ದಾರೆ. ಕೇವಲ ಎರಡು ದಿನಗಳ ಒಳಗೇ ಅವರು $700,000 ಕ್ಕೂ ಅಧಿಕ (ಐದು ಕೋಟಿ ರೂ.) ಮೊತ್ತದ ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟ

ಟ್ವಿಟ್ಟರ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿನ ತಮ್ಮ 'ದಿ ನೇಕೆಡ್ ಫಿಲಾಂಥ್ರೊಪಿಸ್ಟ್' ಖಾತೆಯಲ್ಲಿ ಕೇಯ್ಲನ್ ವಾರ್ಡ್ ಜ. 4ರಂದು, ದೇಣಿಗೆದಾರರಿಗೆ ಕನಿಷ್ಠ $10 ದೇಣಿಗೆ ನೀಡುವ ಪ್ರತಿಯೊಬ್ಬರಿಗೂ ತಮ್ಮ ನಗ್ನ ಚಿತ್ರಗಳನ್ನು ಕಳುಹಿಸುವುದಾಗಿ ಪ್ರಕಟಿಸಿದ್ದರು.

ಕನಿಷ್ಠ $10 ದೇಣಿಗೆ ನೀಡಿ, ನಗ್ನ ಚಿತ್ರ ಪಡೆಯಿರಿ!

ಕನಿಷ್ಠ $10 ದೇಣಿಗೆ ನೀಡಿ, ನಗ್ನ ಚಿತ್ರ ಪಡೆಯಿರಿ!

'ಆಸ್ಟ್ರೇಲಿಯಾವನ್ನು ಕಾಡುತ್ತಿರುವ ಕಾಳ್ಗಿಚ್ಚಿಗಾಗಿ ದೇಣಿಗೆ ಸಂಗ್ರಹಿಸುತ್ತಿರುವ ಈ ಯಾರಿಗಾದರೂ ಕನಿಷ್ಠ $10 ದೇಣಿಗೆ ನೀಡಿದ ಪ್ರತಿ ವ್ಯಕ್ತಿಗೂ ನಾನು ನನ್ನ ನಗ್ನ ಚಿತ್ರಗಳನ್ನು ಕಳಿಸುತ್ತೇನೆ. ನೀವು ದೇಣಿಗೆ ನೀಡುವ ಪ್ರತಿ $10ಗೆ ಒಂದು ನಗ್ನ ಚಿತ್ರವನ್ನು ನಿಮಗೆ ನೇರ ಸಂದೇಶದ (ಡೈರೆಕ್ಟ್ ಮೆಸೇಜ್) ಮೂಲಕ ಕಳಿಸುತ್ತೇನೆ. ನೀವು ದೇಣಿಗೆ ನೀಡಿದ್ದಕ್ಕೆ ಖಾತರಿಯನ್ನು ನನಗೆ ನೀಡುವುದು ಅಗತ್ಯ' ಎಂದು ಕೇಯ್ಲನ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೋಟಿಗಟ್ಟಲೆ ಹಣ ಸಂಗ್ರಹ

ಕೋಟಿಗಟ್ಟಲೆ ಹಣ ಸಂಗ್ರಹ

ಕೇಯ್ಲನ್ ಮಾಡಿರುವ ಮನವಿ ಮತ್ತು ಆಮಿಷಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೇ ದಿನಗಳಲ್ಲಿ 700 ಸಾವಿರ ಡಾಲರ್ ಹಣ ಸಂಗ್ರಹವಾಗಿದೆ. ಅದನ್ನು ಅವರು ಸೋಮವಾರದ ಟ್ವೀಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. 'ನನ್ನ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗಾಗಿ ಅಂದಾಜು $700k ಸಂಗ್ರಹವಾಗಿದೆ. ಇದು ನಿಜಕ್ಕೂ ಸತ್ಯವೇ?' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಿಡ್ನಿ ತಾಪಮಾನ ವಿಶ್ವದಲ್ಲೇ ಅಧಿಕ: ದಾಖಲೆ ಪ್ರಮಾಣದ ಉಷ್ಣಾಂಶಸಿಡ್ನಿ ತಾಪಮಾನ ವಿಶ್ವದಲ್ಲೇ ಅಧಿಕ: ದಾಖಲೆ ಪ್ರಮಾಣದ ಉಷ್ಣಾಂಶ

ಇನ್‌ಸ್ಟಾಗ್ರಾಂ ಖಾತೆ ನಿಷ್ಕ್ರಿಯ

ಇನ್‌ಸ್ಟಾಗ್ರಾಂ ಖಾತೆ ನಿಷ್ಕ್ರಿಯ

ಆದರೆ ಕೇಯ್ಲನ್ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳನ್ನು ಅವರ ಖಾತೆಯನ್ನು ಕಂಪೆನಿ ನಿಷ್ಕ್ರಿಯಗೊಳಿಸಿದೆ. ಅದರ ನಂತರ ಅವರು ಇನ್ನೊಂದು ಇನ್‌ಸ್ಟಾಗ್ರಾಂ ಪ್ರೊಫೈಲ್ ಸಿದ್ಧಪಡಿಸಿದರೂ, ಅದನ್ನೂ ಕೂಡ ಕಂಪೆನಿ ನಿಷ್ಕ್ರಿಯಗೊಳಿಸಿದೆ.

'ನನ್ನ ಇನ್‌ಸ್ಟಾಗ್ರಾಂ ನಿಷ್ಕ್ರಿಯಗೊಂಡಿದೆ. ನನ್ನ ಕುಟುಂಬ ನನ್ನನ್ನು ದೂರಮಾಡಿದೆ. ನನ್ನ ಆ ಟ್ವೀಟ್ ಕಾರಣಕ್ಕೆ ನಾನು ಇಷ್ಟಪಡುವ ಹುಡುಗ ನನ್ನೊಂದಿಗೆ ಮಾತನಾಡುತ್ತಿಲ್ಲ. ಆದರೆ ಹಾಳಾಗಿ ಹೋಗಲಿ, ಕೋಲಾ ಪ್ರಾಣಿಗಳನ್ನು ಕಾಪಾಡಿ' ಎಂದು ಟ್ವೀಟ್ ಮಾಡಿದ್ದಾರೆ.

ಹಣ ಸಂಪಾದನೆ ಆರೋಪಕ್ಕೆ ಸ್ಪಷ್ಟನೆ

ಹಣ ಸಂಪಾದನೆ ಆರೋಪಕ್ಕೆ ಸ್ಪಷ್ಟನೆ

ಕಾಯ್ಲೆನ್ ಅವರು ದೇಣಿಗೆ ಸಂಗ್ರಹದ ನೆಪದಲ್ಲಿ ತಾವೂ ಹಣ ಸಂಪಾದಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಗಳಿಗೆ ಅವರು ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 'ನಾನು ಸ್ವಲ್ಪ ಹಣ ಕಬಳಿಸಿದ್ದೇನೆ ಎಂದು ಆರೋಪಿಸುವ ಎಲ್ಲರಿಗಾಗಿ, ನಾನು ಆ ರೀತಿ ಮಾಡಲು ಸಾಧ್ಯವೇ ಇಲ್ಲ ಮತ್ತು ನಾನು ಮಾಡುವುದೂ ಇಲ್ಲ. ದೇಣಿಗೆ ನೀಡಿದ ಪ್ರತಿಯೊಬ್ಬರೂ ತಮ್ಮ ಆಯ್ಕೆಯ ದೇಣಿಗೆದಾರ ಸಂಸ್ಥೆ ಅಥವಾ ದತ್ತಿಗೆ ಹಣ ಕಳುಹಿಸಿದ್ದಾರೆ ಮತ್ತು ನನಗೆ ಅದನ್ನು ದೃಢಪಡಿಸುವ ದಾಖಲೆ ಮಾತ್ರ ಕಳಿಸಿದ್ದಾರೆ' ಎಂದು ವಿವರಿಸಿದ್ದಾರೆ. ಕಾಯ್ಲೆನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗಿದೆ.

ಅರಣ್ಯವೆಲ್ಲ ಹೊತ್ತಿ ಉರಿಯುತ್ತಿದೆ, ಆ ದೇಶದ ಪ್ರಧಾನಿ ಭಾರತಕ್ಕೆ ಬರಲ್ಲಅರಣ್ಯವೆಲ್ಲ ಹೊತ್ತಿ ಉರಿಯುತ್ತಿದೆ, ಆ ದೇಶದ ಪ್ರಧಾನಿ ಭಾರತಕ್ಕೆ ಬರಲ್ಲ

ಮಳೆ ಬಂದರೂ ಬೆಂಕಿ ನಿಂತಿಲ್ಲ

ಮಳೆ ಬಂದರೂ ಬೆಂಕಿ ನಿಂತಿಲ್ಲ

ಆಸ್ಟ್ರೇಲಿಯಾದ ಕಾಳ್ಗಿಚ್ಚಿನಿಂದ ಸುಮಾರು 480 ಮಿಲಿಯನ್ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಬೆಂಕಿಯ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 20ಕ್ಕೆ ತಲುಪಿದೆ. ಸಿಡ್ನಿಯಿಂದ ಮೆಲ್ಬರ್ನ್‌ವರೆಗಿನ ಪೂರ್ವ ಕರಾವಳಿಯಲ್ಲಿ ಹಾಗೂ ನ್ಯೂ ಸೌತ್‌ ವೇಲ್ಸ್‌ನ ವಿವಿಧೆಡೆ ಭಾನುವಾರ ಕೊಂಚ ಮಳೆ ಸುರಿದಿರುವುದು ಸಮಾಧಾನ ತಂದಿದೆ. ಇದರಿಂದ ಉಷ್ಣತೆ ತುಸು ತಗ್ಗಿದೆ. ಆದರೆ ಗುರುವಾರದ ವೇಳೆಗೆ ತಾಪಮಾನ ಮತ್ತಷ್ಟು ಹೆಚ್ಚಲಿದ್ದು ಅಪಾಯ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ವಿಕ್ಟೋರಿಯಾ ಹಾಗೂ ನ್ಯೂ ಸೌತ್‌ವೇಲ್ಸ್‌ನಲ್ಲಿ ಭಾರಿ ಜ್ವಾಲೆಗಳು ಏಳಲಿದ್ದು, ಗಾಳಿಯ ಕಾರಣದಿಂದ ಇದು ಅನಾಹುತ ಸೃಷ್ಟಿಸಲಿದೆ ಎಂದು ಎಚ್ಚರಿಸಲಾಗಿದೆ.

English summary
US based model Kaylen Ward is sending her nude photos who donates at least $10 to anyone of fundrisers for the wildfires in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X