ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಣಗಳಿಲ್ಲದಿದ್ದರೂ ಕೊರೊನಾ ಪಾಸಿಟಿವ್: ಇಂಥವರಿಂದ ಸೋಂಕು ಹರಡಲ್ಲ

|
Google Oneindia Kannada News

ವಾಷಿಂಗ್ಟನ್, ಜೂನ್ 9: ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿರುವ ರೋಗಿಗಳಿಂದ ವೈರಸ್ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಅದಕ್ಕೆ ಸಾಕ್ಷ್ಯ ಕೊಡಿ ಎಂದು ತಜ್ಞರು ಪ್ರಶ್ನೆ ಮಾಡಿದ್ದಾರೆ.

ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಸೋಂಕಿಗೆ ಗುರಿಯಾಗಿರುವ ರೋಗಿಗಳಿಂದ ಸೋಂಕು ಹರಡುವ ಪ್ರಮಾಣ ಕಡಿಮೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೊನಾ ವೈರಸ್ ಬಗ್ಗೆ ಇಡೀ ವಿಶ್ವಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ WHOಕೊರೊನಾ ವೈರಸ್ ಬಗ್ಗೆ ಇಡೀ ವಿಶ್ವಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ WHO

ವಿಶ್ವದಾದ್ಯಂತ 70 ಲಕ್ಷ ಮಂದಿ ಕೊರೊನಾ ಸೋಂಕಿತರಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.ಸರ್ಕಾರವು ಈಗಾಗಲೇ ಕೊರೊನಾ ವೈರಸ್ ಲಕ್ಷಣ ಇರುವವರ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ನಿಗಾ ವಹಿಸಬೇಕು.

ಕೊರೊನಾ ಲಕ್ಷಣವಿಲ್ಲದಿದ್ದರೂ ಪಾಸಿಟಿವ್ ಬಂದರೆ ಭಯ ಪಡಬೇಡಿ

ಕೊರೊನಾ ಲಕ್ಷಣವಿಲ್ಲದಿದ್ದರೂ ಪಾಸಿಟಿವ್ ಬಂದರೆ ಭಯ ಪಡಬೇಡಿ

ಬಹಳಷ್ಟು ದೇಶಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ವರದಿಯಲ್ಲಿ ಪಾಸಿಟಿವ್ ಬರುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಆದರೆ ಕೊರೊನಾ ಲಕ್ಷಣಗಳಿಲ್ಲದವರು ಬೇರೆಯವರಿಗೆ ಸೋಂಕು ಹರಡುವ ಪ್ರಮಾಣ ಕಡಿಮೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಕ್ನಿಕಲ್ ಲೀಡ್ ಡಾ. ಮಾರಿಯಾ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದ ವರದಿಯಲ್ಲೇನಿತ್ತು

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದ ವರದಿಯಲ್ಲೇನಿತ್ತು

ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 5 ರಂದು ವರದಿಯೊಂದನ್ನು ಬಿಡುಗಡೆ ಮಾಡಿತ್ತು, ಅದರಲ್ಲಿ ಲಕ್ಷಣಗಳಿಲ್ಲದ ಕೊರೊನಾ ಸೊಂಖಿತರಿಂದ ಮತ್ತೊಬ್ಬರಿಗೆ ಕೊರೊನಾ ವೈರಸ್ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಬರೆಯಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಈ ವರದಿಯಿಂದ ಈ ಹಿಂದಿನ ಕೆಲವು ನಂಬಿಕೆಗಳು ಸುಳ್ಳಾಗಲಿವೆ.

ಸೋಂಕಿನ ಲಕ್ಷಣಗಳಿಲ್ಲದಿರುವವರಿಗೆ ಚಿಕಿತ್ಸೆಯೂ ಕಷ್ಟ

ಸೋಂಕಿನ ಲಕ್ಷಣಗಳಿಲ್ಲದಿರುವವರಿಗೆ ಚಿಕಿತ್ಸೆಯೂ ಕಷ್ಟ

ಕೊರೊನಾ ಸೋಂಕಿನ ಲಕ್ಷಣಗಳಿಲ್ಲದವರಿಗೆ ಚಿಕಿತ್ಸೆ ನೀಡುವುದು ಕೂಡ ಕಷ್ಟ. ಇದೀಗ ಕೊರೊನಾ ಸೋಂಕು ಇರುವವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಲಕ್ಷಣ ಇಲ್ಲದೆ ಸೋಂಕಿಗೆ ತುತ್ತಾದವರಿಗೆ ಚಿಕಿತ್ಸೆ ನೀಡುವುದು ನಿಜವಾಗಿಯೂ ಕಷ್ಟದ ಕೆಲಸ ಎಂದು ವೈದ್ಯರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಸಾಕ್ಷ್ಯ ನೀಡಲಿ

ವಿಶ್ವ ಆರೋಗ್ಯ ಸಂಸ್ಥೆ ಸಾಕ್ಷ್ಯ ನೀಡಲಿ

ಲಕ್ಷಣಗಳಿಲ್ಲದಿರುವ ಕೊರೊನಾ ಸೋಂಕಿತರಿಂದ ವೈರಸ್ ಹರಡುವುದಿಲ್ಲ ಎಂಬುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಾಕ್ಷ್ಯ ನೀಡಲಿ. ಆದರೆ ಕೊರೊನಾ ಲಕ್ಷಣ ಇಲ್ಲದಿರುವ ಸೋಂಕಿತರಿಂದ, ಲಕ್ಷಣ ವಿರುವ ಸೋಂಕಿತರಿಬ್ಬರಿಂದಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ನಾವು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ, ಏಕೆಂದರೆ ಅವರು ನಡೆಸಿರುವ ಅಧ್ಯಯನವನ್ನು ನಾವು ನೋಡಿಲ್ಲ ಎಂದು ಡಾ. ಹೆನಲೈಸ್ ಹೇಳಿದ್ದಾರೆ.

English summary
A scientist from the World Health Organisation (WHO) Monday said that asymptomatic transmission of coronavirus was not a significant factor in the spread of the virus, leaving experts confused
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X