• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಕಾಶದಿಂದ ಬೀಳಲಿದೆ ಮತ, ನಾಸಾ ವಿಜ್ಞಾನಿಗೂ ವೋಟಿಂಗ್ ಪವರ್..!

|

ಜಸ್ಟ್ 32 ದಿನಗಳಷ್ಟೇ, ಈ 32 ದಿನಗಳ ನಂತರ ವಿಶ್ವದ ಶಕ್ತಿಶಾಲಿ ದೇಶದ ಓರ್ವ ಪವರ್‌ಫುಲ್ ನಾಯಕನ ಹಣೆಬರಹ ನಿರ್ಧಾರವಾಗಲಿದೆ. ಅಂದಹಾಗೆ ವಿಶ್ವದ ಪಾಲಿಗೆ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು, ಇಡೀ ಜಗತ್ತಿನ ಗಮನ ಅಮೆರಿಕದ ಮೇಲೆಯೇ ಕೇಂದ್ರೀಕೃತವಾಗಿದೆ. ಆದರೆ ಬಾಹ್ಯಾಕಾಶ ಪ್ರಿಯರ ದೃಷ್ಟಿ ಆಕಾಶದತ್ತ ನೆಟ್ಟಿದೆ.

ಏಕೆಂದರೆ ಈ ಬಾರಿ ಭೂಮಿ ಹೊರಗಿನಿಂದಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. ಹೀಗೆ ಮತದಾನ ಮಾಡುವ ವಿಶೇಷ ಮತದಾರರು ಬೇರಾರೂ ಅಲ್ಲ, ನಾಸಾದ ಬಾಹ್ಯಾಕಾಶ ವಿಜ್ಞಾನಿ ಕೇಟ್ ರೂಬಿನ್ಸ್. ಈಗಾಗಲೇ ಒಮ್ಮೆ ಬಾಹ್ಯಾಕಾಶಕ್ಕೆ ಹೋಗಿ ಬಂದಿರುವ ಕೇಟ್ ರೂಬಿನ್ಸ್ ಅಕ್ಟೋಬರ್ 14ರಂದು ಮತ್ತೆ ಬಾಹ್ಯಾಕಾಶಕ್ಕೆ ಜಿಗಿದು, ನಕ್ಷತ್ರಗಳ ಲೋಕದಲ್ಲಿ ಕಳೆದು ಹೋಗಲಿದ್ದಾರೆ.

ಗೆದ್ದರು ಟ್ರಂಪ್, ಸೋತ ವಿರೋಧಿಗಳು; ಸುಪ್ರೀಂಗೆ ಹೊಸ ನ್ಯಾಯಾಧೀಶರ ನೇಮಕ

ಈಗಾಗಲೇ 2016ರಲ್ಲಿ ಬಾಹ್ಯಾಕಾಶಕ್ಕೆ ಹೋಗಿಬಂದಿರುವ ಕೇಟ್, ಭೂಮಿ ಬಿಟ್ಟು ಹಾರಿದ 60ನೇ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಇದೀಗ ಮತ್ತೆ ಕೇಟ್ ರೂಬಿನ್ಸ್ ಸ್ಪೇಸ್ ಟೂರ್ ಹೊರಟಿದ್ದು, ಆಕಾಶದಿಂದಲೇ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ಬಾಹ್ಯಾಕಾಶ ಮತದಾನಕ್ಕೆ ವಿಶೇಷ ವ್ಯವಸ್ಥೆ..!

ಬಾಹ್ಯಾಕಾಶ ಮತದಾನಕ್ಕೆ ವಿಶೇಷ ವ್ಯವಸ್ಥೆ..!

ಅಮೆರಿಕ ಅಧ್ಯಕ್ಷರ ಆಯ್ಕೆ ಹಾಗೂ ಅಧ್ಯಕ್ಷೀಯ ಚುನಾವಣೆ ಎಂದರೆ ಜಗತ್ತು ಅಲ್ಲೇ ಕೇಂದ್ರಿಕೃತವಾಗಿರುತ್ತದೆ. ಏಕೆಂದರೆ ಅಮೆರಿಕ ಅಧ್ಯಕ್ಷ ಎಂದರೆ ಅಷ್ಟು ಪವರ್‌ಫುಲ್. ಇಡೀ ಜಗತ್ತನ್ನೇ ಹಿಡಿತದಲ್ಲಿ ಇರಿಸಿಕೊಂಡಿರುವ ಅಮೆರಿಕ ಎಂಬ ಸಿರಿವಂತ ರಾಷ್ಟ್ರಕ್ಕೆ ಅಧ್ಯಕ್ಷನೇ ಎಲ್ಲಾ. ಅವನಿಲ್ಲದೆ ಅಮೆರಿಕದ ಆಟ ನಡೆಯೋದಿಲ್ಲ. ಹೀಗಾಗಿ ಅಮೆರಿಕ ಅಧ್ಯಕ್ಷರನ್ನು ವಿಶ್ವದ ಬಲಶಾಲಿ ವ್ಯಕ್ತಿ ಎನ್ನುವರು. ಈಗ ಇಂತಹ ಬಲಶಾಲಿ ವ್ಯಕ್ತಿ ಆಯ್ಕೆಗೆ ಭರದ ಸಿದ್ಧತೆ ಸಾಗಿದೆ.

ನಾನು ಸುಮ್ಮನೆ ಕುರ್ಚಿ ಬಿಟ್ಟು ಹೋಗಲ್ಲ: ಟ್ರಂಪ್ ವಾರ್ನಿಂಗ್..!

 ಬಾಹ್ಯಾಕಾಶದಿಂದಲೂ ವೋಟ್

ಬಾಹ್ಯಾಕಾಶದಿಂದಲೂ ವೋಟ್

ಈ ಬಾರಿ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಟ್ರಂಪ್ ಮತ್ತು ಬಿಡೆನ್ ಅಖಾಡದಲ್ಲಿ ಮುಖಾಮುಖಿ ಆಗುತ್ತಿದ್ದಾರೆ. ಇವರ ಹಣೆ ಬರಹವನ್ನು ನಿರ್ಧರಿಸಲು ಭೂಮಿ ಮೇಲಿನ ಮತದಾರರು ಮಾತ್ರ ಕಾತುರದಿಂದ ಕಾಯುತ್ತಿಲ್ಲ. ಬಾಹ್ಯಾಕಾಶದಿಂದಲೂ ವೋಟ್ ಬೀಳಲಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕೇಟ್ ರೂಬಿನ್ಸ್ ಮತ ಹಾಕಲಿದ್ದಾರೆ.

ಬಾಹ್ಯಾಕಾಶ ಮತದಾನಕ್ಕಿದೆ ಬಹುದೊಡ್ಡ ಇತಿಹಾಸ

ಬಾಹ್ಯಾಕಾಶ ಮತದಾನಕ್ಕಿದೆ ಬಹುದೊಡ್ಡ ಇತಿಹಾಸ

ಅಷ್ಟಕ್ಕೂ ಬಾಹ್ಯಾಕಾಶ ಮತದಾನ ಇಂದು, ನಿನ್ನೆಯದಲ್ಲ. ಇದಕ್ಕೆ 2 ದಶಕಗಳ ಇತಿಹಾಸ ಇದೆ. 1997ರಲ್ಲಿ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಈ ಕುರಿತಾದ ಒಂದು ಬಿಲ್ ಪಾಸ್ ಆಗಿತ್ತು. ಈ ಮಸೂದೆಯ ಮೂಲಕ ಬಾಹ್ಯಾಕಾಶ ವಿಜ್ಞಾನಿಗಳಿಗೂ ಮತದಾನದ ಹಕ್ಕು ಹಾಗೂ ಅವಕಾಶ ಕಲ್ಪಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಮಸೂದೆಯಿಂದ ರಷ್ಯಾ ಬಾಹ್ಯಾಕಾಶ ನಿಲ್ದಾಣದಿಂದ ನಾಸಾ ವಿಜ್ಞಾನಿ ಡೇವಿಡ್ ವುಲ್ಫ್ ವೋಟ್ ಮಾಡಲು ಸಾಧ್ಯವಾಗಿತ್ತು. ಹೀಗೆ ಬಾಹ್ಯಾಕಾಶದಿಂದ ಮೊದಲ ಬಾರಿ ಮತದಾನ ಮಾಡಿದ ವ್ಯಕ್ತಿ ಎಂಬ ಕೀರ್ತಿ ಡೇವಿಡ್ ವುಲ್ಫ್ ಅವರಿಗೆ ಸಲ್ಲುತ್ತದೆ. ಇದೀಗ ಮತ್ತೊಬ್ಬ ಬಾಹ್ಯಾಕಾಶ ವಿಜ್ಞಾನಿ ಈ ಪಟ್ಟಿಗೆ ಸೇರಲಿದ್ದಾರೆ.

ಗಾಂಧಿ ಪ್ರತಿಮೆಗೆ ಹಾನಿ ಮಾಡಿದವರು ಕೊಲೆಗಡುಕರು: ಟ್ರಂಪ್

ಬಾಹ್ಯಾಕಾಶ ಮತಕ್ಕೂ ಅರ್ಜಿ ಕಡ್ಡಾಯ..!

ಬಾಹ್ಯಾಕಾಶ ಮತಕ್ಕೂ ಅರ್ಜಿ ಕಡ್ಡಾಯ..!

ನೆಲದಿಂದ ಸುಮಾರು 200 ಮೈಲಿ ದೂರದಲ್ಲಿ, 17 ಸಾವಿರ ಮೈಲು ವೇಗದಲ್ಲಿ ಭೂಮಿ ಸುತ್ತಲೂ ಸುತ್ತುವ ಈ ಐಎಸ್‌ಎಸ್(ISS) ಅಂದರೆ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್ ಅಥವಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮತ ಹಾಕುವುದು ಸುಲಭದ ವಿಷಯವಲ್ಲ. ಇದಕ್ಕಾಗಿ ಭಾರಿ ತಯಾರಿ ನಡೆದಿರಬೇಕು. ಹೀಗೆ ಮತ ಹಾಕುವ ವಿಜ್ಞಾನಿ ಮೊದಲು ಫೆಡರಲ್ ಪೋಸ್ಟ್‌ಕಾರ್ಡ್ ಅಪ್ಲಿಕೇಶನ್ ಪಡೆಯಬೇಕು. ಅರ್ಜಿ ತುಂಬಿದ ನಂತರ ಆ ವಿಜ್ಞಾನಿಗಾಗಿ ವೋಟಿಂಗ್ ತಂತ್ರಾಂಶದ ಸಾಫ್ಟ್‌ವೇರ್ ಬಾಹ್ಯಾಕಾಶ ನಿಲ್ದಾಣದ ಕಂಪ್ಯೂಟರ್‌ಗೆ ಅಪ್ಲೋಡ್ ಆಗುತ್ತದೆ. ನಂತರ ವಿಜ್ಞಾನಿ ಮತಚಲಾಯಿಸುವ ಮೂಲಕ ತಮ್ಮ ಹಕ್ಕು ಪ್ರತಿಪಾದಿಸಲಿದ್ದಾರೆ.

ಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನ

English summary
Astronauts will also cast their votes from International Space Station. NASA Kate Rubins will cast her vote to US presidential election from ISS on November 3 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X