• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೂಮಿಯ ಸಮೀಪದಲ್ಲಿ ಹಾದು ಹೋಗಲಿದೆ ಕ್ಷುದ್ರಗ್ರಹ

|

ವಾಷಿಂಗ್ಟನ್, ಅಕ್ಟೋಬರ್ 6: ಕ್ಷುದ್ರಗ್ರಹವೊಂದು ಬುಧವಾರ ಭೂಮಿಯ ಕಕ್ಷೆಯನ್ನು ಹಾದು ಹೋಗುವ ಸಾಧ್ಯತೆ ಇದೆ. 2020 ಆರ್‌ಕೆ2 ಎಂಬ ಹೆಸರಿನ ಕ್ಷುದ್ರಗ್ರಹವು ಭೂಮಿಯ ಕಕ್ಷೆಯನ್ನು ಹಾದುಹೋಗುವ ಸಂಭವ ಇದೆ. ಆದರೆ ಇದು ನಮ್ಮ ಗ್ರಹದಿಂದ ಸುಮಾರು 2,380,000 ಮೈಲುಗಳಷ್ಟು ದೂರದಲ್ಲಿ ಸಾಗುವುದರಿಂದ ಭೂಮಿಗೆ ಯಾವುದೇ ಅಪಾಯವಾಗುವುದಿಲ್ಲ ಎಂದು ನಾಸಾದ ಕ್ಷುದ್ರಗ್ರಹ ನಿಗಾ ಕೇಂದ್ರ ತಿಳಿಸಿದೆ.

ಭೂಮಿಯ ಕಕ್ಷೆಯೊಳಗೆ ಕಳೆದ ಎರಡು ವಾರಗಳಲ್ಲಿ ಪ್ರವೇಶಿಸುತ್ತಿರುವ ಎರಡನೆಯ ಕ್ಷುದ್ರಗ್ರಹ ಇದಾಗಿದೆ. ಸೆ. 24ರಂದು ಕ್ಷುದ್ರಗ್ರಹವು ಭೂಮಿಯ ಮೇಲ್ಮೈನ 13,000 ಮೈಲುಗಳಷ್ಟು ದೂರದಲ್ಲಿ ಸಾಗಿತ್ತು.

ಕಲ್ಪನಾ ಚಾವ್ಲಾ ಹೆಸರಿನ 'ಸಿಗ್ನಸ್‌' ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದ ನಾಸಾ

2020 ಆರ್‌ಕೆ 2 ಕ್ಷುದ್ರಗ್ರಹದ ಚಲನೆಯನ್ನು ನಾಸಾ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದು ಬೋಯಿಂಗ್-747 ವಿಮಾನದ ಗಾತ್ರದಷ್ಟು ದೊಡ್ಡದಿದೆ. ಅಕ್ಟೋಬರ್ 7ರಂದು ಈ ಕ್ಷುದ್ರಗ್ರಹವು ಭೂಮಿಯ ಕಕ್ಷೆಗೆ ಅಪ್ಪಳಿಸುವ ಪಥದಲ್ಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಕೇಂದ್ರ ನಿಯರ್ ಅರ್ಥ್ ಆಬ್ಜೆಕ್ಟ್ಸ್ (ಎನ್‌ಇಒ) ಹೇಳಿದೆ. ಕಳೆದ ತಿಂಗಳು ಈ ಕ್ಷುದ್ರಗ್ರಹವನ್ನು ಗುರುತಿಸಿದ್ದಾಗಿ ನಾಸಾದ ಖಗೋಳ ತಜ್ಞರು ಹೇಳಿದ್ದಾರೆ.

ಚೀನಾ ಕಣ್ಣು ಬಾಹ್ಯಾಕಾಶದ ಮೇಲೆ, ಮೈನಿಂಗ್‌ಗೆ ಸಿದ್ಧವಾಯ್ತು 'ರೋಬೋಟ್'

ಈ ಕ್ಷುದ್ರಗ್ರಹವು ಸುಮಾರು 118 ರಿಂದ 265 ಅಡಿ ಅಗಲವಿದೆ. ಸೆಕೆಂಡಿಗೆ ಅಂದಾಜು 6.68 ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ. 2020 ಆರ್‌ಕೆ2 ಭೂಮಿಯನ್ನು ಬಹಳ ದೂರದಿಂದ ಸಾಗಿ ಹೋಗಲಿದೆ ಎಂದು ನಾಸಾ ಅಂದಾಜಿಸಿದೆ. ಇದು ಆಕಾಶ ವೀಕ್ಷಕರಿಗೆ ಕಾಣಿಸುವುದು ಸಹ ಕಷ್ಟಕರ ಎಂದು ಅಭಿಪ್ರಾಯಪಟ್ಟಿದೆ.

ಭೂಮಿಯ ಸಮೀಪ ಬರಲಿದೆ ಬೃಹತ್ ಕ್ಷುದ್ರಗ್ರಹ: ಏನಿದರ ವಿಶೇಷ? ಇಲ್ಲಿದೆ ವಿವರ

ಈ ಒಂದು ಕ್ಷುದ್ರಗ್ರಹ ಮಾತ್ರವಲ್ಲ, ಸುಮಾರು ಐದು ಕ್ಷುದ್ರಗ್ರಹಗಳು ಗುರುವಾರದ ವೇಳೆಗೆ ಭೂಮಿಯನ್ನು ಹಾದುಹೋಗುವ ಸಂಭವವಿದೆ. 26 ಮೀಟರ್ ವ್ಯಾಸ ಹೊಂದಿರುವ ಮತ್ತೊಂದು ಕ್ಷುದ್ರಗ್ರಹ 2020 ಆರ್‌ಆರ್‌2 ಭೂಮಿಯಿಂದ 6.2 ಮಿಲಿಯನ್ ಕಿ.ಮೀ. ಸುರಕ್ಷಿತ ದೂರದಲ್ಲಿ ಸಾಗಲಿದೆ.

English summary
Asteroid, the size of a Boeing-747, may collide with Earth's orbit on October 7: NASA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X